ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರೇನೋ...?: ಭವ್ಯ ನರಸಿಂಹಮೂರ್ತಿ; ಮೋದಿಯಾಗಲಿ, ಬಿಜೆಪಿ ನಾಯಕರು-ನಾಯಕಿಯರು ಒಬ್ಬರಾದರೂ ಮಾತನಾಡಿದ್ದಾರಾ..?

ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರೇನೋ...?: ಭವ್ಯ ನರಸಿಂಹಮೂರ್ತಿ; ಮೋದಿಯಾಗಲಿ, ಬಿಜೆಪಿ ನಾಯಕರು-ನಾಯಕಿಯರು ಒಬ್ಬರಾದರೂ ಮಾತನಾಡಿದ್ದಾರಾ..?

ಬೆಂಗಳೂರು: ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು ಎನಿಸುತ್ತದೆ. ಈ ಕೃತ್ಯದ ಬಗ್ಗೆ ಬಿಜೆಪಿಯವರು ಸಹ ಉತ್ತರ ನೀಡಬೇಕು. ಒಬ್ಬನೇ ಒಬ್ಬ ಬಿಜೆಪಿ ನಾಯಕಿಯರು ಮಾತ್ನನೇ ಆಡಿಲ್ಲ. ನಾಯಕರು ಬಾಯಿ ಬಿಟ್ಟಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರೆ ಭವ್ಯ ನರಸಿಂಹಮೂರ್ತಿ ವಾಗ್ದಾಳಿ ನಡೆಸಿದ್ದಾರೆ.

ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.

ಹೆಣ್ಣಿಗೆ ಯಾವುದೇ ಜಾತಿ, ಧರ್ಮ ಎಂಬುದಿಲ್ಲ. ನಾವು ಹೆಣ್ಣುಮಕ್ಕಳ ಪರವಾಗಿ ಮಾತನಾಡುತ್ತೇವೆ. ಬಿಜೆಪಿಯಂತೆ ಕೇವಲ ಪಕ್ಷಪಾತಿಗಳಾಗಿ ಮಾತನಾಡುವುದಿಲ್ಲ. ನಮಗೆ ನೇಹಾ, ರುಕ್ಷನಾ ಹಾಗೂ ಈ ನೀಚ ಸಂಸದನಿಂದ ಶೋಷಣೆಗೆ ಒಳಗಾಗಿರುವ ಎಲ್ಲಾ ಹೆಣ್ಣುಮಕ್ಕಳ ಪರವಾಗಿ ನಮ್ಮದು ಒಂದೇ ಹೋರಾಟದ ದನಿ.ಪ್ರಜ್ವಲ್ ರೇವಣ್ಣ ನಡೆಸಿರುವ ಕೃತ್ಯ ಇಡೀ ದೇಶದಲ್ಲೆ ಯಾವ ಜನಪ್ರತಿನಿದಿಯೂ ನಡೆಸದ ಕೃತ್ಯ. ಶೋಷಣೆಗೆ ಒಳಗಾಗಿರುವ ಮಹಿಳೆಯರು ದನಿ ಇಲ್ಲದ ಮಹಿಳೆಯರು. ಅವರ ದನಿಯಾಗಿ ನಾವು ಇಂದು ಇಲ್ಲಿ ಸೇರಿದ್ದೇವೆ ಎಂದು ಅವರು ಹೇಳಿದರು.

