ಹೇಳಿಕೊಳ್ಳಲು ತಮ್ಮ ಯಾವುದೇ ಸಾಧನೆಯಿಲ್ಲದ ಕಾರಣ ಮೋದಿ ಯಾವಾಗಲೂ ಗಾಂಧಿ ಕುಟುಂಬವನ್ನು ನಿಂದಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಹೇಳಿಕೊಳ್ಳಲು ತಮ್ಮ ಯಾವುದೇ ಸಾಧನೆಯಿಲ್ಲದ ಕಾರಣ ಮೋದಿ ಯಾವಾಗಲೂ ಗಾಂಧಿ ಕುಟುಂಬವನ್ನು ನಿಂದಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಗುರುಮಠಕಲ್: ಹೇಳಿಕೊಳ್ಳಲು ತಮ್ಮ ಯಾವುದೇ ಸಾಧನೆಯಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಗಾಂಧಿ ಕುಟುಂಬವನ್ನು ನಿಂದಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈಗ ನಡೆದಿರುವ ಲೋಕಸಭೆ ಚುನಾವಣೆಯ ಎರಡು ಹಂತಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ, ಇದು ಮೋದಿಯನ್ನು ಚಿಂತೆಗೀಡು ಮಾಡಿದೆ ಎಂದರು.

ಮೇ 7 ರಂದು ಚುನಾವಣೆ ನಡೆಯಲಿರುವ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಗುರುಮಿಠಕಲ್ ಈ ಕ್ಷೇತ್ರದ ಭಾಗವಾಗಿದೆ.

'ಮೋದಿ ಈ ದೇಶದಲ್ಲಿ ಹುಟ್ಟುವ ಮೊದಲು ಮತ್ತು ನಂತರ ಏನಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಅವರು ಇಂದಿಗೂ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ನನ್ನನ್ನು ಸೇರಿ ನಿಂದಿಸುತ್ತಿದ್ದಾರೆ. ಏಕೆಂದರೆ, ಅವರಿಗೆ ಹೇಳಿಕೊಳ್ಳಲು ಏನೂ ಇಲ್ಲ' ಎಂದು ಅವರು ಹೇಳಿದರು.

'ಕಾಂಗ್ರೆಸ್ ಪ್ರತಿಯೊಬ್ಬರ ಆಸ್ತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ಹಂಚುತ್ತದೆ ಎಂದು ಹತಾಶೆಯಿಂದ ಮೋದಿ ಹೇಳುತ್ತಾರೆ. ಹೀಗೆಂದು ಸಂವಿಧಾನದಲ್ಲಿ ಬರೆದಿಲ್ಲ ಅಥವಾ ನಮ್ಮ ಪ್ರಣಾಳಿಕೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಬಡವರಿಗೆ ಕೊಡಬೇಕಾದ್ದೆಲ್ಲವನ್ನೂ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ, ಹಿಂದೂ-ಮುಸ್ಲಿಂ ಬಗ್ಗೆ ಯಾವತ್ತೂ ಮಾತನಾಡಿಲ್ಲ' ಎಂದು ಹೇಳಿದರು.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಭೂ ಸುಧಾರಣೆ, ಬ್ಯಾಂಕ್‌ಗಳ ರಾಷ್ಟ್ರೀಕರಣ ಮತ್ತು ಜೀವ ವಿಮಾ ನಿಗಮದ ಮೂಲಕ ತಮ್ಮ ಪಕ್ಷವು ಕೆಲಸ ಮಾಡಿದೆ. ಇದೆಲ್ಲವನ್ನೂ ಬಡವರಿಗಾಗಿ ಮಾಡಲಾಗಿದೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಎಂಎನ್‌ಆರ್‌ಇಜಿಎಸ್ (ಯುಪಿಎ ಆಡಳಿತದ ಅವಧಿಯಲ್ಲಿ) ಅನ್ನು ಜಾರಿಗೆ ತಂದರು. ಮೋದಿಯವರು ಹಾಗೆ ಮಾಡಿದ್ದೀರಾ?. ಬಡವರಿಗೆ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯ ನೀಡುವ ಆಹಾರ ಭದ್ರತಾ ಕಾಯ್ದೆಯನ್ನು ಕಾಂಗ್ರೆಸ್ ತಂದಿದೆ ಎಂದು ಸಭೆಯನ್ನುದ್ದೇಶಿಸಿ ಹೇಳಿದರು.

ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮೋದಿ ಅವರು ಐದು ಕೆಜಿ ಹೆಚ್ಚುವರಿಯಾಗಿ ನೀಡಲು ಪ್ರಾರಂಭಿಸಿದರು ಮತ್ತು ಈ ದೇಶದ 80 ಕೋಟಿ ಜನರಿಗೆ ತಾವೇ ನೀಡುತ್ತಿರುವುದಾಗಿ ಹೆಮ್ಮೆಪಡಲು ಪ್ರಾರಂಭಿಸಿದರು. ನೀವು (ಮೋದಿ) ಅದನ್ನು ನೀಡಿದ್ದೀರಿ. ಏಕೆಂದರೆ, ನಾವು ಕಾನೂನನ್ನು ತಂದಿದ್ದೇವೆ, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ನಾವು ಮಾಡಿದ ಕೆಲಸ ಎಂದರು.

ದೇಶವನ್ನು ಬಲಪಡಿಸುವುದಾಗಿ ಮೋದಿ ಹೇಳುತ್ತಾರೆ. ನಾವು ಅದನ್ನು ದುರ್ಬಲಗೊಳಿಸಲಿದ್ದೇವೆಯೇ? ಪಾಕಿಸ್ತಾನವನ್ನು ಎರಡು ಭಾಗ ಮಾಡಿದ್ದು ನಾವೇ. ನೀವು ಏನು ಮಾಡಿದ್ದೀರ?. ಮೋದಿ ತುಂಬಾ ಮಾತನಾಡುತ್ತಾರೆ. ಅವರು 56 ಇಂಚಿನ ಎದೆಯನ್ನು ಹೊಂದಿದ್ದಾರೆಂದು ಹೇಳುತ್ತಾರೆ. 56 ಇಂಚಿನ ಎದೆಯೊಂದಿಗೆ ನಾವು ಏನು ಮಾಡುತ್ತೇವೆ? ಹೊಟ್ಟೆಪಾಡಿಗಾಗಿ ಏನು ಮಾಡಿದಿರಿ ಹೇಳಿ? ಊಟಕ್ಕೆ ಏನು ಕೊಡುತ್ತಿದ್ದೀರಿ?. ಇಂದು ಬೆಲೆ ಏರಿಕೆಯು ಬಡ ಜನರನ್ನು ಚಿಂತೆಗೀಡುಮಾಡುವ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ವಾಗ್ದಾಳಿ ನಡೆಸಿದರು.

Ads on article

Advertise in articles 1

advertising articles 2

Advertise under the article