'ಮೊಗವೀರ್ಸ್ ಬಹರೈನ್'ನಿಂದ 2025ನೇ ಸಾಲಿನ SSLC -PUC ಶೈಕ್ಷಣಿಕ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
ಬಹರೈನ್: ಇಲ್ಲಿನ ಅನಿವಾಸಿ ಮೊಗವೀರ ಸಮುದಾಯದ ಒಕ್ಕೂಟವಾಗಿರುವ ಮೊಗವೀರ್ಸ್ ಬಹರೈನ್ ಸಂಘಟನೆಯು ಸಮುದಾಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕಳೆದ ಅನೇಕ ವರ್ಷಗಳಿಂದ ಶೈಕ್ಷಣಿಕ ಪುರಸ್ಕಾರ ನೀಡುತ್ತಾ ಬಂದಿದ್ದು, ಇದೀಗ ಪ್ರಸಕ್ತ ವರ್ಷದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುರಸ್ಕಾರ ನೀಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಮೊಗವೀರ್ಸ್ ಬಹರೈನ್ ನ ಅಧ್ಯಕ್ಷೆಯಾದ ಶಿಲ್ಪಾ ಶಮಿತ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ಈ ಅರ್ಜಿಗಳನ್ನು ಆಹ್ವಾನಿಸಿದ್ದು, ಪ್ರಸಕ್ತ ಈ ವರ್ಷ ಅಂದರೆ 2025ರಲ್ಲಿ 10ನೇ ಹಾಗು ಹನ್ನೆರಡನೇ(PUC)ತರಗತಿಗಳಲ್ಲಿ ಶೇಖಡಾ 85 ಅಂಕಗಳಿಗಿಂತ ಹೆಚ್ಚಿಗೆ ಪಡೆದು ತೇರ್ಗಡೆ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ.
ಅನಿವಾಸಿ ಭಾರತೀಯ, ಸರಕಾರೀ ನೌಕರಿ, ಬ್ಯಾಂಕ್ ಉದ್ಯೋಗಿ, ಉದ್ಯಮಿ, ಪ್ರೈವೇಟ್ ಲಿಮಿಟ್ ಕಂಪನಿಗಳ ಉದ್ಯೋಗದಲ್ಲಿರುವ ಕುಟುಂಬದ ಹಿನ್ನೆಲೆ ಹೊಂದಿರುವ ಹಾಗು ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ಇಪ್ಪತ್ತು ಸಾವಿರ ಹಾಗು ಅದಕ್ಕಿಂತ ಮೇಲ್ಪಟ್ಟು ಇದ್ದರೇ ಅವರು ಈ ಶೈಕ್ಷಣಿಕ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
ಶೈಕ್ಷಣಿಕ ಪುರಸ್ಕಾರಕ್ಕೆ ಅರ್ಜಿ ಹಾಕುವವರು ತಮ್ಮ ಹೆಸರು, ತರಗತಿ, ಶೇಕಡಾವಾರು ಅಂಕ, ಮೊಬೈಲ್ ಸಂಖ್ಯೆಯ ಜೊತೆಗೆ ಅಂಕ ಪಟ್ಟಿ, ಜಾತಿ ದೃಢೀಕರಣ ಪತ್ರ ಹಾಗು ಗುರುತಿನ ಚೀಟಿಯೊಂದಿಗೆ ಮೊಗವೀರ್ಸ್ ಬಹರೈನ್ ನ ಇ ಮೇಲ್ ವಿಳಾಸ mogaveersbahrain.bh@gmail.com ಗೆ ತಮ್ಮ ಅರ್ಜಿಗಳನ್ನು ರವಾನಿಸಬಹುದು.
ಅರ್ಜಿದಾರ ಹೆಸರಿನ ಜೊತೆಗೆ ಪ್ರತಿಭಾ ಪುರಸ್ಕಾರ -2025 ಎಂದು ತಮ್ಮ ಮೈಲ್ ನಲ್ಲಿ ನಮೂದಿಸಿರುವ ಅರ್ಜಿಯನ್ನು ನವೆಂಬರ್ ತಿಂಗಳ 18ರ ಒಳಗೆ ಕಳುಹಿಸತಕ್ಕದ್ದು. ನಿಯಮಗಳು ಹಾಗು ಷರತ್ತುಗಳು ಅನ್ವಯಿಸುತ್ತದೆ.