
ಉಡುಪಿ; ಸೌಂದರ್ಯ ತಜ್ಞರ ಕಾರ್ಯಗಾರ
Wednesday, August 6, 2025
ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸೌಂದರ್ಯ ತಜ್ಞೆಯರು ಸೇರಿಕೊಂಡು ಉಡುಪಿಯ ಕಿದಿಯೂರಿನ ಅನಂತ ಶಯನ ಸಭಾ ಭವನದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಮಂಗಳವಾರದಂದು ಆಯೋಜಿಸಿದ್ದರು.
ಈ ಕಾರ್ಯಾಗಾರವನ್ನು ಉಡುಪಿಯ ಹಿರಿಯ ಸೌಂದರ್ಯ ತಜ್ಞೆಯರಾದ ಎಡ್ನ ಜತ್ತನ್ನ, ಜಯಶ್ರೀ ಭಂಡಾರಿ ಲತಾ ವಾದಿರಾಜ್, ಶರ್ಲಿ ಅಮ್ಮನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರದಲ್ಲಿ ಮಂಗಳೂರಿನ ಖ್ಯಾತ ಸೌಂದರ್ಯ ತಜ್ಞ ಮನು ಮುರಳೀಧರ್ ಅವರು ಆಧುನಿಕ ವಿಧಾನದ ಮೇಕಪ್ ಗಳ ಬಗ್ಗೆ ಒಂದು ದಿನ ವಿವರವಾಗಿ ತಿಳಿಸಿ ಕೊಟ್ಟರು.
ಕಾರ್ಯಾಗಾರದಲ್ಲಿ ಉಡುಪಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ 300ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಪಾಲ್ಕೊಂಡು ಇದರ ಸದುಪಯೋಗವನ್ನು ಪಡೆದರು.
ಕಾರ್ಯಕ್ರಮವನ್ನು ರೋಸ್ ಬ್ಯೂಟಿ ಪಾರ್ಲರ್ ಮಾಲಕಿ ಎಡ್ನ ಜತ್ತಣ್ಣ, ಲಕ್ಷ್ಮಿ ಬ್ಯೂಟಿ ವರ್ಲ್ಡ್, ರೋಸ್ ಕಾಸ್ಮೆಟಿಕ್ಸ್, ಪಟೇಲ ಕುಂದಾಪುರ ಅವರು ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದರು..