ಶಿಗ್ಗಾಂವಿ ಗೆಲುವಿನ ಶ್ರೇಯಸ್ಸನ್ನು ಕಾರ್ಯಕರ್ತರು ಹಾಗೂ ಜನರಿಗೆ ಅರ್ಪಿಸಿದ ಕ್ಷೇತ್ರದ ಚುನಾವಣಾ ಉಸ್ತುವಾರಿ ಈಶ್ವರ್ ಖಂಡ್ರೆ
ಬೆಂಗಳೂರು: ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾಂವಿನಲ್ಲಿ ಈ ಬಾರಿಯ ಉಪಚುನಾವಣೆಯಲ್ಲಿ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿರುವ ಸಚಿವ ಈಶ್ವರ್ ಖಂಡ್ರೆ, ಗೆಲುವಿನ ಶ್ರೇಯಸ್ಸನ್ನು ಕಾರ್ಯಕರ್ತರು ಹಾಗೂ ಜನರಿಗೆ ಅರ್ಪಿಸಿದ್ದಾರೆ.
ಈಶ್ವರ್ ಖಂಡ್ರೆ ರಾಜ್ಯ ಕಾಂಗ್ರೆಸಿನ ಸ್ಟಾರ್ ನಾಯಕರು, ಕಲ್ಯಾಣ ಭಾಗದ ರಾಜಕೀಯ ಹೆಡ್ ಮಾಸ್ಟರ್ ಎಂದೂ, ಬೀದರ್ ಬಿಗ್ ಬಿ ಎಂದೂ ಜನಜನಿತರಾಗಿರುವ ಮೂಲಕ ಭಾರಿ ಜನಮೆಚ್ಚುಗೆಯನ್ನು ಪಡೆದಂತಹ ಯಶಸ್ವಿ ನಾಯಕ.
ಬೀದರ್ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ , ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರಾಗಿ ದೇಶವೇ ತಿರುಗಿ ನೋಡುವಂತೆ ಯಶಸ್ವಿ ಆಡಳಿತ ನೀಡುತ್ತಿರುವ ಖಂಡ್ರೆಯವರು ತನ್ನ ಸರಳತೆಯಿಂದಲೇ ಜನಮನ ಗೆದ್ದವರು. ಈ ಬಾರಿಯ ಶಿಗ್ಗಾಂವಿ ಉಪಚುನಾವಣೆಯಲ್ಲಿ ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ಮಾಡಿ ಯಾಸಿರ್ ಅಹಮದ್ ಖಾನ್ ಪಠಾಣ್ ಮುಖದಲ್ಲಿ ಗೆಲುವಿನ ನಗೆ ಮೂಡಿಸಿದ್ದಾರೆ.
ಖಾದ್ರಿ - ಪಠಾಣ್ ಒಡಕನ್ನು ಸರಿದೂಗಿಸಿದ್ದೆ ಈ ಖಂಡ್ರೆ.!
ಶಿಗ್ಗಾಂವಿಯಲಿ ಖಂಡ್ರೆ ತನ್ನ ಕಮಾಲ್ ನಿಂದ ಸರ್ವಮತ ಭಾಂದವರ ಮತವನ್ನು ಕ್ರೋಡಿಕರಿಸಿ ಪಕ್ಷಕ್ಕೆ ಗೆಲುವನ್ನು ತಂದಿತ್ತಲು ಕಾರಣರಾದರೂ, ಮಾತ್ರವಲ್ಲಾ ಅತೃಪ್ತ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರನ್ನು ಹಾಗೂ ಅಭ್ಯರ್ಥಿ ಇದೀಗ ಗೆಲುವಿನ ನಗೆ ಬೀರಿರುವ ಪಠಾಣ್ ಮಧ್ಯೆ ಏರ್ಪಟ್ಟಿದ್ದ ಕಂದರವನ್ನು ಸರಿದೂಗಿಸಿದವರು ಈ ಚತುರ ರಾಜಕೀಯ ಪಟು ಖಂಡ್ರೆಯವರು ಆಗಿದ್ದಾರೆ. ಆದರೂ ಪ್ರಚಾರ ಬಯಸದ ಖಂಡ್ರೆ ಇದೀಗ ತನ್ನ ಚುನಾವಣಾ ಉಸ್ತುವಾರಿ ಕ್ಷೇತ್ರದ ಗೆಲುವಿನ ಶ್ರೇಯಸ್ಸನ್ನು ಪಕ್ಷದ ಮುಖಂಡರೂ , ಕಾರ್ಯಕರ್ತರೂ ಹಾಗೂ ಜನತೆಗೆ ಅರ್ಪಿಸುವ ಮೂಲಕ ತಾನೊಬ್ಬ ಸಮರ್ಥ, ಸರಳ ನಾಯಕ ಎಂದು ಮತ್ತೊಮ್ಮೆ ಸಾಬಿತು ಮಾಡಿದ್ದಾರೆ..