ಪಾಕ್ ಬಗ್ಗುಬಡಿದ ಭಾರತಕ್ಕೆ ಏಷ್ಯಾ ಕಪ್!

ಪಾಕ್ ಬಗ್ಗುಬಡಿದ ಭಾರತಕ್ಕೆ ಏಷ್ಯಾ ಕಪ್!

ದುಬೈ: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2025 ಟೂರ್ನಿಯ ರಣರೋಚಕ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ರನ್ ಗಳಿಂದ ಬಗ್ಗುಬಡಿದ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತ ಪರ ಆಕರ್ಷಕ ಶತಕ ಭಾರಿಸಿದ ತಿಲಕ್ ವರ್ಮಾ ತಂಡ ಏಷ್ಯಾ ಕಪ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೇವಲ 6 ತಿಂಗಳ ಹಿಂದಷ್ಟೇ ದುಬೈನಲ್ಲಿ ಏಕದಿನ ಮಾದರಿಯಲ್ಲಿ ನಡೆದ ಐಸಿಸಿ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದಿದ್ದ ಟೀಂ ಇಂಡಿಯಾ ಇದೀಗ ಟಿ20 ಮಾದರಿಯಲ್ಲಿ ನಡೆದ ಏಷ್ಯಾ ಕಪ್ ನಲ್ಲೂ ವಿಕ್ರಮ ಮೆರೆದಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 146 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ 9ನೇ ಬಾರಿ ಏಷ್ಯಾ ಕಪ್ ಜಯಿಸಿತು.

ಗೆಲ್ಲಲು ಸಾಧಾರಣ ಗುರಿ ಪಡೆದ ಭಾರತ ತಂಡ ಮೊದಲ 4 ಓವರ್ ಗಳಲ್ಲಿ 20 ರವ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಉತ್ತಮ ಫಾರ್ಮ್ ನಲ್ಲಿದ್ದ ಅಭಿಷೇಕ್ ಶರ್ಮಾ(5), ನಾಯಕ ಸೂರ್ಯಕುಮಾರ್ ಯಾದವ್ (1), ಶುಭಮನ್ ಗಿಲ್ 12(10) ವಿಕೆಟ್ ಅನ್ನು ಫಾಹಿಮ್ ಅಶ್ರಫ್ ಮತ್ತು ಶಾಹಿನ್ ಶಾ ಅಫ್ರಿದ್ ಅವರು ಉರುಳಿಸಿದರು. ಇದು ಭಾರತದ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ತಾಳ್ಮೆಯಿಂದ 4ನೇ ವಿಕೆಟ್ ಗೆ 57 ರನ್ ಗಳ ಜೊತೆಯಾಟವಾಡಿದರು.

13ನೇ ಓವರ್ ನಲ್ಲಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಗೆ ದೊಡ್ಡ ಹೊಡೆತವನ್ನು ಹೊಡೆಯಲು ಯತ್ನಿಸಿ ಸಂಜು ಸ್ಯಾಮ್ಸನ್ ಅವರು ಫರ್ಹಾನ್ ಅವರಿಗೆ ಕ್ಯಾಚ್ ನೀಡಿದರು. ಆ ಬಳಿಕ ಜೊತೆಯಾದ ತಿಲಕ್ ವರ್ಮಾ ಮತ್ತು ಶಿವಂ ದುಬೆ ಜೋಡಿಯು ಸಂಪೂರ್ಣವಾಗಿ ಪಾಕ್ ಕೈಯಿಂದ ಪಂದ್ಯವನ್ನು ಕಸಿದು ಕೊಂಡಿತು. ತಿಲಕ್ ವರ್ಮಾ ಅವರು

