ಮೈ ನವಿರೇಳಿಸಿದ ‘ಉಡುಪಿ ಉಚ್ಚಿಲ ದಸರಾ’ ಕುಸ್ತಿ ಸ್ಪರ್ಧೆ; ಪ್ರಕಾಶ್ ರಾಥೋಡ್‌ಗೆ  'ಉಚ್ಚಿಲ ದಸರಾ ಕುಮಾರ್'- ಮನೋಜ್​​ಗೆ 'ಉಚ್ಚಿಲ ದಸರಾ ಕೇಸರಿ'-ಶೌರ್ಯಗೆ 'ಉಚ್ಚಿಲ ದಸರಾ ಕುಮಾರಿ' ಪ್ರಶಸ್ತಿ

ಮೈ ನವಿರೇಳಿಸಿದ ‘ಉಡುಪಿ ಉಚ್ಚಿಲ ದಸರಾ’ ಕುಸ್ತಿ ಸ್ಪರ್ಧೆ; ಪ್ರಕಾಶ್ ರಾಥೋಡ್‌ಗೆ 'ಉಚ್ಚಿಲ ದಸರಾ ಕುಮಾರ್'- ಮನೋಜ್​​ಗೆ 'ಉಚ್ಚಿಲ ದಸರಾ ಕೇಸರಿ'-ಶೌರ್ಯಗೆ 'ಉಚ್ಚಿಲ ದಸರಾ ಕುಮಾರಿ' ಪ್ರಶಸ್ತಿ

ಫೋಟೋ: ಸಚಿನ್ ಉಚ್ಚಿಲ 

ಉಚ್ಚಿಲ: ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳು ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಾ ಕುಸ್ತಿಪಟುಗಳನ್ನು ಹುರಿದುಂಬಿಸುತ್ತಿದ್ದರು. ನೆಚ್ಚಿನ ಕುಸ್ತಿಪಟುಗಳು ನೆಲಕ್ಕುರುಳಿದಾಗ ಓಹೋ... ಎಂದು ಉದ್ಗಾರ ತೆಗೆಯುತ್ತಿದ್ದರು. ಈ ಮೈ ನವಿರೇಳಿಸುವಂತಿದ್ದ ಪುರುಷ ಹಾಗೂ ಮಹಿಳಾ ಕುಸ್ತಿಪಟುಗಳ ಸೆಣಸಾಟಕ್ಕೆ ಸಾಕ್ಷಿಯಾಗಿದ್ದು ‘ಉಡುಪಿ ಉಚ್ಚಿಲ ದಸರಾ’ ಕುಸ್ತಿ ಸ್ಪರ್ಧೆ.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ದಲ್ಲಿ ರವಿವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷ ಹಾಗು ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯಲ್ಲಿ 'ಉಡುಪಿ-ಉಚ್ಚಿಲ ದಸರಾ ಕುಮಾರ್' ಪ್ರಶಸ್ತಿಯನ್ನು ಪ್ರಕಾಶ್ ರಾಥೋಡ್(MP ಕೋಡಿಕಲ್), 'ಉಡುಪಿ-ಉಚ್ಚಿಲ ದಸರಾ ಕೇಸರಿ' ಪ್ರಶಸ್ತಿಯನ್ನು, ಮನೋಜ್(ಶಿವಾಜಿ ಫಿಸಿಕಲ್ ಬೋಳಾರ) ಹಾಗು 'ಉಡುಪಿ-ಉಚ್ಚಿಲ ದಸರಾ ಕುಮಾರಿ' ಪ್ರಶಸ್ತಿಯನ್ನು ಶೌರ್ಯ(ಶಿವಾಜಿ ಫಿಸಿಕಲ್ ಬೋಳಾರ) ಪಡೆದುಕೊಂಡರು.

