ಉಚ್ಚಿಲ; 'ಪೊಲ್ಯ ಪ್ರೀಮಿಯರ್ ಲೀಗ್ 2026 ಸೀಸನ್-3' ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ

ಉಚ್ಚಿಲ: 'ಪೊಲ್ಯ ಪ್ರೀಮಿಯರ್ ಲೀಗ್ 2026 ಸೀಸನ್ 3' ಕ್ರಿಕೆಟ್ ಪಂದ್ಯಾಟ ಮೇ 10ರಂದು ಉಚ್ಚಿಲ ಪೊಲ್ಯದ ಮೈದಾನದಲ್ಲಿ ನಡೆಯಲಿದ್ದು, ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. 

ಈ ಕ್ರಿಕೆಟ್ ಪಂದ್ಯ ಕೂಟದಲ್ಲಿ ಪೊಲ್ಯದ 4 ಬಲಿಷ್ಠ ತಂಡಗಳು ಪಾಲ್ಗೊಳ್ಳಲಿದೆ. ಬೆಳಗ್ಗೆ 8.30ಕ್ಕೆ 4 ತಂಡಗಳ ಜೆರ್ಸಿ ಬಿಡುಗಡೆ ನಡೆಯಲಿದೆ. 9 ಗಂಟೆಗೆ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಝಾಕ್ ವೈ.ಎಸ್. (SDPI ಮುಖಂಡ), ಹನೀಫ್ ಮುಳೂರು (SDPI ಮುಖಂಡ),  ಶೇಕ್ ಮಯ್ಯದ್ದಿ(ಸೇವಾ ಭಾರತ ಸೇವಾ ರತ್ನ, ಕರುನಾಡ ರತ್ನ ಪುರಸ್ಕೃತ ), ಇಂದಿರಾ ಶೆಟ್ಟಿ( ಗ್ರಾಪಂ ಸದಸ್ಯೆ, ಉಚ್ಚಿಲ), ಮಜೀದ್ ಬಿರಾಲಿ (ಗ್ರಾಪಂ ಸದಸ್ಯ, ಉಚ್ಚಿಲ), ರಝಾಕ್ ಬಗ್ಗತೋಟ (ಗ್ರಾಪಂ ಸದಸ್ಯ, ಉಚ್ಚಿಲ), ವಸಂತ ದೇವಾಡಿಗ(ಮಾಜಿ ಗ್ರಾಪಂ ಸದಸ್ಯ, ಉಚ್ಚಿಲ), ಮಯ್ಯದ್ದಿ PWD, ಇಕ್ಬಾಲ್ ಪಯ್ಯಾರ್(ಸೌದಿ), ಸಾದಿಕ್ ಪೊಲ್ಯ (ಉದ್ಯಮಿ), ಬದ್ರುದ್ದೀನ್ ಪೊಲ್ಯ(ನಾಯಕ,  ಗೋಲ್ಡನ್ ಸ್ಟಾರ್ ಕ್ರಿಕೆಟರ್ಸ್ ಉಚ್ಚಿಲ), ಎಂ.ಬಷೀರ್ ಪೊಲ್ಯ(Sahil Aluminum fabricators Kaup), ಮೊಹಮ್ಮದ್ ಫಾರೂಕ್ (Masjid Pro Management system), ನಿಝಾಮ್ ಪೊಲ್ಯ(ಉದ್ಯಮಿ), ಅಬೂಬಕ್ಕರ್ ಗುರುಪುರ(ಸಮಾಜ ಸೇವಕ), ನವೀನ್ ಸೋನ್ಸ್, ಆಲಿಯಬ್ಬ ಪೊಲ್ಯ(ಉದ್ಯಮಿ), ಜಯ ಶೆಟ್ಟಿ(ಮುಂಬೈ),  ಗಿರೀಶ್ ಶೆಟ್ಟಿ (ಮುಂಬೈ), ರಾಜೇಶ್ (ಮುಂಬೈ), ಶಫಿ ಪೊಲ್ಯ (ಸಾಹಿಲ್ ಗ್ಲಾಸ್ ಗ್ಯಾಲರಿ, 'ಟೀಮ್ ಪೊಲ್ಯ' ತಂಡದ ಮಾಲಕ) ಭಾಗವಹಿಸಲಿದ್ದಾರೆ.  

ನಿಸಾರ್ ನೇತೃತ್ವದ 'ಟೀಮ್ ಪೊಲ್ಯ', ಮಜೀದ್ ನೇತೃತ್ವದ 'ಪೊಲ್ಯ ಬ್ಲಾಸ್ಟರ್ಸ್', ರಫೀಕ್ ಪಯ್ಯಾರ್ ನೇತೃತ್ವದ 'ಪೊಲ್ಯ ಸ್ಟ್ರೈಕರ್ಸ್' ಹಾಗು ಇಮ್ರಾನ್(ಇಂಬು)-ಶಮೀಮ್(ಶಣ್ಣ) ನೇತೃತ್ವದ 'ಫ್ರೆಂಡ್ಸ್ ಪೊಲ್ಯ' ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಟ ನಡೆಸಲಿದೆ. 

ಸೌದಿ ಅರೇಬಿಯಾ, ದುಬೈ, ಒಮಾನ್(ಮಸ್ಕತ್) ನಲ್ಲಿರುವ ಪೊಲ್ಯ ಮೂಲದವರ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಪಂದ್ಯಾಟವು ಮೇ 10ರಂದು  ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದ್ದು, ಈ ಪಂದ್ಯಾಟದ ನೇರ ಪ್ರಸಾರ ಕಾರ್ಯಕ್ರಮವು ಗಲ್ಲಿ ಮ್ಯಾಚ್ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.