ತನ್ನ ಪ್ರಿಯತಮೆಯನ್ನು ಗುಟ್ಟಾಗಿ ಸೂಟ್ ಕೇಸ್​ನಲ್ಲಿ ತುಂಬಿಸಿಕೊಂಡು ಬಾಯ್ಸ್ ಹಾಸ್ಟೆಲ್​ಗೆ ಬಂದ ವಿದ್ಯಾರ್ಥಿ! ಮುಂದೆ ಏನಾಯಿತು ನೋಡಿ...

ತನ್ನ ಪ್ರಿಯತಮೆಯನ್ನು ಗುಟ್ಟಾಗಿ ಸೂಟ್ ಕೇಸ್​ನಲ್ಲಿ ತುಂಬಿಸಿಕೊಂಡು ಬಾಯ್ಸ್ ಹಾಸ್ಟೆಲ್​ಗೆ ಬಂದ ವಿದ್ಯಾರ್ಥಿ! ಮುಂದೆ ಏನಾಯಿತು ನೋಡಿ...

ಚಂಡಿಗಢ: ವಿದ್ಯಾರ್ಥಿಯೊಬ್ಬ ತನ್ನ ಪ್ರಿಯತಮೆಯನ್ನು ಗುಟ್ಟಾಗಿ ಸೂಟ್ ಕೇಸ್​ನಲ್ಲಿ ತುಂಬಿಸಿಕೊಂಡು ಬಾಯ್ಸ್ ಹಾಸ್ಟೆಲ್​ಗೆ ಬರುವಾಗ ಸಿಕ್ಕಿಬಿದ್ದಿರುವ ಘಟನೆಯೊಂದು ನಡೆದಿದೆ.

ಹರ್ಯಾಣದ ಓಪಿ ಜಿಂದಾಲ್​ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಸಿಕೊಂಡು ಹುಡುಗರ ಹಾಸ್ಟೆಲ್ ಗೆ ಕರೆತರುವಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಸೂಟ್​ಕೇಸ್​ನಿಂದ ಯುವತಿಯೊಬ್ಬಳು ಆಚೆ ಬರುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹರ್ಯಾಣದ ಓಪಿ ಜಿಂದಾಲ್​ಯೂನಿವರ್ಸಿಟಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ತನ್ನ ಗರ್ಲ್ ಫ್ರೆಂಡ್ ಳನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹುಡುಗರ ಹಾಸ್ಟೆಲ್ ಗೆ ಬಂದಿದ್ದಾನೆ. ಹಾಸ್ಟೆಲ್ ಪ್ರವೇಶಿಸುತ್ತಲೇ ಸೂಟ್ ಕೇಸ್ ನೋಡಿದ ಭದ್ರತಾ ಸಿಬ್ಬಂದಿಗೆ ಅನುಮಾನ ಕಾಡಿದೆ.

ಇದೇ ವೇಳೆ ಸೂಟ್ ಕೇಸ್ ಅಲುಗಾಡಿದ್ದು ಕೂಡಲೇ ಸೆಕ್ಯುರಿಟಿ ಗಾರ್ಡ್ ಸೂಟ್ ಕೇಸ್ ಓಪನ್ ಮಾಡಲು ಹೇಳಿದ್ದಾರೆ. ಆರಂಭದಲ್ಲಿ ಆತ ಒಪ್ಪಿಲ್ಲವಾದರೂ ಬಳಿಕ ಅಲ್ಲಿದ್ದ ಸಿಬ್ಬಂದಿ ಸೂಟ್ ಕೇಸ್ ತೆರೆಯಲು ಪ್ರಯತ್ನಿಸಿದ್ದಾರೆ. ಬಳಿಕ ಸೂಟ್ ಕೇಸ್ ನಲ್ಲಿದ್ದ ಯುವತಿ ಹೊರ ಬರುತ್ತಲೇ ಸಿಬ್ಬಂದಿ ಹೌಹಾರಿದ್ದಾರೆ.

ವಿಚಾರವನ್ನು ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹುಡುಗಿ ಅದೇ ವಿಶ್ವವಿದ್ಯಾಲಯದವಳೇ ಅಥವಾ ಹೊರಗಿನವಳೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸುತ್ತಿದೆ.

ಇನ್ನು ಸೂಟ್ ಕೇಸ್ ನಿಂದ ಯುವತಿ ಆಚೆ ಬರುತ್ತಿರುವುದನ್ನು ಇತರೆ ಹಾಸ್ಟೆಲ್ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Ads on article

Advertise in articles 1

advertising articles 2

Advertise under the article