
ಬಿಜೆಪಿಯಿಂದ ಶಾಲಾ ಮಕ್ಕಳಿಗೆ ವಿಷ ಭಾಗ್ಯ: ಕಾಂಗ್ರೆಸ್ ಯುವ ಮುಖಂಡ ಎ.ಕೆ ಅನ್ಸಾಫ್ ಕಿಡಿ
ಮಂಗಳೂರು: ಬೆಳಗಾವಿಯ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ ಕಿರಾತಕರಿಗೆ ಗರಿಷ್ಠ ಶಿಕ್ಷೆ ನೀಡಬೇಕು. ಇದು ಬಿಜೆಪಿಯಿಂದ ಶಾಲಾ ಮಕ್ಕಳಿಗೆ ವಿಷ ಭಾಗ್ಯ ಎಂದು ಕಾಂಗ್ರೆಸ್ ಯುವ ಮುಖಂಡ ಎ ಕೆ ಅನ್ಸಾಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿಯ ಹಿರಿಯ ನಾಯಕ ಈಶ್ವರ್ ಖಂಡ್ರೆ ಆಪ್ತವಲಯದಲ್ಲಿ ಕಾಣಿಸಿಕೊಳ್ಳುತ್ತಿರುವ ಎ ಕೆ ಅನ್ಸಾಫ್, ಈ ಕೃತ್ಯದ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ನಾಯಕರು ಅಧಿಕಾರ ಕಳೆದು ಕೊಂಡು ಹೈರಾಣ್ ಆಗಿದ್ದಾರೆ, ಸಮಾಜದ ಸ್ವಾಸ್ಥ್ಯ ಕೆಡಿಸುವುದನ್ನೆ ಕಾಯಕವನ್ನಾಗಿಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ಬಿಜೆಪಿಯ ಪ್ರಚೋದನೆಯೇ ಕಾರಣ. ಅದರ ಮುಂದುವರಿದ ಭಾಗವಾಗಿದೆ ಈ ಕೃತ್ಯ. ಆ ಪಕ್ಷದ ಹಿರಿಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ, ಕಿರಿಯ ನಾಯಕರಿಗೆ ಸಮ ಸಮಾಜವನ್ನು ಕಟ್ಟುವ ಬಗ್ಗೆ ಅರಿವು ಮೂಡಿಸಲಿ ಎಂದು ಕಿವಿಮಾತು ಹೇಳಿದ್ದಾರೆ.
ಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಮಕ್ಕಳಿಗೆ ವಿಷವಿಕ್ಕಿದ ಪ್ರಕರಣ ರಾಜ್ಯಾದ್ಯಾಂತ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರವರು
"ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರೇ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.