ಇಂದು ಕುಂಜೂರುನಲ್ಲಿ ನೂರುಲ್ ಇಸ್ಲಾಮ್ ಮದರಸ-ಮಸೀದಿಯ ನೂತನ ಕಟ್ಟಡ ಉದ್ಘಾಟನೆ

ಇಂದು ಕುಂಜೂರುನಲ್ಲಿ ನೂರುಲ್ ಇಸ್ಲಾಮ್ ಮದರಸ-ಮಸೀದಿಯ ನೂತನ ಕಟ್ಟಡ ಉದ್ಘಾಟನೆ

ಉಚ್ಚಿಲ: ಕುಂಜೂರು ಪಣಿಯೂರಿನ ನೂರುಲ್ ಇಸ್ಲಾಮ್ ಮದರಸ ಮತ್ತು ಮಸೀದಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ(ಜನವರಿ 19) ನಡೆಯಲಿದೆ.

ಬೆಳಗ್ಗೆ 9.30ಕ್ಕೆ ನೂರುಲ್ ಇಸ್ಲಾಮ್ ಮದರಸ ಮತ್ತು ಮಸೀದಿ ಕಮಿಟಿ ಅಧ್ಯಕ್ಷ ಶಫಿ ಅಹ್ಮದ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಮದರಸದ ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ಫೈಝಿ ಶಿರ್ತಾಡಿ ದುವಾ ನೆರವೇರಿಸಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ (ಮಂಗಳೂರು ಸಂಯುಕ್ತ ಜಮಾತ್ ಖಾಝಿ ಹಾಗು ಸದಸ್ಯರು ಸಮಸ್ತ ಕೇಂದ್ರ ಮುಶಾವರ) ಅವರು ನೆರವೇರಿಸಲಿದ್ದಾರೆ.

ಈ ಸಭಾ ಕಾರ್ಯಕ್ರಮದಲ್ಲಿ ಶೈಖುನಾ ಕೆ.ಪಿ ಮುಹಮ್ಮದ್ ಅಝ್ ಹರ್ ಫೈಝಿ ಬೊಳ್ಳೂರು (ಖತೀಬರು ಜುಮಾ ಮಸೀದಿ ಬೊಳ್ಳೂರು ಖಾಝಿ ಕಿಲ್ತಾನ್) ದುವಾ ನೇತೃತ್ವ ವಹಿಸಲಿದ್ದಾರೆ. ಮದರಸದ ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ಫೈಝಿ ಶಿರ್ತಾಡಿ ಕಿರಾಅತ್ ಪಠಿಸಲಿದ್ದಾರೆ. ಮಸೀದಿ ಕಮಿಟಿ ಅಧ್ಯಕ್ಷ ಶಫಿ ಅಹ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ.

ಅಬ್ದುಲ್ ರಹ್ಮಾನ್ ಕುಚ್ಚಿಕ್ಕಾಡ್ (ಅಧ್ಯಕ್ಷರು ಸಮಸ್ತ ಮದರಸ ಮ್ಯಾನೇಜ್‌ಮೆಂಟ್ ಉಡುಪಿ ರೇಂಜ್) ಸ್ವಾಗತಿಸಲಿದ್ದಾರೆ. 

ಪ್ರಾಸ್ತಾವಿಕ ಭಾಷಣವನ್ನು ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಉಸ್ತಾದ್ (ಸದಸ್ಯರು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ) ಮಾಡಲಿದ್ದಾರೆ.

ಶೈಖುನಾ M.T ಅಬ್ದುಲ್ಲಾ ಮುಸ್ಲಿಯಾರ್, ಶೈಖುನಾ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಶೈಖುನಾ ಮುಹಮ್ಮದ್ ಮುಸ್ಲಿಯಾರ್ ಪೂಂಜಾಲಕಟ್ಟೆ ಅನುಗ್ರಹ ಭಾಷಣ ಮಾಡಲಿದ್ದಾರೆ.

ಆಶಂಸ ಭಾಷಣವನ್ನು ಅಲ್ ಹಾಜ್ ಸಲೀಂ ಮದನಿ ಉಸ್ತಾದ್, ಇರ್ಷಾದ್ ದಾರಿಮಿ ಮಿತ್ತಬೈಲ್, ಮುಹಮ್ಮದ್ ಶಬೀರ್ ಫೈಝಿ, ಹಾಫಿಳ್ ಮುಹಮ್ಮದ್ ಅಶ್ರಫ್ ಸಖಾಫಿ ಅಲ್ ಹಿಕಮಿ ಮಾಡಲಿದ್ದಾರೆ.

