ಹಿರಿಯ ನಟಿಯನ್ನೇ ಹೊ#ಡೆದು ಕೊಂ#ದ ಮಗ; ಕೊಂ#ದ ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ....!

ಹಿರಿಯ ನಟಿಯನ್ನೇ ಹೊ#ಡೆದು ಕೊಂ#ದ ಮಗ; ಕೊಂ#ದ ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ....!ಮುಂಬೈ (Headlines Kannada):  ಜನಪ್ರಿಯ ಹಿಂದಿ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿಯೊಬ್ಬರನ್ನು ಆಸ್ತಿಗಾಗಿ ಆಕೆಯ ಮಗನೆ ಕೊಂ#ದಿರುವ ಘಟನೆ ಮುಂಬೈಯಲ್ಲಿ ನಡೆದಿದೆ. 

ಆಸ್ತಿಗಾಗಿ ಹಿರಿಯ ನಟಿ ವೀಣಾ ಕಪೂರ್ ಅವರನ್ನು ಸ್ವಂತ ಮಗನೇ ಕೊ#ಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಹಿಂದಿ ಸೀರಿಯಲ್​ ಹಾಗೂ ಸಿನಿಮಾಗಳಲ್ಲಿ ನಟಿಸಿ ವೀಣಾ ಕಪೂರ್​ ಜನಪ್ರಿಯತೆ ಪಡೆದಿದ್ದು, ಅವರಿಗೆ 74 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಅವರನ್ನು ಸ್ವಂತ ಮಗ  ಸಚಿನ್​ ಕಪೂರ್ ಹ#ತ್ಯೆ ಮಾಡಿರುವ ಸುದ್ದಿ ಕೇಳಿ ಹಿಂದಿ ಕಿರುತೆರೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಸಚಿನ್​ ಕಪೂರ್​ ಮತ್ತು ವೀಣಾ ಕಪೂರ್​ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ಪರಿಸ್ಥಿತಿ ಕೈ ಮೀರಿ ಬೇಸ್​ಬಾಲ್​ ಬ್ಯಾಟ್​ನಿಂದ ತಲೆಗೆ ಹೊ#ಡೆದು ತಾಯಿಯ ಹ#ತ್ಯೆ ಮಾಡಿರುವುದಾಗಿ ಸಚಿನ್​ ಕಪೂರ್​ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. 

12 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್​ ಗಾಗಿ ಅಮ್ಮನ ಜೊತೆ ಜಗಳ ಮಾಡಿದ್ದ ಮಗ ಸಚಿನ್​ ಕಪೂರ್,  ತಾಯಿಯನ್ನು ಹ#ತ್ಯೆ ಮಾಡಿದ ಬಳಿಕ ಶ#ವನನ್ನು ರಾಯಘಡ ಜಿಲ್ಲೆಯ ನದಿಯೊಂದರಲ್ಲಿ ಎಸೆದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ವೀಣಾ ಕಪೂರ್​ ಅವರು ನಾಪತ್ತೆ ಆಗಿರುವ ಬಗ್ಗೆ ಕಲ್ಪತರು ಸೊಸೈಟಿಯ ಭದ್ರತಾ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಹ#ತ್ಯೆ ವಿಚಾರವನ್ನು ಸಚಿನ್​ ಕಪೂರ್​ ಪೋಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ವೀಣಾ ಕಪೂರ್​ ಅವರ ಇನ್ನೋರ್ವ ಮಗ ಅಮೆರಿಕದಲ್ಲಿದ್ದು, ಸದ್ಯ ಸಚಿನ್​ ವಿರುದ್ಧ ಐಪಿಸಿ ಸೆಕ್ಷನ್​ 302, 201, 31ರ ಅಡಿಯಲ್ಲಿ ಕೇಸ್​ ದಾಖಲಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. 

ಟಿವಿ ನಟಿ ನೀಲೂ ಕೊಹ್ಲಿ ಅವರು ವೀಣಾ ನಿ#ಧನಕ್ಕೆ ಸಂತಾಪ ಸೂಚಿಸಿದ್ದು, ಹಿರಿಯ ನಟಿಯ ಆ#ತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ‘ನಾನು ಮತ್ತು ವೀಣಾ ಅವರು ಐದು  ವರ್ಷ ಜೊತೆಯಾಗಿ ಕೆಲಸ ಮಾಡಿದ್ದೆವು. ಆದರೆ ಕೊರೊನಾ ಬಳಿಕ ನಮ್ಮ ಸಂಪರ್ಕ ಇರಲಿಲ್ಲ,  ನಾನು ನನ್ನ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆದೆ. ಅವರು ನಿಧ#ನರಾಗಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article