'ಮೀಫ್ ಎಕ್ಸಲೆನ್ಸ್ ಅವಾರ್ಡ್ 2025': ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ-ಮಹಿಳಾ PU ಕಾಲೇಜಿಗೆ ಅಭಿನಂದನೆ

ಮಂಗಳೂರು: ನಗರದ ಅಡ್ಯಾರ್ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಅಡಿಟೋರಿಯಂನಲ್ಲಿ ಗುರುವಾರ ದ.ಕ. ಉಡುಪಿ, ಕೊಡಗು, ಮತ್ತು ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮುಸ್ಲಿಂ ಎಜುಕೇಶನ್ ಇನ್ಸ್ಟಿಟ್ಯೂಷನ್ಸ್ ಫೆಡರೇಶನ್-ಮೀಫ್) ವತಿಯಿಂದ ನಡೆದ ‘ಮೀಫ್ ಎಕ್ಸಲೆನ್ಸ್ ಅವಾರ್ಡ್ 2024-25’ ರಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು 100% ಫಲಿತಾಂಶ ದಾಖಲಿಸಿದ ವಿದ್ಯಾ ಸಂಸ್ಥೆಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದ ಶಾಲಾ ಕಾಲೇಜುಗಳ ಪೈಕಿ ಶೇ.100 ಫಲಿತಾಂಶ ದಾಖಲಿಸಿದ ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ-ಮಹಿಳಾ PU ಕಾಲೇಜಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಣ್ಣೂರು ಶಾಲಾ ಕಾಲೇಜಿನ ಕಾರ್ಯದರ್ಶಿಗಳಾದ ಹಾಜಿ ಅಬ್ದುಲ್ ಮಜೀದ್ ಸಿತಾರ್,  ಸಂಚಾಲಕರಾದ ರಿಯಾಝ್ ಅಹ್ಮದ್, ಮುಖ್ಯ ಅಧ್ಯಾಪಕಿಯರಾದ ಸಂಶಾದ್, ಪ್ರಾಂಶುಪಾಲರಾದ ವಿಶಲಾಕ್ಷ್ಮಿ ಅವರು ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ಮತ್ತು ಮಹಿಳಾ PU ಕಾಲೇಜಿನ ಅಭಿನಂದನೆಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ಯೆನೆಪೋಯ ಗ್ರೂಪ್‌ನ ನಿರ್ದೇಶಕ ವೈ.ಅಬ್ದುಲ್ಲಾ ಜಾವೇದ್,  ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರಾದ ಸುಹೈಲ್ ಅಹಮದ್‌, ಬರಕಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಅಧ್ಯಕ್ಷ ಅಶ್ರಫ್ ಬಜ್ಪೆ, ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷ ಹರಿಪ್ರಸಾದ್ ರೈ, ಮೀಫ್ ನ ಗೌರವಾಧ್ಯಕ್ಷ ಉಮರ್ ಟೀಕೆ ಮತ್ತು ಮೀಫ್ ನ ಅಧ್ಯಕ್ಷ ಮೂಸಬ್ಬ ಬ್ಯಾರಿ, ಉಞ್ಞೆ ಹಾಜಿ, ಬಹರೈನ್‌ನ ಸಿನಾನ್ ಝಕರಿಯಾ, KA ಶಾದಲಿ, ಝಮೀರ್ ಅಹ್ಮದ್,  ರಿಯಾಝ್ ಅಹ್ಮದ್, KB ಮುಹಮ್ಮದ್ ಶಾರಿಕ್, ಪರ್ವಿಝ್ ಅಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.