ಏಪ್ರಿಲ್ 7ರಂದು ಮುಂಬೈಯಲ್ಲಿ "ಮಹಾಸಮಾಗಮ"; ಕೋಟಾ-ಚೌಟ ಪರ ಚುನಾವಣಾ ಪ್ರಚಾರ
Friday, April 5, 2024
ಉಡುಪಿ: ಈ ಬಾರಿಯ ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದ್ದಂತೆ ಬಿಜೆಪಿಯ ಪ್ರಚಾರ ಕೂಡಾ ಬಲು ಜೋರಾಗಿದೆ. ಉಡುಪಿ-ಚಿಕ್ಕಮಗಳೂರು ಹಾಗು ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಮುಂಬೈಯಲ್ಲಿ ಮತ ಪ್ರಚಾರ ಕಾರ್ಯ ಆಯೋಜಿಸಲಾಗಿದೆ.
ಏಪ್ರಿಲ್ 7 ರ ರವಿವಾರದಂದು ಸಂಜೆ 5 ಗಂಟೆಗೆ ಮುಂಬೈಯ ಥಾಣೆಯ ಪಂಚ್ ಪಖಾಡಿ ಪೊಖರನ್ ರಸ್ತೆಯ ರೇಮಂಡ್ ಗ್ರೌಂಡ್ ನಲ್ಲಿ ಉಡುಪಿ-ಚಿಕ್ಕಮಗಳೂರು ಹಾಗು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನರ "ಮಹಾಸಮಾಗಮ" ಕಾರ್ಯಕ್ರಮ ನಡೆಯಲಿದೆ.
ಮುಂಬೈಯಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರ ಮುಂದೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗು ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಚುನಾವಣಾ ಪ್ರಚಾರ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಸೇರಿದಂತೆ ಹಲವು ನಾಯಕರು, ಮುಖಂಡರು ಭಾಗವಹಿಸಲಿದ್ದಾರೆ.