ಸೌದಿ ಅರೆಬಿಯಾದಲ್ಲಿ ಅಲ್ ಮುಝೈನ್ ಸಿಇಒ ಝಕರಿಯಾ ಜೋಕಟ್ಟೆಗೆ ʼಎಕ್ಸಿಕ್ಯೂಟಿವ್ ಅಚೀವರ್ʼ ಪ್ರಶಸ್ತಿ ಪ್ರದಾನ

ಸೌದಿ ಅರೆಬಿಯಾದಲ್ಲಿ ಅಲ್ ಮುಝೈನ್ ಸಿಇಒ ಝಕರಿಯಾ ಜೋಕಟ್ಟೆಗೆ ʼಎಕ್ಸಿಕ್ಯೂಟಿವ್ ಅಚೀವರ್ʼ ಪ್ರಶಸ್ತಿ ಪ್ರದಾನ

 

ಸೌದಿ : ಸೌದಿ ಅರೆಬಿಯಾದ ಅಲ್ ಖೋಬಾರ್ ನಲ್ಲಿ ಮಂಗಳವಾರ ಅಲ್ ಮುಝೈನ್ ಗಲ್ಫ್ ಸೌದಿ ಕಾಂಟ್ರಾಕ್ಟಿಂಗ್ ಕಂಪೆನಿಯ ಸಿಇಒ ಝಕರಿಯಾ ಜೋಕಟ್ಟೆಯರಿಗೆ ʼಎಕ್ಸಿಕ್ಯೂಟಿವ್ ಅಚೀವರ್ʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಲ್ಲಿನ ಮೂವ್ ಎನ್ ಪಿಕ್ ಹೊಟೇಲ್ ನಲ್ಲಿ ಆಯೋಜಿಸಿದ್ದ 5ನೇ ರಿಲಯೆಬಿಲಿಟಿ & ಮೈಂಟೆನೆಬಿಲಿಟಿ ಕಾನ್ಫರೆನ್ಸ್ ಆಂಡ್ ಎಕ್ಸಿಬಿಷನ್ -RAMcon ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಝಕರಿಯಾ ಜೋಕಟ್ಟೆಯ ಸಾಧನೆ....

ಒಂದು ಕಾಲದಲ್ಲಿ ಕೇವಲ ಎರಡಂಕೆಯ ಮಾಸಿಕ ಸಂಬಳಕ್ಕೆ ದುಡಿಯುತ್ತಿದ್ದ ಬ್ಯಾರಿ ಸಮುದಾಯದ ಯುವಕ ಸೌದಿಗೆ ತೆರಳಿ ಏಳೂವರೆ ಸಾವಿರ ಜನರಿಗೆ ಉದ್ಯೋಗ ನೀಡಿ ಅಲ್ ಮುಝೈನ್ ಹೆಸರಲ್ಲಿ ಸಾಮ್ರಾಜ್ಯ ಸ್ಥಾಪಿಸಿರುವ ಝಕರಿಯಾ ಜೋಕಟ್ಟೆ ಸಾಧನೆ ಮೆಚ್ಚುವಂತದ್ದಾಗಿದೆ.

ಸೌದಿ ಅರೇಬಿಯಾದ ಅಲ್ ಖೋಬರ್ ಪಂಚತಾರಾ ಹೋಟೆಲ್ ಮೂವ್ ಇನ್ ಪಿಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಮ್ಕೋನ್ (RAMCon) ವಿಶ್ವಾಸಾರ್ಹತೆ ಮತ್ತು ನಿರ್ವಹಣೆ ಸಮಾವೇಶ ಹಾಗೂ ಪ್ರದರ್ಶನ – 2024 ಸಮಾರಂಭದಲ್ಲಿ ಕಠಿಣ ಸಾಧನೆ ಮತ್ತು ಪರಿಶ್ರಮಕ್ಕಾಗಿ “ಅಲ್ ಮುಝೈನ್” ಗಲ್ಫ್ ಸೌದಿ ಕಾಂಟ್ರಾಕ್ಟರ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಝಕರಿಯಾ ಬಜ್ಪೆ (ಜೋಕಟ್ಟೆ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಝಕರಿಯಾ ಜೋಕಟ್ಟೆ ಅವರು ಈ ಹಿಂದೆ ರಾಷ್ಟ್ರೀಯ – ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ, ಗೌರವಗಳಿಗೆ ಪಾತ್ರರಾದ ಕರಾವಳಿಯ ಅನಿವಾಸಿ ಉದ್ಯಮಿ ಮತ್ತು ಉತ್ತಮ ಸಂಘಟಕ. ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಹಿದಾಯ ಫೌಂಡೇಶನ್ ನ ಛೆಯರ್ಮೇನ್ ಆಗಿ ಹಲವಾರು ಅಶಕ್ತರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಅವರ ಉದ್ಯಮ ಮತ್ತು ಫ್ಯಾಮಿಲಿ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮತ್ತು ಕರಾವಳಿಯ ಸಂಸ್ಕೃತಿಯನ್ನು ಸೌದಿ ಅರೇಬಿಯಾದ ನೆಲದಲ್ಲಿ ಪಸರಿಸುವಲ್ಲಿ ಹತ್ತುಹಲವು ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಝಕರಿಯಾ ನೇತೃತ್ವದಲ್ಲಿ ಸೌದಿಯ ನಾನಾ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article