
ಕುಂಜೂರಿನಲ್ಲಿ ನೂರುಲ್ ಇಸ್ಲಾಂ ಮದರಸ-ಮಸೀದಿಯ ನೂತನ ಕಟ್ಟಡ ಉದ್ಘಾಟಿಸಿದ ಸಯ್ಯಿದುಲ್ ಮುಹಮ್ಮದ್ ಜೆಫ್ರಿ ಮುತ್ತು ಕೋಯ ತಂಙಳ್
ಪಡುಬಿದ್ರಿ: ಕುಂಜೂರು-ಪಣಿಯೂರು ನೂರುಲ್ ಇಸ್ಲಾಂ ಮದರಸ ಮತ್ತು ಮಸೀದಿಯ ನೂತನ ಕಟ್ಟಡವನ್ನು ರವಿವಾರ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯಿದುಲ್ ಮುಹಮ್ಮದ್ ಜೆಫ್ರಿ ಮುತ್ತು ಕೋಯ ತಂಙಳ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮದ್ರಸ, ಮಸೀದಿಗಳು ಆತ್ಮಶುದ್ಧೀಕರಣಗೊಳಿಸುವ ಒಂದು ಕೇಂದ್ರವಾಗಿದೆ. ಇಲ್ಲಿ ಯಾವುದೇ ರೀತಿಯ ಉಗ್ರವಾದಕ್ಕ ಅವಕಾಶ ನೀಡದೆ ಮತಸೌಹಾರ್ದತೆಯನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಕುರ್‌ಆನ್ ಗ್ರಂಥ ಇದನ್ನೇ ಬೋಧಿಸಿದೆ. ಮನುಷ್ಯರ ಮಧ್ಯೆ ಶಾಂತಿ, ಸೌಹಾರ್ದತೆಯಿಂದ ಬದುಕಬೇಕು. ಒಂದು ಸಮುದಾಯದ ಉನ್ನತಿ ಶಿಕ್ಷಣದಿಂದ ಆಗುತ್ತದೆ. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಪಡೆಯುವುದರಿಂದ ಸಮುದಾಯದ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಬೊಳ್ಳೂರು ಜುಮಾ ಮಸೀದಿಯ ಖತೀಬ್ ಕೆ.ಪಿ. ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ನೂರುಲ್ ಇಸ್ಲಾಂ ಮದರಸ ಮತ್ತು ಮಸೀದಿ ಸಮಿತಿಯ ಅಧ್ಯಕ್ಷ ಶಫಿ ಅಹಮದ್ ನೇತೃತ್ವ ವಹಿಸಿದ್ದರು.
ಮಂಗಳೂರಿನ ಸಂಯುಕ್ತ ಜಮಾಅತ್ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಜತೆಕಾರ್ಯದರ್ಶಿ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್,. ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಮುಹಮ್ಮದ್ ಮುಸ್ಲಿಯಾರ್ ಪೂಂಜಾಲಕಟ್ಟೆ ಅನುಗ್ರಹ ಭಾಷಣ ಮಾಡಿದರು.
ಆರಂಭದಲ್ಲಿ ಕುಂಜೂರು ಮಸೀದಿ ಅಧ್ಯಕ್ಷ ಶಫಿ ಅಹ್ಮದ್ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು. ಅಬೂಬಕ್ಕರ್ ಸಿದ್ದೀಕ್ ಫೈಝಿ ಶಿರ್ತಾಡಿ ದುವಾ ನೆರವೇರಿಸಿದರು.
ಉಡುಪಿ ಸಂಯುಕ್ತ ಸಹಾಯಕ ಖಾಝಿ ಅಬ್ದುಲ್ ರಹ್ಮಾನ್ ಮದನಿ, ಅಲ್ ಇಹ್ಸಾನ್ ಸಂಸ್ಥೇಯ ಮ್ಯಾನೇಜರ್ ಮುಸ್ತಫಾ ಸಅದಿ, ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಮುಹಮ್ಮದ್ ಮುಸ್ಲಿಯಾರ್ ಪೂಂಜಾಲಕಟ್ಟೆ, ಅಲೀಂ ಮದನಿ ಉಸ್ತಾದ್, ಇರ್ಶಾದ್ ದಾರಿಮಿ ಮಿತ್ತಬೈಲ್, ಮುಹಮ್ಮದ್ ಶಬೀರ್ ಫೈಝಿ, ಮುಹಮ್ಮದ್ ಅಶ್ರಫ್ ಸಖಾಫು ಅಲ್ ಹಿಕಮಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಹಸನ್ ಮುಹಮ್ಮದ್ ಯೂಸುಫ್ ಜಾಬರ್ ದುಬೈ, ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೆಪಿಸಿಸಿ ಉಪಾಧ್ಯಕ್ಷ..ಗಫೂರ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೂಡ್ಲಿಪೇಟೆ, ಗ್ರಾಪಂ ಮಾಜಿ ಸದಸ್ಯ ಯಶವಂತ್ ಶೆಟ್ಟಿ, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಡುಬಿದ್ರಿ ಎಸ್‌ಐ ಪ್ರಸನ್ನ ಕುಮಾರ್, ಉಸ್ಮಾನ್ ಹಾಜಿ ತೋಡಾರು, ಲತೀಫ್ ಗುರುಪುರ, ಯು.ಸಿ. ಶೇಖಬ್ಬ, ತಸ್ಲೀಲ್ ಬೆಂಗಳೂರು, ಶಮೀರ್ ಅಹ್ಮದ್, ಶಲಿಕತ್ ಅಹ್ಮದ್, ಉಸ್ತಾದ್ ರಫೀಕ್ ಅಹ್ಮದ್ ಹುದವಿ ಕೋಲಾರಿ, ಉಸ್ತಾದ್ ಅನೀಸ್ ಕೌಸರಿ ವೀರಮಂಗಲ, ಖಾಸಿಂ ಮುಸ್ಲಿಯಾರ್ ಮಠ, ಉಮರ್ ದಾರಿಮಿ ಸಾಲ್ಮರ, ಶಂಸುದ್ದೀನ್ ದಾರಿಮಿ, ಮುಹಮ್ಮದ್ ನವವಿ ಮಂಡೋಳೆ, ಇರ್ಫಾನ್ ಫೈಝಿ ಅಲ್ ಮಅಬರಿ, ಅಬ್ದುಲ್ ಮಜೀದ್ ದಾರಿಮಿ ಉಪಸ್ಥಿತರಿದ್ದರು.
ಉಸ್ಮಾನುಲ್ ಫೈಝಿ ತೋಡಾರು ಉಸ್ತಾದ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಸ್ತ ಮದ್ರಸ ಮ್ಯಾನೇಜ್‌ಮೆಂಟ್ ಉಡುಪಿ ರೇಂಜ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಕುಚ್ಚಿಕ್ಕಾಡ್ ಸ್ವಾಗತಿಸಿದರು. ಶಹೀರ್ ಕಲ್ಲಗುಡ್ಡೆ, ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ರಝಾಕ್ ಮಾಸ್ಟರ್ ವಂದಿಸಿದರು.