ಈ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದರೆ ಮಾಧ್ಯಮಗಳ ಸಹಕಾರ ಬೇಕು. ದೇಶದ ಯಾವುದೇ ರಾಜಕಾರಣಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುವ ಕೃತ್ಯ ಈ ಘಟನೆಯಿಂದ ಹೋಗಬೇಕು. ಇಂದೇ ನಾವೆಲ್ಲ ದೊಡ್ಡ ಹೋರಾಟಕ್ಕೆ ನಾಂದಿ ಹಾಡಬೇಕು. ಇತಿಹಾಸ ಸೃಷ್ಟಿ ಮಾಡಬೇಕು.ಬಿಜೆಪಿಯ ರೇಪಿಸ್ಟ್ ರಾಜಕಾರಣಿಗಳಿಗೆ ಇದು ಪಾಠವಾಗಬೇಕು. ಹತ್ರಾಸ್ ಘಟನೆ, ಕತುವ ಘಟನೆ ನಡೆದಾಗ ಅತ್ಯಾಚಾರಿಗಳ ಪರವಾಗಿ ಬಿಜೆಪಿ ಎಂಎಲ್ ಎ ಗಳು ಮೆರವಣಿಗೆ ನಡೆಸಿದರು. ಕುಸ್ತಿ ಪಟುಗಳ ಮೇಲೆ ನಡೆದ ಕೃತ್ಯಕ್ಕೆ ಬಿಜೆಪಿಯವರೇ ಕುಮ್ಮಕ್ಕು ನೀಡಿದರು. ಒಲಂಪಿಕ್ ಪದಕ ತಂದಾಗ ಐಸ್ ಕ್ರೀಮ್ ತಿಂದು ಸೆಲ್ಫಿ ತೆಗೆದುಕೊಂಡ ಪಿಎಂ ದೌರ್ಜನ್ಯ ನಡೆದಾಗ ಮಾತೆ ಆಡಲಿಲ್ಲ ಎಂದು ಕಿಡಿ ಕಾರಿದರು.

ರೇಪಿಸ್ಟ್ ಗಳ ವಿರುದ್ಧ ಮೋದಿ ಒಂದು ಸಲವು ಮಾತನಾಡಿಲ್ಲ. ಬಿಜೆಪಿ ಮುಖಂಡ ದೇವರಾಜೆ ಗೌಡ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಡಿ ಲೈಂಗಿಕ ಹಗರಣದ ವಿಡಿಯೋಗಳು ಇವೆ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೂ ಮೈತ್ರಿ ಮಾಡಿ ಕೊಂಡಿದ್ದು ಏಕೆ? ಎಂದು ಪ್ರಶ್ನಿಸಿದರು.

ಕರ್ನಾಟಕದ ಹೆಣ್ಣುಮಕ್ಕಳ ಗೌರವವನ್ನು ಲೆಕ್ಕ ಹಾಕದೆ ನೀಚ ಮನುಷ್ಯನಿಗೆ ಟಿಕೆಟ್ ಕೊಟ್ಟಿದೆ ಬಿಜೆಪಿ. ಇದರಲ್ಲಿ ಜೆಡಿಎಸ್ ಕಾರ್ಯಕರ್ತರು ಇದ್ದಾರೆ. ಮನೆಕೆಲಸದ ಮಹಿಳೆ ಇದ್ದಾರೆ. ನಿಮ್ಮ ತಂದೆ, ತಾತಾನಿಗೆ ಊಟ ಬಡಿಸಿದ್ದೇನೆ ಎಂದರು ಆ ವ್ಯಕ್ತಿ ಬಿಟ್ಟಿಲ್ಲ. ರಕ್ಷಕನೆ ಭಕ್ಷಕನಾಗಿದ್ದಾನೆ. ತನ್ನ ಅಧಿಕಾರದ ದರ್ಪ ಬಳಸಿಕೊಂಡು ಕೃತ್ಯ ಎಸಗಿರುವ ಈ ವ್ಯಕ್ತಿ ವಿರುದ್ಧ ಮೊದಲು ಮಾತನಾಡಬೇಕಿರುವುದು ಈ ದೇಶದ ಗೃಹಸಚಿವ ಅಮಿತ್ ಶಾ. ಕಾಂಗ್ರೆಸ್ ಪಕ್ಷ ಈ ಕೃತ್ಯವನ್ನು ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ಅಪರಾಧಿ ಇದರಿಂದ ತಪ್ಪಿಸಿಕೊಳ್ಳದಂತೆ ಹೋರಾಟ ಮಾಡುತ್ತದೆ. ಮಹಿಳೆಯರಿಗೆ ನ್ಯಾಯ ದೊರೆಯುವಂತೆ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದರು.

Ads on article

Advertise in articles 1

advertising articles 2

Advertise under the article