ಕೊಲೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಕೊಲೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ನವದೆಹಲಿ: ಕೊಲೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.

ಇದೇ ಜುಲೈ 16ರಂದು ಕೊಲೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲಾಗುತ್ತಿದೆ. ಹೀಗಾಗಿ ಅವರ ಪರ ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ರಾಜತಾಂತ್ರಿಕ ಮಾರ್ಗಗಳನ್ನು ಆದಷ್ಟು ಬೇಗ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದು, ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣವನ್ನು ಜುಲೈ 14 ರಂದು ವಿಚಾರಣೆಗೆ ನಿಗದಿಪಡಿಸಿದೆ.

ಶರಿಯಾ ಕಾನೂನಿನಡಿಯಲ್ಲಿ ಮೃತರ ಕುಟುಂಬಕ್ಕೆ ಬ್ಲಡ್‌ ಮನಿ(ಪರಿಹಾರ) ಪಾವತಿಸಲು ಅನುಮತಿಸುವ ಬಗ್ಗೆ ಪರಿಶೀಲಿಸಬಹುದು ಎಂದು ಸುಭಾಷ್ ಚಂದ್ರನ್ ಕೆ.ಆರ್ ಅವರು ವಾದಿಸಿದರು.

ಬ್ಲಡ್‌ ಮನಿ ಪಾವತಿಸಿದರೆ ಮೃತರ ಕುಟುಂಬವು ಕೇರಳದ ನರ್ಸ್‌ಗೆ ಕ್ಷಮೆ ನೀಡಬಹುದು ಎಂದು ಅವರು ಕೋರ್ಟ್ ಗೆ ತಿಳಿಸಿದರು.

ಬಳಿಕ ಅರ್ಜಿಯ ಪ್ರತಿಯನ್ನು ಅಟಾರ್ನಿ ಜನರಲ್‌ಗೆ ತಲುಪಿಸಲು ನ್ಯಾಯಪೀಠ, ವಕೀಲರಿಗೆ ಸೂಚಿಸಿದೆ ಮತ್ತು ಅವರ ಸಹಾಯವನ್ನು ಕೋರಿತು.

ಏತನ್ಮಧ್ಯೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಗುರುವಾರ ನಿಮಿಷಾ ಪ್ರಿಯಾ ಅವರನ್ನು ಉಳಿಸಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಧ್ಯ ಪ್ರವೇಶಿಸಬೇಕು ಎಂದು ಕೋರಿದ್ದಾರೆ.

ನಿಮಿಷಾ ಪ್ರಿಯಾ ಅವರಿಗೆ ಕ್ಷಮಾದಾನ ನೀಡಲು ಅಗತ್ಯವಾದ ಬ್ಲಡ್‌ ಮನಿ ಸಂಗ್ರಹಿಸಲು ಜನರು ಉದಾರವಾಗಿ ದೇಣಿಗೆ ನೀಡಬೇಕೆಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಏನಿದು ಬ್ಲಡ್‌ ಮನಿ?

ಬ್ಲಡ್‌ ಮನಿ ಅಂದ್ರೆ ರಕ್ತ ಹಣ. ಅಂದ್ರೆ ಮುಸ್ಲಿಂ ರಾಷ್ಟ್ರವಾಗಿರೋ ಯೆಮನ್ ದೇಶದಲ್ಲಿ ಯಾರಾದ್ರೂ ಗಲ್ಲು ಶಿಕ್ಷೆಗೆ ಗುರಿಯಾಗಿದ್ರೆ ಅವ್ರಿಗೆ ಅದ್ರಿಂದ ಪಾರಾಗಲು ಇರೋ ಕೊನೆಯ ಅವಕಾಶ ಅಂದ್ರೆ ಬ್ಲಡ್‌ ಮನಿ. ಅದು ಹೇಗಿರುತ್ತೆ ಅಂದ್ರೆ, ಯಾರು ಮರ್ಡರ್‌ ಆಗಿರ್ತಾರೋ ಅವರ ತಂದೆ, ತಾಯಿ ಅಥವಾ ಕುಟುಂಬಸ್ಥರು ಹತ್ಯೆ ಮಾಡಿದವ್ರನ್ನು ಕ್ಷಮಿಸೋದು. ಜೊತೆಗೆ ಅವರಿಗೆ ರಕ್ತ ಹಣ ಅಥವಾ ಪರಿಹಾರದ ಹಣ ಸ್ವೀಕಾರಕ್ಕೆ ಒಪ್ಪಿಕೊಳ್ಳುವುದು. ಹಾಗೇ ಅವರು ಎಷ್ಟು ಹಣಕ್ಕೆ ಡಿಮ್ಯಾಂಡ್‌ ಮಾಡ್ತಾರೋ ಅಷ್ಟು ಹಣವನ್ನು ಹತ್ಯೆ ಮಾಡಿದವರ ಕುಟುಂಬ ಕೊಡಬೇಕು ಮತ್ತು ಅದನ್ನು ಅವರು ಒಪ್ಪಿಕೊಂಡರೆ ಮರಣದಂಡನೆ ಶಿಕ್ಷೆ ರದ್ದಾಗುತ್ತೆ.

Ads on article

Advertise in articles 1

advertising articles 2

Advertise under the article