
ಚೆಸ್ ಪಂದ್ಯಾಟ; ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮೂಳೂರಿನ ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್ ವಿದ್ಯಾರ್ಥಿನಿ ಹನನ್ ಅಬ್ದುಲ್ಲಾ
Monday, August 4, 2025
ಉಡುಪಿ: ಡಿಕೆಎಸ್‌ಸಿ ಅಧೀನದ ಮೂಳೂರಿನ ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್ ವಿದ್ಯಾರ್ಥಿನಿ ಹನನ್ ಅಬ್ದುಲ್ಲಾ ಚೆಸ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅನುದಾನಿತ ಶಾಲೆ ಆದಿ ಉಡುಪಿ ಸಹ ಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಅಬ್ದುಲ್ಲ ಮೊಯಿದಿನ್ ಹಾಗು ಶಬ್ನಮ್ ಅಬ್ದುಲ್ಲ ದಂಪತಿಯ ಪುತ್ರಿಯಾಗಿದ್ದಾಳೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹನನ್ ಅಬ್ದುಲ್ಲಾ ಸಾಧನೆಯನ್ನು ಶಾಲಾ ಆಡಳಿತಾಧಿಕಾರಿ, ಪ್ರಾಂಶುಪಾಲರು, ಮುಖ್ಯೋಪಾದ್ಯಾಯಿನಿ ಹಾಗು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.