ಬ್ಯಾರಿ ಸಮಾವೇಶದ ಹಿನ್ನೆಲೆ: ಸ್ಪೀಕರ್ ಸಹಿತ ಸಚಿವಧ್ವಯರನ್ನು ಭೇಟಿಯಾದ ಅಝೀಝ್ ಬೈಕಂಪಾಡಿ ನೇತೃತ್ವದ ಬ್ಯಾರಿ ನಿಯೋಗ
Wednesday, December 11, 2024
ಬೆಳಗಾವಿ: ಜನವರಿ ನಾಲ್ಕರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಅಖಿಲ ಭಾರತ ಬ್ಯಾರಿ ಮಹಾಸಭಾ ಇದರ ಸಮಾವೇಶದ ಅಂಗವಾಗಿ ಅಝೀಝ್ ಬೈಕಂಪಾಡಿ ನೇತೃತ್ವದ ನಿಯೋಗ ಬುಧವಾರ ಸ್ಪೀಕರ್ ಯು.ಟಿ.ಖಾದರ್ ಫರೀದ್, ಸಚಿವರಾದ ಬಿ.ಝೆಡ್. ಝಮೀರ್ ಅಹಮದ್ ಹಾಗ್ ಸಂತೋಷ್ ಲಾಡ್ ಅವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಚರ್ಚಿಸಿದರು.
ಈ ಸಂಧರ್ಭದಲ್ಲಿ ಸ್ಪೀಕರ್ ಖಾದರ್ ಅವರು ಸಲಹೆ ಸೂಚನೆಗಳನ್ನು ನೀಡಿದ್ದು, ಸಚಿವ ಝಮೀರ್ ಹಾಗೂ ಲಾಡ್ ಈವೊಂದು ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡುವ ಬಗೆ ಭರವಸೆಯನ್ನು ಅಝೀಝ್ ಬೈಕಂಪಾಡಿ ನೇತೃತ್ವದ ನಿಯೋಗಕ್ಕೆ ನೀಡಿದರು.
ನಿಯೋಗದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮಲಾರ್ ಮೋನು , ಅಬ್ದುಲ್ ಜಲೀಲ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಹಮೀದ್ ಕಿನ್ಯ ಇದ್ದರು.