
'ಉಡುಪಿ ಉಚ್ಚಿಲ ದಸರಾ'ಕ್ಕೆ ಸೇವೆ, ಸಹಕಾರ ನೀಡಿದ ಮಹಾನಿಯರಿಗೆ ಸನ್ಮಾನ; ಪತ್ರಕರ್ತ ಹರೀಶ್ ಹೆಜಮಾಡಿ, ಬಾಲಕೃಷ್ಣ ಪೂಜಾರಿ, ಸತೀಶ್ ಅಮೀನ್ ಪಡುಕರೆಗೆ ಆತ್ಮೀಯ ಸನ್ಮಾನ
ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ 4ನೇ ವರ್ಷದ 'ಉಡುಪಿ ಉಚ್ಚಿಲ ದಸರಾ' ಕಾರ್ಯಕ್ರಮದಲ್ಲಿ ಮಂಗಳವಾರ ದಸರಾವನ್ನು ಸುಸೂತ್ರವಾಗಿ ನಡೆಯುವಂತೆ ಸೇವೆ, ಸಹಕಾರ ನೀಡಿದವರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ದಸರಾ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸೇವೆ, ಸಹಕಾರ ನೀಡುತ್ತಿರುವವರನ್ನು ಗುರುತಿಸಿ ಗೌರವಿಸಲಾಯಿತು.
ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷ, ಪತ್ರಕರ್ತ ಹರೀಶ್ ಹೆಜಮಾಡಿ, ಪತ್ರಕರ್ತ ಬಾಲಕೃಷ್ಣ ಪೂಜಾರಿ ಉಚ್ಚಿಲ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ, ಫೋಟೋಗ್ರಾಫರ್ ಸಚಿನ್ ಉಚ್ಚಿಲ ಅವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಇದೇ ವೇಳೆ ದಸರಾ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಜನಾ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸುತ್ತಿರುವ ಶಿಕ್ಷಕ ಚಂದ್ರಶೇಖರ ಸುವರ್ಣ, ಲೋಕೇಶ್ ಕುಮಾರ್, ದೇವರ ಅಡುಗೆ ಮಾಡುತ್ತಿರುವ ಪಾಕತಜ್ಞ ನಾಗೇಶ್ ರಾವ್, ನೈವೇದ್ಯ ತಯಾರಿಸುತ್ತಿರುವ ಹರೀಶ್ ಭಟ್ ಪಡುಬಿದ್ರೆ, ವಸ್ತು ಪ್ರದರ್ಶನದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಪಕ್ಷಿಗಳ ಪ್ರದರ್ಶನಕ್ಕಿಟ್ಟಿರುವ ಕಾರ್ಕಳದ ಪ್ರಶಾಂತ್ ಕೆ.ಎಸ್., ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಸೆಫ್, ವಸ್ತು ಪ್ರದರ್ಶನದಲ್ಲಿ ಅಲಂಕಾರಿಕ ಮೀನುಗಳನ್ನು ಪ್ರದರ್ಶನಕ್ಕಿಟ್ಟಿರುವ ಶಶಿ ಕುಮಾರ್ ಕಾರ್ಕಳ, ಚಿತ್ರ ಕಲಾವಿದ ಅಖಿಲೇಶ್ ಆಚಾರ್ಯ, CA ಗೌರೀಶ್ ಕಟೀಲ್, ಸುಧಾಕರ ಮೆಂಡನ್, ರಘು ಪಿತ್ರೋಡಿ, ಶೇಖರ ಪುತ್ರನ್ ಎರ್ಮಾಳ್, ರಮೇಶ್ ಮೆಂಡನ್, ಮೋಹನ್ ಬಂಗೇರ ಕಾಪು, ಸದಾನಂದ ದೇವಾಡಿಗ, ರಮೇಶ್ ಕೋಟ್ಯಾನ್, ವ್ಯಂಗ್ಯ ಚಿತ್ರಗಾರ್ತಿ ನಸ್ಮಿತ ನಾರಾಯಣ್ ಅವರನ್ನು ಸ್ಮರಣಿಕೆ, ಶಾಲು ನೀಡಿ ಗೌರವಿಸಲಾಯಿತು.
ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಜೊತೆ ಕಾಂಗ್ರೆಸ್ ಮುಖಂಡ, ಉಡುಪಿ ಹುಂಡೈ ಮೋಟಾರ್ಸ್ ಮಾಲಕ ಪ್ರಸಾದ್ ರಾಜ್ ಕಾಂಚನ್, ಅಧ್ಯಕ್ಷ ಜಯ ಸಿ.ಕೋಟ್ಯಾನ್, ಸಂಧ್ಯಾದೀಪ ಸುನೀಲ್, ಉಷಾ ರಾಣಿ ಮಂಗಳೂರು, ಸುಗುಣ ಕರ್ಕೇರ ಸನ್ಮಾನವನ್ನು ನಡೆಸಿಕೊಟ್ಟರು.