ಪುರುಷ- ಹಾಗು ಮಹಿಳೆಯರ ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ಶಿವಾಜಿ ಫಿಸಿಕಲ್ ಬೋಳಾರ ತನ್ನದಾಗಿಸಿಯೋಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.



ಪುರುಷರ ವಿಭಾಗ (37 ಕೆಜಿ)

1. ಮನೋಜ್- ವಿಬಿ ಬೆಂಗ್ರೆ 

2. ವರದೇ ಗೌಡ-ಜೈ ಆಂಜನೇಯ, ಅಡ್ಯಾರ್ ಪದವು

3. ಆಯುಷ್-ವಿಬಿ ಬೆಂಗ್ರೆ

3. ಮಣಿಕಂಠ-SR ಕೋಡಿಕಲ್ 

42 ಕೆಜಿ ವಿಭಾಗ  

1. ಮೊಹಮ್ಮದ್ ಫಾಹಿಮ್- BHL ಸುರತ್ಕಲ್ 

2. ಪರಶುರಾಮ್-MP ಕೋಡಿಕಲ್ 

3. ಕಿಶನ್-ಆಂಜನೇಯ ಸಸಿಹಿತ್ಲು 

3. ಪೃಥ್ವಿ ಖಾರ್ವಿ-ವಿಬಿ ಬೆಂಗ್ರೆ

46 ಕೆಜಿ ವಿಭಾಗ  

1. ಪೃಥ್ವಿರಾಜ್ -MP ಕೋಡಿಕಲ್ 

2. ದೇವರಾಜ್- SR ಕೋಡಿಕಲ್ 

3. ಸೃಜನ್-SJVM ತೊಕ್ಕೋಟು 

3. ಪ್ರತೀಕ್-SJVM ತೊಕ್ಕೋಟು 

50 ಕೆಜಿ ವಿಭಾಗ  

1. ಮೊಹಮ್ಮದ್ ಇಶಾಮ್-BHL ಸುರತ್ಕಲ್

2. ಕುಮಾರ್-MP ಕೋಡಿಕಲ್

3. ಕೃಷ್ಣ-SR ಕೋಡಿಕಲ್

3. ಗೌತಮ್-ಕಾರ್ಕಳ

57 ಕೆಜಿ ವಿಭಾಗ  

1. ರಂಗನಾಥ್-DVH ದಡ್ಡಲ್ ಕಾಡ್  

2. ಧರ್ಮರಾಜ್-MP ಕೋಡಿಕಲ್

3. ಮಂಜುನಾಥ್-SR ಕೋಡಿಕಲ್

3. ಅಜಿತ್-ವಿಬಿ ಬೆಂಗ್ರೆ 

61 ಕೆಜಿ ವಿಭಾಗ  

