
ಬ್ರಹ್ಮಾವರ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆ; ಠಾಣೆಗೆ ಪೊಲೀಸ್ ಬಿಗಿಭದ್ರತೆ
Thursday, August 21, 2025
ಉಡುಪಿ: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಧ್ಯಾಹ್ನ1.25 ರ ಹೊತ್ತಿಗೆ ಒಳಮಾರ್ಗದ ಮೂಲಕ ಬ್ರಹ್ಮಾವರ ಠಾಣೆಗೆ ಕರೆದೊಯ್ಯಲಾಗಿದೆ.
ಠಾಣೆಯ ಸುತ್ತಲೂ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಪತ್ರಕರ್ತರು, ಸಾರ್ವಜನಿಕರ ಸಹಿತ ಯಾರೂ ಸುಳಿಯದಂತೆ ಬಂದೋಬಸ್ತ್ ಮಾಡಲಾಗಿದೆ. ತಿಮರೋಡಿ ಅವರನ್ನು ತೀವ್ರ ವಿಚರಾಣೆಗೆ ಒಳಪಡಿಸಲಾಗಿದ್ದು, ಈ ಮಧ್ಯೆ ತಿಮರೋಡಿ ಅವರ ವಕೀಲರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಜಾಮೀನು ಕೊಡಿಸುವ ನಿಟ್ಟಿನಲ್ಲಿ ಭದ್ರತಾ ಠೇವಣಿ ಮತ್ತು ಪಹಣಿ ಪತ್ರದೊಂದಿಗೆ ವಕೀಲರು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಕಳ ಉಪವಿಭಾಗದ ಎಎಸ್‌ಪಿ ಹರ್ಷ ಪ್ರಿಯಂವದಾ ಹಾಗೂ ಕುಂದಾಪುರ ಡಿವೈಎಸ್‌ಪಿ ಎಚ್. ಡಿ ಕುಲಕರ್ಣಿ ಅವರು ಸ್ಥಳದಲ್ಲಿದ್ದಾರೆ.