ಹೆಚ್ಚುತ್ತಿರುವ ಬಿಸಿಲಿಗೆ ತತ್ತರಿಸಿದ ಬಳ್ಳಾರಿ; 10 ವರ್ಷದೊಳಗಿನ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

ಹೆಚ್ಚುತ್ತಿರುವ ಬಿಸಿಲಿಗೆ ತತ್ತರಿಸಿದ ಬಳ್ಳಾರಿ; 10 ವರ್ಷದೊಳಗಿನ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

ಬಳ್ಳಾರಿ: ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಮಧ್ಯೆ ತೀವ್ರ ಬಿಸಿಲಿನ ಝಳಕ್ಕೆ ಬಳ್ಳಾರಿ ಜಿಲ್ಲೆ ತತ್ತರಿಸಿ ಹೋಗಿದೆ. ಕಳೆದ ಎರಡು ದಿನಗಳಲ್ಲಿ 10 ವರ್ಷದೊಳಗಿನ 20ಕ್ಕೂ ಹೆಚ್ಚು ಮಕ್ಕಳು ಬಿಸಿ ಗಾಳಿಯ ತೀವ್ರತೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ಕಂಡು ಬರುತ್ತಿದೆ.

ಈ ವರ್ಷ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಹವಾಮಾನ ಇಲಾಖೆಯು ಕಳೆದ ವಾರ, ಬರದಿಂದಾಗಿ ತೀವ್ರ ಬಿಸಿಲ ಧಗೆ ಕಂಡುಬರುತ್ತಿರುವ ಬಳ್ಳಾರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಬಿಸಿಗಾಳಿಯ ಎಚ್ಚರಿಕೆ ನೀಡಿತ್ತು.

ಕಲಬುರಗಿ: ಬಿಸಿಲ ಝಳಕ್ಕೆ ಬಸವಳಿದ ಜನರು, 40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ

ಬಳ್ಳಾರಿ ಜಿಲ್ಲಾಡಳಿತವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ನಾಗರಿಕರು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ ಯಾವುದೇ ರಕ್ಷಣೆಯಿಲ್ಲದೆ ನೇರ ಸೂರ್ಯನ ಬೆಳಕಿನಲ್ಲಿ ಹೊರಬರದಂತೆ ವಿನಂತಿಸಲಾಗಿದೆ.

Ads on article

Advertise in articles 1

advertising articles 2

Advertise under the article