1. ಪ್ರಜ್ವಲ್-ಶಿವಾಜಿ ಫಿಸಿಕಲ್ ಬೋಳಾರ 

2. ಮಂಜು-ವಿಬಿ ಬೆಂಗ್ರೆ 

3. ಆಕಾಶ್ ಖಾರ್ವಿ-ವಿಬಿ ಬೆಂಗ್ರೆ 

3. ಮೋಹಿತ್-DVH ದಡ್ಡಲ್ ಕಾಡ್

86 ಕೆಜಿ ವಿಭಾಗ  

1. ಪ್ರತೀಕ್ ಪುತ್ರನ್-VH ಬೆಂಗ್ರೆ 

2. ನವರಾಜ್-ಶಿವಾಜಿ ಫಿಸಿಕಲ್ ಬೋಳಾರ

3. ಕೃಷ್ಣರಾಜ್-ಶಿವಾಜಿ ಫಿಸಿಕಲ್ ಬೋಳಾರ

3. ರೋಷನ್ ಪುತ್ರನ್-MP ಕೋಡಿಕಲ್ 

86+ ಕೆಜಿ ವಿಭಾಗ  

1. ರಕ್ಷಿತ್-ಆಳ್ವಾಸ್ ಮೂಡಬಿದ್ರೆ 

2. ಸುದರ್ಶನ್-MP ಕೋಡಿಕಲ್ 

3. ಅನುಷ್-ಆಂಜನೇಯ ಸಶಿಹಿತ್ಲು

3. ಮೊಹಮ್ಮದ್ ಸಾಬಿತ್- ವಿಬಿ ಬೆಂಗ್ರೆ 

ಉಡುಪಿ-ಉಚ್ಚಿಲ ದಸರಾ ಕುಮಾರ್(65 ಕೆಜಿ-ವಿಭಾಗ)

1. ಪ್ರಕಾಶ್ ರಾಥೋಡ್-MP ಕೋಡಿಕಲ್

2. ನಶಾಲ್- BHL  ಸುರತ್ಕಲ್

3. ಇಸ್ತಿಫಾ- ಶಿವಾಜಿ ಫ್ರೆಂಡ್ಸ್ ಬೋಳಾರ

3. ಅಶ್ವಿನ್ S ಅಮೀನ್-ಜೈ ಆಂಜನೇಯ, ಅಡ್ಯಾರ್ ಪದವು

ಉಡುಪಿ-ಉಚ್ಚಿಲ ದಸರಾ ಕೇಸರಿ(74 ಕೆಜಿ-ವಿಭಾಗ)

1.ಮನೋಜ್-ಶಿವಾಜಿ ಫಿಸಿಕಲ್ ಬೋಳಾರ

2. ದೀಪಕ್-ಶಿವಾಜಿ ಫಿಸಿಕಲ್ ಬೋಳಾರ

3. ಧನುಷ್- ವಿಬಿ ಬೆಂಗ್ರೆ 

3.ಗಗನ್-ಶಿವಾಜಿ ಫಿಸಿಕಲ್ ಬೋಳಾರ

ಪುರುಷರ ಸಮಗ್ರ ತಂಡ ಪ್ರಶಸ್ತಿ- ಶಿವಾಜಿ ಫಿಸಿಕಲ್ ಬೋಳಾರ

ಮಹಿಳೆಯರ ವಿಭಾಗ(37 ಕೆಜಿ)