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ಅದ್ಬುತ ಆರಂಭ ಪಡೆಯಿತು. ಆರಂಭಿಕರಾದ ಸಾಹಿಬ್ಝಾದ ಫರ್ಹಾನ್ ಮತ್ತು ಫಖರ್ ಅವರು ಕೇವಲ 9.4 ಓವರ್ ಗಳಲ್ಲಿ 84 ರನ್ ಗಳಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಪವರ್ ಪ್ಲೇನಲ್ಲಿ ಈ ಜೋಡಿ 45 ರನ್ ಕಲೆ ಹಾಕಿತ್ತು. ಸ್ಪಿನ್ನರ್ ವರುಣ್ ಯಾದವ್ ಅವರು ಉತ್ತಮವಾಗಿ ಆಡುತ್ತಿದ್ದ ಸಾಹಿಬ್ಝಾದಾ ಫರ್ಹಾನ್(38 ಎಸೆತದಲ್ಲಿ 57) ಅವರನ್ನು ತಿಲಕ್ ವರ್ಮಾ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಯಶಸ್ವಿಯಾದರು. ಆದರೂ ಪಾಕಿಸ್ತಾನದ ಆರ್ಭಟ ಮಾತ್ರ ನಿಂತಿರಲಿಲ್ಲ.

ಈ ಟೂರ್ನಿಯಲ್ಲಿ ನಿರಂತರ 4 ಬಾರಿ ಸೊನ್ನೆಗೆ ಔಟಾಗಿರುವ ಖ್ಯಾತಿಯ ಸಯೀಮ್ ಅಯೂಬ್ ಅವರೂ ಫರ್ಹಾನ್ ಜೊತೆ ಸೇರಿ ಭಾರತದ ಬೌಲರ್ ಗಳ ವಿರುದ್ದ ಪ್ರಹಾರಕ್ಕೆ ಮುಂದಾಗಿದ್ದರು. ಈ ಹಂತದಲ್ಲಿ ಪಾಕಿಸ್ತಾನ 200 ರನ್ ಕಲೆ ಹಾಕಬಹುವ ನಿರೀಕ್ಷೆಯಲ್ಲಿತ್ತು. ಆದರೆ ಕುಲ್ದೀಪ್ ಯಾದವ್ ಅವರು ಈ ಜೋಡಿಗೆ ಸಂಚಕಾರ ತಂದರು. 14ನೇ ಓವರ್ ನಲ್ಲಿ ಸಯೀಮ್ ಅಯೂಬ್ ಅವರನ್ನು ಪೆವಿಲಿಯನ್ ಗೆ ಅಟ್ಟಿದರು. ಆ ಬಳಿಕ ಫಖರ್ ಝಮಾನ್ ಅವರನ್ನು ವರುಣ್ ಅವರು ಕುಲ್ದೀಪ್ ಯಾದವ್ ಅವರಿಗೆ ಕ್ಯಾಚ್ ಕೊಡಿಸಿದರು. ಅಲ್ಲಿಂದ ಬಳಿಕ ಪಾಕಿಸ್ತಾನ ತಂಡದ ಬ್ಯಾಟಿಂಗ್ ಮೇಲೇಳಲೇ ಇಲ್ಲ. ಅಂತಿಮವಾಗಿ ತಂಡ 146ಕ್ಕೆ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ 20 ಓವರ್ ಗಳಲ್ಲಿ 57(38), ಫಖರ್ ಝಮಾನ್ 46(35), ಸಯೀಂ್ ಅಯೂಬ್ 14(11), ಕುಲ್ದೀಪ್ ಯಾದವ್ 30ಕ್ಕೆ 4, ಬುಮ್ರಾ 25ಕ್ಕೆ 2, ಅಕ್ಷರ್ ಪಟೇಲ್ 28ಕ್ಕೆ 2, ವರುಣ್ ಚಕ್ರವರ್ತಿ 30ಕ್ಕೆ 2

ಭಾರತ 19.4 ಓವರ್ ಗಳಲ್ಲಿ 150/5, ತಿಲಕ್ ವರ್ಮಾ ಅಜೇಯ 69(53), ಶಿವಂ ದುಬೆ 33(22), ಸಂಜು ಸ್ಯಾಮ್ಸನ್ 24(21), ಫಹೀಮ್ ಅಶ್ರಫ್ 29ಕ್ಕೆ 3, ಶಾಹಿನ್ ಶಾ ಅಫ್ರಿದಿ 20ಕ್ಕೆ 1, ಅಬ್ರಾರ್ ಅಹ್ಮದ್ 29ಕ್ಕೆ 1

Ads on article

Advertise in articles 1

advertising articles 2

Advertise under the article