ಶನಿವಾರ ಫಲಿತಾಂಶ: ಭಾರೀ ಜೋರಾಗಿಯೇ ನಡೆಯುತ್ತಿದೆ ಬೆಟ್ಟಿಂಗ್; ಕಾಂಗ್ರೆಸ್ ಮೇಲೆಯೇ ಹೆಚ್ಚು ಬೆಟ್ಟಿಂಗ್
ಬೆಂಗಳೂರು: ನಿನ್ನೆಯಷ್ಟೇ ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು, ಶನಿವಾರ ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಗೆಲುವಿನ ವಿಷಯದಲ್ಲಿ ಬೆಟ್ಟಿಂಗ್ ಭಾರೀ ಜೋರಾಗಿಯೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಶನಿವಾರ ಫಲಿತಾಂಶ ಪ್ರಕಟವಾಗಲಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮೇಲೆ ಮತ್ತು ಯಾರು ಗೆಲ್ಲಬಹುದು ಎಂಬ ಬಗ್ಗೆ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.
ಬೆಟ್ಟಿಂಗ್ ಮಾರುಕಟ್ಟೆ ಹಾಗೂ ಸಟ್ಟಾ ಬಜಾರ್‌ಗಳು ಕಾಂಗ್ರೆಸ್‌ಗೆ 115ಕ್ಕೂ ಹೆಚ್ಚು ಸ್ಥಾನಗಳ ಸ್ಪಷ್ಟ ಬಹುಮತ ನೀಡುತ್ತಿದ್ದು, ಬಿಜೆಪಿ 70ಕ್ಕಿಂತ ಕಡಿಮೆ ಹಾಗೂ ಜೆಡಿಎಸ್ 30ಕ್ಕಿಂತ ಕಡಿಮೆ ಸ್ಥಾನ ಪಡೆಯುತ್ತಿವೆ ಎಂದು ಸಮೀಕ್ಷೆಗಳು ಹೇಳುತ್ತಿದ್ದು, ಇದನ್ನೇ ಮುಂದಿಟ್ಟುಕೊಂಡು ಬೆಟ್ಟಿಂಗ್ ದಂಧೆ ಜೋರಾಗಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನವರು ಕಾಂಗ್ರೆ ಮೇಲೆಯೇ ಬೆಟ್ಟಿಂಗ್ ಹಣ ಹೂಡಿದ್ದು, ಇನ್ನು ಕೆಲವರು ಬಿಜೆಪಿ ಮೇಲೆ ಹಣ ಹಾಕಿದ್ದಾರೆ. ಕಾಂಗ್ರೆಸ್ ಮೇಲೆ ಹಾಕಿರುವ ಹಣ ಗೆದ್ದರೆ ಡಬಲ್ ಹಣ, ಬಿಜೆಪಿ ಗೆದ್ದರೆ ಮೂರು ಪಟ್ಟು ಹೆಚ್ಚು ಹಣ ಸಿಗಲಿದೆ ಎಂದು ಹೇಳಲಾಗುತ್ತಿದೆ.