ದುಬೈ; ಡಾ.ಶೇಖ್ ವಾಹಿದ್ ವಾಹಿದ್ಗೆ ಸನ್ಮಾನ
Thursday, January 8, 2026
ದುಬೈ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕೆಪಿಸಿಸಿ ಮೈನಾರಿಟಿ ಕಮಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಅನಿವಾಸಿ ಭಾರತೀಯ ಮಾಜಿ ಅಧ್ಯಕ್ಷರು, ಉಡುಪಿ ಜಿಲ್ಲಾ ಮತ್ತು ನೂರಾನಿ ಮಸೀದಿ ಇಂದ್ರಾಳಿ ಸದಸ್ಯ, ಹಾಜಿ ಲಯನ್ ಡಾಕ್ಟರ್ ಶೇಖ್ ವಾಹಿದ್ ದಾವೂದ್ ಜೊತೆ ಸಭೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬುಧವಾರ ದುಬೈಯ ಅಲ್ ಖಿಸೆಸ್ಸ್'ನ ಬೆಂಗಳೂರು ಎಂಪೈರ್ ರೆಸ್ಟೋರೆಂಟ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾನಿ ಎನ್ ಆರ್ ಐ ಅಸೋಸಿಯೇಷನ್ ಯು. ಎ. ಇ ಚಾಪ್ಟರ್'ನ ಹಲವರು ಭಾಗಿಯಾಗಿದ್ದರು.
KCF ಕಾರ್ಯಕ್ರಮ: ಇತ್ತೀಚಿಗೆ KCF ದುಬೈ ನಾರ್ತ್ ಝೋನ್ ವತಿಯಿಂದ ನಡೆದ ಬುರ್ದಾ ಮಜಿಲಿಸ್ನಲ್ಲಿ ಮುಖ್ಯ ಅಥಿತಿಯಾಗಿ ಶೇಖ್ ವಾಹಿದ್ ದಾವೂದ್ ಭಾಗವಹಿಸಿದ್ದರು. ಇದೇ ಜನವರಿ 25ಕ್ಕೆ KCF ಯು.ಎ.ಇ ನ್ಯಾಷನಲ್ ವತಿಯಿಂದ ನಡೆಯುವ ಮಹಬ್ಬ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ್ದರು.