1. ಭೂಮಿಕಾ-ವಿಬಿ ಬೆಂಗ್ರೆ

2. ಕ್ಷಮ-ಜೈ ಆಂಜನೇಯ, ಅಡ್ಯಾರ್ ಪದವು

3. ಜ್ಞಾನಿಕ -ಜೈ ಆಂಜನೇಯ, ಅಡ್ಯಾರ್ ಪದವು

3. ನಿಕಿತಾ-ಎಂ.ಪಿ.ಕೋಡಿಕಲ್

44 ಕೆಜಿ ವಿಭಾಗ

1.ನೇಹಾ-ಶಿವಾಜಿ ಫಿಸಿಕಲ್ ಬೋಳಾರ 

2. ಅನ್ವಿತಾ-ಶಿವಾಜಿ ಫಿಸಿಕಲ್ ಬೋಳಾರ 

3. ಯಶ್ಮಿತಾ -ರಾಮಾಂಜನೇಯ ಕುದ್ರೋಳಿ

3. ತನುಶ್ರೀ-ಎಂ.ಪಿ.ಕೋಡಿಕಲ್

48 ಕೆಜಿ ವಿಭಾಗ

1. ದೀಕ್ಷಾ-ಶಿವಾಜಿ ಫಿಸಿಕಲ್ ಬೋಳಾರ 

2. ದೃತಿ-ಜೈ ಆಂಜನೇಯ, ಅಡ್ಯಾರ್ ಪದವು

3. ಪ್ರೇಕ್ಷ-ಶಿವಾಜಿ ಫಿಸಿಕಲ್ ಬೋಳಾರ

3. ಜಿಯಾ ಪ್ರಶಾಂತ್ -ವಿಬಿ ಬೆಂಗ್ರೆ

58 ಕೆಜಿ ವಿಭಾಗ 

1. ಅನ್ಯು ಶೆಟ್ಟಿ-ಶಿವಾಜಿ ಫಿಸಿಕಲ್ ಬೋಳಾರ

2. ಕಾವ್ಯ-ಶಿವಾಜಿ ಫಿಸಿಕಲ್ ಬೋಳಾರ

3. ಗ್ರೀಷ್ಮ-SJVM ತೊಕ್ಕೋಟು 

3. ಅಕ್ಷತಾ -ವಿಬಿ ಬೆಂಗ್ರೆ

63 ಕೆಜಿ ವಿಭಾಗ 

1. ತೇಜಸ್ವಿನಿ ಆರ್.ಸುವರ್ಣ-ಶಿವಾಜಿ ಫಿಸಿಕಲ್ ಬೋಳಾರ

2. ಲಕ್ಷ್ಮಿ-MP ಕೋಡಿಕಲ್ 

3. ವಂದನಾ- SMS ಬ್ರಹ್ಮಾವರ 

3. ಲತೀಖಾ-ವಿಬಿ ಬೆಂಗ್ರೆ

69 ಕೆಜಿ ವಿಭಾಗ 

1. ಅಥಿತಿ ಶೆಟ್ಟಿ-ಶಿವಾಜಿ ಫಿಸಿಕಲ್ ಬೋಳಾರ

2. ಸಾಕ್ಷಿ-ಶಿವಾಜಿ ಫಿಸಿಕಲ್ ಬೋಳಾರ

3. ಜೆಸಿಕಾ ಸೇರೊನ ಜೋನ್ಸ್-ರಾಮಾಂಜನೇಯ ಕುದ್ರೋಳಿ

3. ಸ್ಕಂದ ಸಿರಿ-ವಿಬಿ ಬೆಂಗ್ರೆ

69+ ಕೆಜಿ ವಿಭಾಗ 

1. ಶಝ-ಶಿವಾಜಿ ಫಿಸಿಕಲ್ ಬೋಳಾರ

2. ಕೀರ್ತಿ ಕೆ-DVH ದಡ್ಡಲ್ ಕಾಡ್ 

3. ರಿಲೇಖ-DVH ದಡ್ಡಲ್ ಕಾಡ್ 

3. ಗಾಯತ್ರಿ-ಕುಂದಾಪುರ 

ಮಹಿಳೆಯರ 

ಉಡುಪಿ-ಉಚ್ಚಿಲ ದಸರಾ ಕುಮಾರಿ -2025 (53 ಕೆಜಿ)

1. ಶೌರ್ಯ-ಶಿವಾಜಿ ಫಿಸಿಕಲ್ ಬೋಳಾರ

2. ರಿಶ-ಶಿವಾಜಿ ಸರ್ಕಸ್ ಬೋಳಾರ

3. ಅನುಷಾ-ಜೈ ಆಂಜನೇಯ, ಅಡ್ಯಾರ್ ಪದವು

3. ದಿಯಾ- ಶಿವಾಜಿ ಫಿಸಿಕಲ್ ಬೋಳಾರ

ಮಹಿಳೆಯರ ವಿಭಾಗದ ತಂಡ ಪ್ರಶಸ್ತಿ-ಶಿವಾಜಿ ಫಿಸಿಕಲ್ ಬೋಳಾರ

ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್, ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ, ನಾರಾಯಣ ಕರ್ಕೇರ, ನಾರಾಯಣ ಕೋಟ್ಯಾನ್, ಭುವನೇಂದ್ರ ಕಿದಿಯೂರು, ಮತ್ತಿತರ ಗಣ್ಯರು ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ  ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್‌ಕುಮಾರ್‌ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ  ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್‌ ಪಡುಕರೆ ಸೇರಿದಂತೆ ಮತ್ತಿತರರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article