402 ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್  ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

402 ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 402 ಖಾಲಿ ಹುದ್ದೆಗಳ ನೇರ ನೇಮಕಾತಿ ಸಂಬಂಧ, ಲಿಖಿತ ಪರೀಕ್ಷೆಯನ್ನು ನಡೆಸಲು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೇಳಾಪಟ್ಟಿ ಬಿಡುಗಡೆ ಮಾಡಿದೆ. 

2021ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಹುದ್ದೆಗಳು ಇವಾಗಿವೆ. ಪ್ರಸ್ತುತ ಈ ಹುದ್ದೆಗೆ ಅರ್ಜಿ ಹಾಕಿರುವವರಿಗೆ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಕೆಇಎ ಪ್ರಕಟಣೆ ಪ್ರಕಾರ 402 ಪಿಎಸ್‌ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ದಿನಾಂಕ 08-05-2024 ರಂದು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ.

ಈ ವೇಳಾಪಟ್ಟಿಗೆ ಯಾವುದೇ ಆಕ್ಷೇಪಣೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಎದುರಾಗದಿದ್ದಲ್ಲಿ ಇದೇ ದಿನಾಂಕದಂದು ಪರೀಕ್ಷೆ ನಡೆಯಲಿದೆ. ಇಲ್ಲವಾದಲ್ಲಿ ಮುಂದೂಡುವ ಅವಕಾಶ ಇರುತ್ತದೆ.

ಸಿವಿಲ್ ಪಿಎಸ್‌ಐ ಹುದ್ದೆಗೆ ಲಿಖಿತ ಪರೀಕ್ಷೆ ವಿಧಾನ

ಸಹಿಷ್ಣುತೆ ಪರೀಕ್ಷೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹಗೊಂಡವರಿಗೆ ಮಾತ್ರ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಲಿಖಿತ ಪರೀಕ್ಷೆಯು ಪದವಿ ಮಟ್ಟದ ವಿಷಯಗಳ ಕುರಿತ ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಕೆಳಗಿನ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಪ್ರಶ್ನೆ ಪತ್ರಿಕೆ -1 : - 50 ಅಂಕಗಳ ಪ್ರಶ್ನೆ ಇದಾಗಿದೆ.

ಪ್ರಬಂಧ ಬರಹ, ಸಾರಾಂಶ ಬರಹ, ಭಾಷಾಂತರ ಪ್ರಶ್ನೆಗಳು ಇರುತ್ತವೆ.

ಪ್ರಬಂಧ ಬರಹದಲ್ಲಿ 600 ಶಬ್ದಗಳ ಮಿತಿಯನ್ನು ಮೀರಬಾರದು.

ಈ ಪರೀಕ್ಷೆಯ ಅವಧಿ 1-30 ಗಂಟೆ.

- ಪ್ರಬಂಧ 20 ಅಂಕಗಳಿಗೆ, ಸಾರಾಂಶ 10 ಅಂಕಗಳಿಗೆ, ಕನ್ನಡದಿಂದ ಇಂಗ್ಲೀಷ್‌ಗೆ ಮತ್ತು ಇಂಗ್ಲೀಷ್‌ನಿಂದ ಕನ್ನಡ ಭಾಷಾಂತರಕ್ಕೆ 20 ಅಂಕಗಳಿಗೆ.

- ಇದರಲ್ಲಿ ಕನಿಷ್ಠ ಪಾಸ್‌ ಅಂಕಗಳು ಇರುವುದಿಲ್ಲ.

ಪ್ರಶ್ನೆ ಪತ್ರಿಕೆ 2 : ಪರೀಕ್ಷೆಯ ಅವಧಿ 1-30 ಗಂಟೆ

- ಈ ಪ್ರಶ್ನೆ ಪತ್ರಿಕೆಯೂ ಕನ್ನಡ ಮತ್ತು ಇಂಗ್ಲೀಷ್‌ ಮಾಧ್ಯಮದಲ್ಲಿರುತ್ತದೆ.

- 150 ಅಂಕಗಳಿಗೆ ವಸ್ತುನಿಷ್ಟ (Objective) ಮಾದರಿಯದಾಗಿದ್ದು, ಬಹುವಿಧ ಆಯ್ಕೆ ಉತ್ತರಗಳ ಲಿಖಿತ ಪರೀಕ್ಷೆ ಇರುತ್ತದೆ.

- ಈ ಪ್ರಶ್ನೆ ಪತ್ರಿಕೆಯಲ್ಲಿ ವ್ಯಕ್ತಿಯ ಮಾನಸಿಕ ಸಾಮಾರ್ಥ್ಯವನ್ನು ಅಳೆಯಲಾಗುವುದು.

- ಪ್ರತಿ ತಪ್ಪು ಉತ್ತರಕ್ಕೆ ಶೇ.25 ಅಂಕಗಳನ್ನು ಕಳೆಯಲಾಗುತ್ತದೆ.

ಅಭ್ಯರ್ಥಿಗಳು ಈ 2 ಪರೀಕ್ಷೆಗಳಿಗೂ ಕಡ್ಡಾಯವಾಗಿ ಹಾಜರಾಗಬೇಕು.

Ads on article

Advertise in articles 1

advertising articles 2

Advertise under the article