
ಎಸೆಸೆಲ್ಸಿ ಪರೀಕ್ಷೆ: ಉಚ್ಚಿಲ ಸರಸ್ವತಿ ಮಂದಿರ ಪ್ರೌಢ ಶಾಲೆಯ ಫಾತಿಮಾ ಶೈಫಾ-ಫಾತಿಮಾ ಶೈಮಾ ವಿಶಿಷ್ಟ ಸಾಧನೆ
Friday, May 2, 2025
ಉಚ್ಚಿಲ: 2024-25ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೊರಬಿದಿದ್ದು, ಉಚ್ಚಿಲ ಸರಸ್ವತಿ ಮಂದಿರ ಪ್ರೌಢ ಶಾಲೆಯ ಫಾತಿಮಾ ಶೈಫಾ 590(ಶೇ.95) ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಎನಿಸಿಕೊಂಡಿದ್ದಾಳೆ. ಇವರು ಉಚ್ಚಿಲ ಕಟ್ಟಿಂಗೇರಿಯ ಸಂಶುದ್ದೀನ್ ಹಾಗು ರಹಮತ್ ದಂಪತಿ ಪುತ್ರಿಯಾಗಿದ್ದಾಳೆ.
ಇದೇ ಶಾಲೆಯ ಫಾತಿಮಾ ಶೈಮಾ 550(ಶೇ.88) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಚ್ಚಿಲ ಪೊಲ್ಯದ ಮೊಹಮ್ಮದ್ ರಫೀಕ್ ಹಾಗು ಝೋಹರ ದಂಪತಿ ಪುತ್ರಿಯಾಗಿದ್ದಾಳೆ.