ತನ್ನಿಬ್ಬರು ಪುಟ್ಟ ಮಕ್ಕಳನ್ನು ಪ್ರಿಯಕರನ ಜೊತೆ ಸೇರಿ ಹತ್ಯೆಗೈದ ಮಹಿಳೆ! ಸಿಕ್ಕಿಬಿದ್ದಿದ್ದು ಹೇಗೆ ನೋಡಿ...

ತನ್ನಿಬ್ಬರು ಪುಟ್ಟ ಮಕ್ಕಳನ್ನು ಪ್ರಿಯಕರನ ಜೊತೆ ಸೇರಿ ಹತ್ಯೆಗೈದ ಮಹಿಳೆ! ಸಿಕ್ಕಿಬಿದ್ದಿದ್ದು ಹೇಗೆ ನೋಡಿ...

ರಾಮನಗರ: ಹೆತ್ತ ಮಕ್ಕಳನ್ನೇ ಪ್ರಿಯಕರನ ಜೊತೆ ಸೇರಿ ಹತ್ಯೆಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ರಾಮನಗರ ಜಿಲ್ಲೆಯ ಐಜೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ವೀಟಿ (24), ಗ್ರೆಗೋರಿ ಫ್ರಾನ್ಸಿಸ್ (27) ಎಂದು ಗುರುತಿಸಲಾಗಿದೆ. ಇಬ್ಬರು ಆರೊಪಿಗಳು ಸೇರಿ ಕಬೀಲಾ (2), ಕಬೀಲನ್ (11 ತಿಂಗಳು) ಮಕ್ಕಳನ್ನು ಕೊಲೆಗೈದಿದ್ದರು. ಆರೋಪಿಗಳು ಮೂಲತ ಬೆಂಗಳೂರು ನಿವಾಸಿಗಳು ಎಂದು ತಿಳಿದು ಬಂದಿದೆ.

ಮದುವೆಯಾಗಿ ಎರಡು ಮಕ್ಕಳಿದ್ದರು ಪ್ರಿಯಕರನ ಜೊತೆ ಮಹಿಳೆ ಇತ್ತೀಚೆಗೆ ಪರಾರಿಯಾಗಿದ್ದಳು. ಬಳಿಕ ರಾಮನಗರ ಟೌನ್‍ನ ಮಂಜುನಾಥ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಿದ್ದರು.

ಇಬ್ಬರ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ತಲೆದಿಂಬಿನಿಂದ ಉಸಿರುಕಟ್ಟಿಸಿ 15 ದಿನಗಳ ಅಂತರದಲ್ಲಿ ಎರಡು ಮಕ್ಕಳನ್ನು ಹತ್ಯೆಗೈದಿದ್ದರು. ಬಳಿಕ ರಾಮನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿದ್ದರು. ಬಳಿಕ ಹುಷಾರಿಲ್ಲದೇ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕತೆ ಕಟ್ಟಿದ್ದರು. ಸ್ಮಶಾನದ ಕಾವಲುಗಾರನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

Ads on article

Advertise in articles 1

advertising articles 2

Advertise under the article