
ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್'ಗೆ ಶೇ.100 ಫಲಿತಾಂಶ; 15 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ
ಮಲ್ಪೆ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ 100% ಫಲಿತಾಂಶ ದಾಖಲಿಸುವ ಮೂಲಕ ಶಾಲೆಯ ಮಕ್ಕಳು ಸಾಧನೆ ಮೆರೆದಿದ್ದಾರೆ.
ಶೇ 97.76 ಸಮಾನ ಅಂಕಗಳನ್ನು ಪಡೆದಿರುವ ಸಫಾ ಹಲೀಮಾ ಶಾಲೆಗೇ ಪ್ರಥಮ ಸ್ಥಾನ ಎನಿಸಿಕೊಂಡಿದ್ದಾರೆ. ಮೆಹೆಕ್(ಶೇ 96.8) ದ್ವಿತೀಯ, ಅಖ್ಸಾ ನೂರ್(ಶೇ 96.64) ತೃತೀಯ ಸ್ಥಾನ ಗಳಿಸಿದ್ದಾರೆ.
ಆಮ್ನ ಅನನ್(ಶೇ 96.48), ರಿಹಾ ಆಯಿಷಾ(ಶೇ 94.72), ಸಮೀಹ ಮುಸ್ಕಾನ್(ಶೇ 93.6), ಗಜಾನನ ಭಂಡಾರಿ(ಶೇ 92.32), ಮೊಹಮ್ಮದ್ ಅಯಾನ್ (ಶೇ 91.52), ರಿಹಾಬ್ ಕೌಸರ್ತ್(ಶೇ 91.52), ಫೈಹಾ ಪರ್ವೀನ್ (ಶೇ 90.4), ಇಫ್ರಾ ಕಪ್ತಿ (ಶೇ 87.36), ನೂಹ (ಶೇ 87.36), ಹುಮೈದ್(ಶೇ 87.2), ಆಮ್ನ(ಶೇ 86.72), ಇಕ್ರಃ ಸಮನ್(ಶೇ 86.24), ರೀನಾಝ್ (ಶೇ 84.32), ಮೊಹಮ್ಮದ್ ಝಇದಾನ್ (ಶೇ 83.2), ಕಪ್ತಿ ಮೊಹಮ್ಮದ್ ಅತುಫ್(ಶೇ 82.8) ಖತೀಜಾ ಐರಾ (ಶೇ 82.8), ಶೀಬಾ ನಾಝ್ (ಶೇ 82.8) ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
15 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಗೆ ಶೇ.100 ಫಲಿತಾಂಶದ ಜೊತೆಗೆ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್'ನ ಆಡಳಿತ ಮಂಡಳಿ ಅಭಿನಂದಿಸಿದೆ.