ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಪತಿ: ಮುಂದೆ ಮಾಡಿದ್ದೇನು...?
ವ್ಯಕ್ತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ. ಅಷ್ಟೇ ಅಲ್ಲ ದೇಹದ ತುಂಡುಗಳನ್ನು ವಾರಗಳವರೆಗೆ ಅಡುಗೆ ಮನೆಯಲ್ಲೇ ಇಟ್ಟುಕೊಂಡಿದ್ದ, ಇದಾದ ನಂತರ ಸ್ನೇಹಿತನಿಗೆ 5 ಸಾವಿರ ರೂ. ಕೊಟ್ಟು ಅವುಗಳನ್ನು ನದಿಗೆ ಎಸೆಯಲು ತಿಳಿಸಿದ್ದ.
28 ವರ್ಷದ ನಿಕೋಲಸ್ ಮೆಟ್ಸನ್ 26 ವರ್ಷದ ಪತ್ನಿ ಬ್ಲಾಮ್ಲಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೊದಲು ಬೆಡ್ರೂಮಿನಲ್ಲಿ ಪತ್ನಿಗೆ ಹಲವು ಬಾರಿ ಇರಿದು ಕೊಲೆ ಮಾಡಿ ಬಳಿಕ ದೇಹವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಡುಗಳನ್ನು ಹಾಕಿ ಇರಿಸಿದ್ದ.
ಘಟನೆ ನಡೆದು ಸುಮಾರು ಒಂದು ವಾರದ ಬಳಿಕ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಶವವನ್ನು ವಿಲೇವಾರಿ ಮಾಡಿದ ಮರುದಿನವೇ ವಾಕಿಂಗ್ಗೆ ತೆರಳಿದ್ದ ವ್ಯಕ್ತಿಯೊಬ್ಬರು ನದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ತೇಲುತ್ತಿರುವುದನ್ನು ನೋಡಿದ್ದರು. ಒಂದು ಬ್ಯಾಗ್ನಲ್ಲಿ ಬ್ರಾಮ್ಲಿಯ ಕೈ ಹಾಗೂ ಬೋಳಿಸಿದ ತಲೆ ಇತ್ತು. ದೇಹವನ್ನು ವಿರೂಪಗೊಳಿಸಲಾಗಿತ್ತು.
ತನ್ನ ಮಗಳಿಗೆ ಮದುವೆಯಾಗಿ ಕೇವಲ 16 ತಿಂಗಳುಗಳಾಗಿದೆ, ಈ ರಾಕ್ಷಸರು ಒಂದು ದಿನವೂ ಆಕೆಗೆ ನಮ್ಮನ್ನು ಭೇಟಿಯಾಗಲು ಅವಕಾಶ ಕೊಟ್ಟಿರಲಿಲ್ಲ. ಮಾರ್ಚ್ 24 ರಂದು ಪೊಲೀಸರು ಅವರ ಮನೆಗೆ ಹೋದಾಗ ಆತ ತನ್ನ ಹೆಂಡತಿ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಕಚ್ಚಿದ ಕಲೆಯನ್ನು ತೋರಿಸಿದ್ದ.
ಬಳಿಕ ಪೊಲೀಸರು ಬಾತ್ ಟಬ್ನಲ್ಲಿ ರಕ್ತದ ಕಲೆಗಳನ್ನು ಕಂಡಿದ್ದಾರೆ, ರೂಮಿನ ತುಂಬಾ ಅಮೋನಿಯಾ ಹಾಗೂ ಬ್ಲೀಚ್ನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಕೆಲವು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತೆಯರ ಜತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ನಂಬಿಸಲು ಪ್ರಯತ್ನಿಸಿದ್ದ, ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಸೋಮವಾರ ಹಂತಕನಿಗೆ ಶಿಕ್ಷೆಯಾಗಲಿದೆ.