ಯುಪಿಐ ಸೇವೆಗಳಲ್ಲಿ ವ್ಯತ್ಯಯ; ಪರದಾಟ ನಡೆಸಿದ PhonePe, Google Pay ಗ್ರಾಹಕರು!

ಯುಪಿಐ ಸೇವೆಗಳಲ್ಲಿ ವ್ಯತ್ಯಯ; ಪರದಾಟ ನಡೆಸಿದ PhonePe, Google Pay ಗ್ರಾಹಕರು!

 

ನವದೆಹಲಿ: ಶನಿವಾರ ಬೆಳಗ್ಗೆಯಿಂದಲೇ ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ ಕಂಡು ಬಂದಿದ್ದು, ಬಳಕೆದಾರರು ಡಿಜಿಟಲ್ ವಹಿವಾಟು (Digital Payment) ನಡೆಸಲು ಪರದಾಡುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಯುಪಿಐ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ಯುಪಿಐ ಸೇವೆಗಳಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಳಕೆದಾರರು ಡಿಜಿಟಲ್ ವಹಿವಾಟು (Digital Payment) ನಡೆಸಲು ಪರದಾಡುತ್ತಿದ್ದಾರೆ. ಈ ದಿಢೀರ್ ತೊಂದರೆಯಿಂದ ಯುಪಿಐ ಮೇಲೆ ಪರಿಣಾಮ ಬೀರಿದೆ. ಅನೇಕ ಬಳಕೆದಾರರು ಪಾವತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ಇನ್ನು ಡೌನ್‌ಡೆಕ್ಟರ್ ವರದಿಗಳ ಪ್ರಕಾರ, ಮಧ್ಯಾಹ್ನದ ವೇಳೆಗೆ ಈ ಯುಪಿಐ ಸಮಸ್ಯೆಗಳ ಬಗ್ಗೆ ಸುಮಾರು 1,168 ದೂರುಗಳು ಬಂದಿವೆ. ಅವುಗಳಲ್ಲಿ, ಗೂಗಲ್ ಪೇ ಬಳಕೆದಾರರು 96 ಸಮಸ್ಯೆಗಳನ್ನು ವರದಿ ಮಾಡಿದ್ದಾರೆ, ಪೇಟಿಎಂ ಬಳಕೆದಾರರು 23 ಸಮಸ್ಯೆಗಳ ಬಗ್ಗೆ ದೂರಿದ್ದಾರೆ. ಯುಪಿಐ ಈ ಸಮಸ್ಯೆಯನ್ನು ಇನ್ನೂ ಪರಿಹರಿಸಿಲ್ಲ. ಕಳೆದ ಕೆಲವು ದಿನಗಳಿಂದ ಯುಪಿಐ ಈ ರೀತಿಯ ಸಮಸ್ಯೆ ಎದುರಿಸುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಯುಪಿಐ ಸೇವೆಗಳಲ್ಲಿನ ವೈಫಲ್ಯದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ತಜ್ಞರು ಸರ್ವರ್ ಓವರ್‌ಲೋಡ್‌ಗಳು, ನಿಗದಿತ ನಿರ್ವಹಣೆ ಅಥವಾ ಸಂಭಾವ್ಯ ಸೈಬರ್ ಭದ್ರತಾ ಸಮಸ್ಯೆಗಳು ಇರಬಹುದು ಎಂದು ಶಂಕಿಸಿದ್ದಾರೆ. ಈ ಯುಪಿಐ ಸ್ಥಗಿತವು ಹಲವಾರು ಹಣಕಾಸು ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ.

ವಿಶೇಷವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತಹ ಪ್ರಮುಖ ಬ್ಯಾಂಕ್‌ಗಳ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಲಾಗಿದೆ. UPI ಅನ್ನು ಮೇಲ್ವಿಚಾರಣೆ ಮಾಡುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಈ ಸಮಸ್ಯೆಗೆ ಕೆಲವು ತಾಂತ್ರಿಕ ತೊಂದರೆಗಳು ಕಾರಣವೆಂದು ಹೇಳಿದೆ.

NPCI ಹೇಳಿದ್ದೇನು...?

ಇನ್ನು ಯುಪಿಐ ಸೇವೆಗಳಲ್ಲಿನ ವ್ಯತ್ಯಯದ ಕುರಿತು NPCI ಪ್ರತಿಕ್ರಿಯೆ ನೀಡಿದ್ದು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಂಸ್ಥೆ, 'NPCI ಪ್ರಸ್ತುತ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಭಾಗಶಃ UPI ವಹಿವಾಟು ನಿರಾಕರಣೆಯಾಗಿದೆ. ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ನಿಮಗೆ ಈ ಬಗ್ಗೆ ತಿಳಿಸುತ್ತೇವೆ. ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಪೋಸ್ಟ್ ಮಾಡಿದೆ.

Ads on article

Advertise in articles 1

advertising articles 2

Advertise under the article