
ದಲಿತರಿಗೆ ಸೇರಿದ ಜಮೀನನ್ನು ಸಿದ್ದರಾಮಯ್ಯ ನುಂಗಿದ್ದಾರೆ; ಸಿಎಂ ಕೂಡಲೇ ರಾಜೀನಾಮೆ ಕೊಡಬೇಕು: ಆರ್.ಅಶೋಕ್
ಉಡುಪಿ: ಮೂಡಾ ಹಗರಣ ಇಡೀ ದೇಶವೇ ಬೆಚ್ಚಿ ಬೀಳುವ ಹಗರಣ. ಇದೊಂದು ಮೂರರಿಂದ ನಾಲ್ಕು ಸಾವಿರ ಕೋಟಿಯ ಹಗರಣ. ದಲಿತರಿಗೆ ಸೇರಿದ ಜಮೀನನ್ನು ಸಿದ್ದರಾಮಯ್ಯ ನುಂಗಿದ್ದಾರೆ. ದಲಿತರ ಜಮೀನನ್ನು ಯಾರ್ಯಾರ ಹೆಸರಿಗೋ ಟ್ರಾನ್ಸ್ಫರ್ ಮಾಡಿ ಅಪ್ರೂ ಮಾಡಿಸಿಕೊಂಡಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 86 ಸಾವಿರ ಜನ ಅರ್ಜಿ ಹಾಕಿ ಮೂಡಾ ಸೈಟಿಗೆ ಕಾಯುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರಿಗೆ ಏಕಾಏಕಿ ಸೈಟ್ ಗಳನ್ನು ಕೊಟ್ಟಿದ್ದಾರೆ. ಮೂಡಾ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದೆ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಹಗರಣವನ್ನು ಸಿಬಿಐ ತನಿಖೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ರು.
ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಮಂಜೂರಾದ ಹಣವನ್ನು ರಾಜ್ಯ ಕಾಂಗ್ರೆಸ್ ಸರಕಾರ ಲೂಟಿ ಮಾಡಿದೆ. ಇತಿಹಾಸದಲ್ಲಿ ಯಾವ ಸರಕಾರ ಕೂಡ ಈ ಪ್ರಮಾಣದಲ್ಲಿ ದಲಿತರ ಹಣ ನುಂಗಿಲ್ಲ. ದಲಿತರ ಹಣವನ್ನು ತೆಗೆದುಕೊಂಡು ಹೋಗಿ ಬಾರು, ವೈನ್ ಶಾಪ್, ಚಿನ್ನದ ಅಂಗಡಿಗಳಿಗೆ ಸುರಿದಿದ್ದಾರೆ. ದಲಿತರ ಹಣದಿಂದ ಜಮೀನು ಪರ್ಚೇಸ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.