ಮದ್ರಸ ಮತ್ತು ಮಸೀದಿ ನೂತನ ಕಟ್ಟಡ ಉದ್ಘಾಟನೆ

ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ (ಅಧ್ಯಕ್ಷರು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ) ಅವರು ಮದ್ರಸ ಮತ್ತು ಮಸೀದಿ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. 

ವಿಶೇಷ ಆಹ್ವಾನಿತರಾಗಿ ಯು.ಟಿ ಖಾದರ್(ವಿಧಾನ ಸಭೆಯ ಸಭಾಧ್ಯಕ್ಷರು), ಬಿ ಝಡ್ ಜಮೀರ್ ಅಹ್ಮದ್ ಖಾನ್(ಸಚಿವರು ವಸತಿ, ವಕ್ಸ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕರ್ನಾಟಕ ಸರಕಾರ), ಕೋಟ ಶ್ರೀನಿವಾಸ್ ಪೂಜಾರಿ (ಲೋಕಸಭಾ ಸದಸ್ಯರು), ಹಸನ್ ಮುಹಮ್ಮದ್ ಯೂಸುಫ್ ಜಾಬರ್ ದುಬೈ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ರವಿರಾಜ್ (ಅಧ್ಯಕ್ಷರು ಎಲ್ಲೂರು ಗ್ರಾಮ ಪಂಚಾಯತ್), ಡಾ.ದೇವಿಪ್ರಸಾದ್ ಶೆಟ್ಟಿ (ಅಧ್ಯಕ್ಷರು ಬೆಳಪು ಗ್ರಾಮ ಪಂಚಾಯತ್), ಶಿವಕುಮಾರ್ ಮೆಂಡನ್ (ಅಧ್ಯಕ್ಷರು, ಬಡಾಗ್ರಾಮ ಪಂಚಾಯತ್ ಉಚ್ಚಿಲ), ಇನಾಯತ್ ಅಲಿ(ಕೆಪಿಸಿಸಿ ಪ್ರ.ಕಾರ್ಯದರ್ಶಿ), ಎಂ.ಎ.ಗಫೂರ್(ಕೆಪಿಸಿಸಿ ಉಪಾಧ್ಯಕ್ಷ), ಅಬ್ದುಲ್ ಮಜೀದ್ ಕೊಡ್ಲಿಪೇಟೆ (ರಾಜ್ಯಧ್ಯಕ್ಷರು ಎಸ್ ಡಿ ಪಿ ಐ), ಯೋಗೀಶ್ ಶೆಟ್ಟಿ (ಜಿಲ್ಲಾಧ್ಯಕ್ಷರು ಜನತಾ ದಳ ಉಡುಪಿ), ಯಶವಂತ್ ಶೆಟ್ಟಿ (ಸದಸ್ಯರು ಎಲ್ಲೂರು ಗ್ರಾಮ ಪಂಚಾಯತ್), ಕಿಶೋರ್ ಆಳ್ವ(ಕಾರ್ಯನಿರ್ವಾಹಕ ನಿರ್ದೇಶಕರು ಅದಾನಿ ಗ್ರೂಪ್), ಉಸ್ಮಾನ್ ಹಾಜಿ ತೋಡಾರ್ ಹಾಗು ಲತೀಫ್ ಗುರುಪುರ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿ: ಉಸ್ತಾದ್ ರಫೀಕ್ ಅಹ್ಮದ್ ಹುದವಿ ಕೋಲಾರಿ (ಪ್ರಾಂಶುಪಾಲರು ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು), ಉಸ್ತಾದ್ ಅನೀಸ್ ಕೌಸರಿ ವೀರಮಂಗಲ (ಉಪಾಧ್ಯಕ್ಷರು ಸಮಸ್ತ ಕೇರಳ ಸುನ್ನಿ ಸ್ಟುಡಂಟ್ ಫೆಡರೇಷನ್ ಕರ್ನಾಟಕ ರಾಜ್ಯ), ಖಾಸಿಂ ಮುಸ್ಲಿಯಾರ್ ಮಠ (ಮುಫತ್ತಿಸ್ ಸಮಸ್ತ ಉಡುಪಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್), ಉಮರ್ ದಾರಿಮಿ ಸಾಲ್ಮರ (ಮುಫತ್ತಿಸ್ SKIMVB), ಅಬ್ದುಲ್ ಮಜೀದ್ ದಾರಿಮಿ (ಮುದರಿಸ್ ಸಮಸ್ತ ಉಡುಪಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್), ಫಾರೂಕ್ ಹನೀಫಿ (ಅಧ್ಯಕ್ಷರು ಸಮಸ್ತ ಜಂಇಯ್ಯತ್ತುಲ್ ಮುಅಲ್ಲಿಮೀನ್ ಉಡುಪಿ ಜಿಲ್ಲೆ), ಶಂಸುದ್ದೀನ್ ದಾರಿಮಿ (ಅಧ್ಯಕ್ಷರು ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ ಜಿಲ್ಲೆ), ಮುಹಮ್ಮದ್ ನವವಿ ಮುಂಡೋಳೆ (ಪ್ರ.ಕಾರ್ಯದರ್ಶಿ ಸಮಸ್ತ ಕೇರಳ ಜಂಇಯ್ಯತ್ತುಲ್ ಮುಅಲ್ಲಿಮೀನ್ ದ.ಕ ಜಿಲ್ಲೆ), ಶಬೀ‌ರ್ ಸಖಾಫಿ (ಸದರ್ ಮುಅಲ್ಲಿಂ ಕೊಪ್ಪಲಂಗಡಿ), ಪಿ. ಮುಹಮ್ಮದ್ (ಪ್ರಧಾನ ಕಾರ್ಯದರ್ಶಿ ನೂರುಲ್ ಇಸ್ಲಾಂ ಮದರಸ & ಮಸೀದಿ ಕಮಿಟಿ ಕುಂಜೂರು), ರಹೀಂ ಕುಂಜೂರು (ಉಪಾಧ್ಯಕ್ಷರು ನೂರುಲ್ ಇಸ್ಲಾಂ ಮದರಸ - ಮಸೀದಿ ಕಮಿಟಿ ಕುಂಜೂರು), ಪ್ರಸನ್ನ ಕುಮಾರ್ (ಸಬ್ ಇನ್‌ಸ್ಪೆಕ್ಟರ್ ಪೋಲಿಸ್ ಠಾಣೆ ಪಡುಬಿದ್ರಿ), U.C ಶೇಖಬ್ಬ (ಮಾಜಿ ಉಪಾಧ್ಯಕ್ಷರು ತಾಲೂಕು ಪಂಚಾಯತ್), M.H ಮೊಯಿದಿನಬ್ಬ (ಅಧ್ಯಕ್ಷರು ಸಮಸ್ತ ಕೇರಳ ಮದರಸ ಮ್ಯಾನೇಜ್ಮೆಂಟ್ ಮಂಗಳೂರು), M.P ಮೊಯಿದಿನ್ (ಸದಸ್ಯರು ವಕ್ಸ್ ಮಂಡಳಿ ಉಡುಪಿ ಜಿಲ್ಲೆ), ದೇವರಾಜ್ ನಡಿಮನೆ (ಅಧ್ಯಕ್ಷರು ದೇವಸ್ಥಾನ ಕುಂಜೂರು), ಅರುಣಾಕರ ಡಿ ಶೆಟ್ಟಿ (ಅಧ್ಯಕ್ಷರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಎಲ್ಲೂರು), ವೈ.ಪ್ರಫುಲ್ಲ ಶೆಟ್ಟಿ ಎಲ್ಲೂರು ಗುತ್ತು.

