ಬಿಜೆಪಿಯಿಂದ ಅರ್ಹ ಮತದಾರರ ಹೆಸರು ಅಳಿಸುವ ಯತ್ನ: ಭಾಲ್ಕಿಯಲ್ಲಿ ನಿಗಾ ವಹಿಸಲು ಕಾಂಗ್ರೆಸ್ ಕಾರ್ಯಕರ್ತರನ್ನು ಸಜ್ಜುಗೊಳಿಸಿದ ಸಚಿವ ಈಶ್ವರ್ ಖಂಡ್ರೆ

 

ಬೆಂಗಳೂರು: ಭಾಲ್ಕಿ ವಿಧಾನಸಭಾ ಕ್ಷೇತ್ರದ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಬಿಜೆಪಿಯ ಕಾರ್ಯಕರ್ತರು ಸುಳ್ಳು ಹಾಗೂ ಆಧಾರರಹಿತ Form-7 ಆಕ್ಷೇಪಣೆಗಳನ್ನು ಸಲ್ಲಿಸಿ ‘ವೋಟ್ ಚೋರಿ’ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ದೂರುಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. 

ಆಕ್ಷೇಪಣೆ ಸಲ್ಲಿಸಲು ನಾಳೆ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ, ಭಾಲ್ಕಿ ಕ್ಷೇತ್ರದ ಯಾವುದೇ ಅರ್ಹ ಮತದಾರರ ಹೆಸರೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಕೈಬೀಳದಂತೆ ನಮ್ಮ ಕಾಂಗ್ರೆಸ್ ಪಕ್ಷದ BLA-2ಗಳು ಹಾಗೂ ಕಾರ್ಯಕರ್ತರು ಸಂಪೂರ್ಣವಾಗಿ ನಿಗಾ ವಹಿಸಲಿದ್ದಾರೆ.

ಚುನಾವಣಾ ಆಯೋಗದಿಂದ ಯಾವುದೇ ನೋಟಿಸ್ ಬಂದರೂ ಅಗತ್ಯ ದಾಖಲೆಗಳೊಂದಿಗೆ ಸೂಕ್ತ ಉತ್ತರ ನೀಡಿ, ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕು ಉಳಿಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಭಾಲ್ಕಿ ಕ್ಷೇತ್ರದ ಮತದಾರರು ಯಾವುದೇ ಆತಂಕಪಡಬೇಡಿ. ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತದಾನದ ಹಕ್ಕಿನ ರಕ್ಷಣೆಗೆ ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು  ಈಶ್ವರ ಖಂಡ್ರೆ ಹೇಳಿದ್ದಾರೆ.