ಮೂಳೂರಿನ ಅಲ್ ಇಹ್ಸಾನ್ ಅಕಾಡಮಿ ಶಾಲೆಯ SSLC ಪರೀಕ್ಷೆಯಲ್ಲಿ ಸಾಧನೆಮೆರೆದ 5 ಮಂದಿ ಹಾಫಿಳ್ ವಿದ್ಯಾರ್ಥಿಗಳು
Wednesday, May 10, 2023
ಮೂಳೂರಿನ ಅಲ್ ಇಹ್ಸಾನ್ ಹಿಫ್ಳುಲ್ ಕುರಾನ್ ಕಾಲೇಜಿನಲ್ಲಿ ಕುರಾನ್ ಕಂಠಪಾಠ ಪೂರ್ತಿಗೊಳಿಸಿ ಹಾಫಿಳ್ ಆಗಿ ಇದೀಗ ಅಲ್ ಇಹ್ಸಾನ್ ಅಕಾಡಮಿ ಶಾಲೆಯ SSLC ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ 5 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳಾದ ಮೂಳೂರಿನ ಹಾಫಿಳ್ ಮುಸದ್ದಿಖ್ 595 ಅಂಕ, ತಲಕ್ಕಿಯ ಹಾಫಿಳ್ ಮುಹಮ್ಮದ್ ಮುಸ್ತಫಾ 561 ಅಂಕ, ಆತೂರಿನ ಹಾಫಿಳ್ ಮುಹಮ್ಮದ್ ಸವಾದ್ 517 ಅಂಕ, ಕಂಬಳಬೆಟ್ಟುವಿನ ಹಾಫಿಳ್ ಶಹೀರ್ 504 ಅಂಕ ಹಾಗು ಪುತ್ತೂರಿನ ಹಾಫಿಳ್ ಮುಹಮ್ಮದ್ ಅಜ್ಮಿಲ್ 492 ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ. ಇವರ ಈ ಸಾಧನೆಗೆ ಮೂಳೂರಿನ ಅಲ್ ಇಹ್ಸಾನ್ ಹಿಫ್ಳುಲ್ ಕುರಾನ್ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿದೆ.