ಬಿಜೆಪಿಗರು ತಿರುಕನ ಕನಸು ಕಾಣುತ್ತಿದ್ದಾರೆ: ಸಚಿವ ಈಶ್ವರ್ ಖಂಡ್ರೆ ವ್ಯಂಗ್ಯ
Monday, August 26, 2024
ಬೆಂಗಳೂರು: ನೂರು ಕೋಟಿ ಎಲ್ಲಿಂದ ಬರುತ್ತಿದೆ ? ಈ ಡಿ ಯವರು ಈಗ ಎಲ್ಲಿಗೆ ಹೋಗಿದ್ದಾರೆ ? ಖಂಡ್ರೆ ಪ್ರಶ್ನೆ.
ಆಪರೇಶನ್ ಕಮಲ ವಿಚಾರವಾಗಿ ಮಾಧ್ಯಮ ಮಿತ್ರರಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಈಶ್ವರ್ ಖಂಡ್ರೆಯವರು ಬಿಜೆಪಿಗರು ಜನ ಬೆಂಬಲ ಪಡೆದು ಅಧಿಕಾರಕ್ಕೆ ಬಂದೆ ಇಲ್ಲಾ ಅವರದ್ದೇನಿದ್ದರೂ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವ ಚಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಸರಕಾರ ಬಂಡೆಯಂತಿದೆ ನಮ್ಮ ಸರಕಾರ ಉತ್ತಮ ಕಾರ್ಯಕ್ರಮಗಳೊಂದಿಗೆ ಐದು ವರ್ಷ ಪೂರ್ಣಗೊಳಿಸಿ ಮತ್ತೆ ಐದು ವರ್ಷಕ್ಕೆ ಆಯ್ಕೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರು ನಮ್ಮ ಸರಕಾರವನ್ನು ಅಸ್ಥಿರಗೊಳಿಸಿ ಅಧಿಕಾರ ಹಿಡಿಯುವುದು ಬಿಜೆಪಿಯ ತಿರುಕನ ಕನಸು ಎಂದು ಬಿಜೆಪಿಯ ಅಗ್ರಗಣ್ಯ ನಾಯಕರ ಪಿತೂರಿಯ ರಾಜಕಾರಣದ ವಿರುದ್ದ ವ್ಯಂಗ್ಯವಾಡಿದ್ದಾರೆ.