ಸಿನಿಮಾದ ಶೂಟಿಂಗ್: ವೇಳೆ ಕಾರು ಸ್ಟಂಟ್ ಮಾಡುವ ವೇಳೆ ಸ್ಥಳದಲ್ಲಿಯೇ ಸ್ಟಂಟ್​ಮ್ಯಾನ್ ಮೋಹನ್ ರಾಜ್ ಸಾವು

ಸಿನಿಮಾದ ಶೂಟಿಂಗ್: ವೇಳೆ ಕಾರು ಸ್ಟಂಟ್ ಮಾಡುವ ವೇಳೆ ಸ್ಥಳದಲ್ಲಿಯೇ ಸ್ಟಂಟ್​ಮ್ಯಾನ್ ಮೋಹನ್ ರಾಜ್ ಸಾವು

ಚೆನ್ನೈ: ಕಾಲಿವುಡ್​ ಸ್ಟಾರ್​ ಆರ್ಯ ನಟನೆಯ ಹೊಸ ಸಿನಿಮಾದ ಶೂಟಿಂಗ್ ಮಾಡುವ ವೇಳೆ ಸ್ಟಂಟ್​ಮ್ಯಾನ್ ಒಬ್ಬರು ನಿಧನರಾಗಿದ್ದಾರೆ. ಶೂಟಿಂಗ್​ನಲ್ಲಿ ಕಾರು ಸ್ಟಂಟ್ ಮಾಡುವಾಗ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ.

ತಮಿಳು ಸಿನಿ ರಂಗದ ಸಾಹಸ ಕಲಾವಿದ ರಾಜು ಎನ್ನುವರು ಕೊನೆಯುಸಿರೆಳೆದಿದ್ದಾರೆ. ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ಕಾರು ಸ್ಟಂಟ್​ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್​ ಮಾಡಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ ಘಟನೆಯಲ್ಲಿ ಸ್ಟಂಟ್ ಮ್ಯಾನ್ ರಾಜು ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ತಮಿಳು ನಟ ವಿಶಾಲ್ ಅವರು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾನು, ರಾಜು ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್​ಗಳನ್ನು ಮಾಡಿದ್ದೇವೆ. ಅವರನ್ನು ಕಳೆದುಕೊಂಡಿರುವುದು ನಮಗೆ ತುಂಬಾ ದುಃಖ ತರಿಸಿದೆ. ಕಾರು ಉರುಳಿಸುವ ಸನ್ನಿವೇಶದ ಸ್ಟಂಟ್ ಮಾಡುವಾಗ ಈ ಘಟನೆ ನಡೆದಿದೆ. ತಮಿಳು ಸಿನಿ ರಂದಲ್ಲಿ ಕೆಲವು ವರ್ಷಗಳಿಂದ ರಾಜು ರಿಸ್ಕ್​ ತೆಗೆದುಕೊಂಡು ಸ್ಟಂಟ್​ಗಳನ್ನು ಮಾಡುತ್ತಿದ್ದರು. ಆದರೆ ಇಂದು ಕೆಚ್ಚೆದೆಯ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ತಮಿಳು ಸಿನಿಮಾ ಶೂಟಿಂಗ್​ಗಳಲ್ಲಿ ಸ್ಟಂಟ್ ಮಾಡುತ್ತಿದ್ದ ರಾಜು ಎಲ್ಲರಿಗೂ ಪರಿಚಿತರಾಗಿದ್ದರು. ಪಾ.ರಂಜೀತ್ ನಿರ್ದೇಶನದಲ್ಲಿ ಆರ್ಯ ಅವರು ನಟಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ರಾಜು ಸ್ಟಂಟ್ ಮಾಡುವಾಗ ಇದು ನಡೆದಿದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ. ಕಾರು ಎತ್ತರಕ್ಕೆ ಹಾರಬೇಕಾದ ಹೈ-ರಿಸ್ಕ್ ಆಕ್ಷನ್ ಸೀಕ್ವೆನ್ಸ್ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ನಡೆದ ಅವಘಡದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Ads on article

Advertise in articles 1

advertising articles 2

Advertise under the article