ಗಣ್ಯ ಉಪಸ್ಥಿತಿ: ಮುಹಮ್ಮದ್ ಶರೀಫ್ (ಅಧ್ಯಕ್ಷರು ಜಾಮಿಯಾ ಮಸೀದಿ ಎರ್ಮಾಳ್), | ಅಬ್ಬು ಹಾಜಿ (ಅಧ್ಯಕ್ಷರು ಜುಮಾ ಮಸೀದಿ ಮೂಳೂರು), ಮುಹಮ್ಮದ್ ರಫೀಕ್ S.K (ಅಧ್ಯಕ್ಷರು ಸಯ್ಯದ್ ಅರಬಿ ಮದರಸ ಉಚ್ಚಿಲ), ಮಯ್ಯದ್ದಿ P.W.D (ಅಧ್ಯಕ್ಷರು ಜುಮಾ ಮಸೀದಿ ಪೊಲ್ಯ), ಮುಹಮ್ಮದ್ ಆಝಂ ಶೇಖ್ (ಅಧ್ಯಕ್ಷರು ಜುಮಾ ಮಸ್ಜಿದ್ ಸುಭಾಷ್ ರೋಡ್ ಉಚ್ಚಿಲ), ಮುಝಫರ್ (ಅಧ್ಯಕ್ಷರು ಹನಫಿ ಜುಮಾ ಮಸೀದಿ ಉಚ್ಚಿಲ), ಮುಬಾರಕ್ (ಅಧ್ಯಕ್ಷರು ಜುಮಾ ಮಸೀದಿ ಮುದರಂಗಡಿ), ಕೆ. ಅಬ್ದುಲ್ ಕರೀಂ ಕಳತ್ತೂರು (ಅಧ್ಯಕ್ಷರು ಬದ್ರಿಯಾ ಜುಮಾ ಮಸೀದಿ ಬೆಳಪು), ಹಮೀದ್ ಮೂಸಾ (ಅಧ್ಯಕ್ಷರು ಜುಮಾ ಮಸೀದಿ ಮಲಂಗೋಳಿ), ಸುಲೈಮಾನ್ ಸುರಭಿ (ಅಧ್ಯಕ್ಷರು ಅಲ್ ಮದರಸತುದ್ದೀನಿಯಾತ್ ಎರ್ಮಾಳ್ ಬಡಾ), ಮುಹಿಯುದ್ದೀನ್ ರೆಂಜಾಳ (ಕಾರ್ಯದರ್ಶಿ ಸಮಸ್ತ ಮದ್ರಸ ಮ್ಯಾನೆಜ್‌ಮೆಂಟ್ ಉಡುಪಿ ಜಿಲ್ಲೆ), ಅಬ್ದುಲ್ ರಜಾಕ್ ಶೇಖ್ (ಅಧ್ಯಕ್ಷರು T.O.D), Y ಅಹ್ಮದ್ ಹಾಜಿ (ಸ್ಥಾಪಕಾಧ್ಯಕ್ಷರು, ತವಕ್ಕಲ್ ಓವರ್‌ಸೀಸ್ ದುಬೈ), ಸೈಯದ್ ಮುರಾದ್ ಅಲಿ (ಆಲ್ ಖಮ‌ರ್ ವೇಲ್‌ಫೇ‌ರ್ ಅಸೋಶಿಯೇಷನ್ K.S.A), ಹೈದ್ರೋಸ್ ಕುಂಜೂರು (ನೂರುಲ್ ಇಸ್ಲಾಂ ಮದ್ರಸ G.C.C ಕಮಿಟಿ), ಶಬೀರ್ ಇಸ್ಮಾಯಿಲ್ (ಕಾರ್ಯದರ್ಶಿ ಅಲ್ ಇಸ್ಲಾಮಿಯಾ ಯಂಗ್‌ಮೆನ್ಸ್ ಉಚ್ಚಿಲ), ಇಬ್ರಾಹಿಂ ಅರ್ಶ್ (ಅಧ್ಯಕ್ಷರು Y.W.A ಉಚ್ಚಿಲ), ಅಬ್ದುಲ್ ನಾಸಿರ್ (ಅಧ್ಯಕ್ಷರು ನೂರುಲ್ ಇಸ್ಲಾಂ ಯಂಗ್‌ಮೆನ್ಸ್ ಕುಂಜೂರು), ಮುಹಮ್ಮದ್ ಹಾಫಿಳ್ (ಅಧ್ಯಕ್ಷರು ಸುನ್ನಿ ಸ್ಟುಡೆಂಟ್ ಫೆಡರೇಷನ್ ಪಣಿಯೂರು), ದೀಪ (ಸದಸ್ಯರು ಎಲ್ಲೂರು ಗ್ರಾಮ ಪಂಚಾಯತ್), ವಸಂತಿ ಮಧ್ವರಾಜ್ (ಸದಸ್ಯರು ಎಲ್ಲೂರು ಗ್ರಾಮ ಪಂಚಾಯತ್), ತಸ್ಲೀಮ್ ಬೆಂಗಳೂರು, ಶಮೀರ್ ಅಹ್ಮದ್, ಶಲಿಕತ್ ಅಹ್ಮದ್, ಅಬ್ದುಲ್ ರಝಾಕ್ ಮಾಸ್ಟರ್.

ಮಗ್ರಿಬ್ ನಮಾಜಿನ ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ  ಉಸ್ತಾದ್ ಅಷ್ಫಾಕ್ ಫೈಝಿ ನಂದಾವರ (ಖತೀಬರು ಬದರ್ ಜುಮಾ ಮಸ್ಜಿದ್ ಕಾಸರಗೋಡು) ಭಾಗವಹಿಸಲಿದ್ದಾರೆ.

Ads on article

Advertise in articles 1

advertising articles 2

Advertise under the article