ಶಿರ್ವದಲ್ಲಿ ಪಾದಯಾತ್ರೆ, ಬಹಿರಂಗ ಸಭೆ ನಡೆಸಿದ ಬಿಜೆಪಿ; ಅಸ್ಸಾಂ ಮುಖ್ಯ ಮಂತ್ರಿ ಹಿಮಂತ್ ಬಿಸ್ವಾ ಶರ್ಮ ಭಾಗಿ; ಗುರ್ಮೆ ಸುರೇಶ್ ಶೆಟ್ಟಿ ಗೆಲುವಿಗೆ ಸಹಕರಿಸುವಂತೆ ಮನವಿ

ಶಿರ್ವದಲ್ಲಿ ಪಾದಯಾತ್ರೆ, ಬಹಿರಂಗ ಸಭೆ ನಡೆಸಿದ ಬಿಜೆಪಿ; ಅಸ್ಸಾಂ ಮುಖ್ಯ ಮಂತ್ರಿ ಹಿಮಂತ್ ಬಿಸ್ವಾ ಶರ್ಮ ಭಾಗಿ; ಗುರ್ಮೆ ಸುರೇಶ್ ಶೆಟ್ಟಿ ಗೆಲುವಿಗೆ ಸಹಕರಿಸುವಂತೆ ಮನವಿ

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಶಿರ್ವ ಪೇಟೆಯಲ್ಲಿ ಪಾದಯಾತ್ರೆ ಹಾಗೂ ಬಹಿರಂಗ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯ ಮಂತ್ರಿ ಮತ್ತು ಫೈರ್ ಬ್ರಾಂಡ್ ನಾಯಕ, ಹಿಮಂತ್ ಬಿಸ್ವಾ ಶರ್ಮ ಪಾಲ್ಗೊಂಡಿದ್ದರು. ಕಾಪು ಕ್ಷೇತ್ರದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.










ಈ ಕಾರ್ಯಕ್ರಮದಲ್ಲಿ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಪು ವಿಧಾನ ಸಭಾ ಕ್ಷೇತ್ರ ದ ಶಾಸಕರು ಲಾಲಾಜಿ ಮೆಂಡನ್ ರವರು, ಕಾಪು ಕ್ಷೇತ್ರ ಸಮರ್ಥ ನಾಯಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ, ಗುರುತಿಸಿಕೊಂಡಿರುವ ಸಮಾಜ ಸೇವಕ ಗುರ್ಮೆ ಶೆಟ್ಟಿ ಯವರ ಬೆಂಬಲಕ್ಕೆ ನಾವು ಇಂದು ಎಲ್ಲರು ಸೇರಿದ್ದೇವೆ,ಶಿರ್ವ ದ ಎಲ್ಲಾ ಬಿಜೆಪಿ ಮತದಾರರು ಗುರ್ಮೆ ಸುರೇಶ್ ಶೆಟ್ಟಿ ಯವರಿಗೆ ಬೆಂಬಲ ನೀಡಬೇಕು. ಕಾಪು ಕ್ಷೇತ್ರ ದ ಅಭಿವೃದ್ಧಿಗೆ ಕ್ಕೆ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆ ಅಪಾರ,ಮುಂದಿನ ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ಚೆನ್ನಾಗಿ ನಿಭಾಯಿಸಲಿದ್ದಾರೆ ಎಂದು ತಿಳಿಸಿದರು.

ನಂತರ ಮಾತನಾಡಿದ ಉಡುಪಿ ವಿಧಾನ ಸಭಾ ಕ್ಷೇತ್ರ ದ ಶಾಸಕರಾದ ರಘುಪತಿ ಭಟ್ ರವರು,ಸೇರಿರುವ ಜನಸಾಗರವನ್ನು ನೋಡಿದಾಗ ಗುರ್ಮೆ ಸುರೇಶ್ ಶೆಟ್ಟಿಯವರೇ ಶಾಸಕರು ಆಗುತ್ತಾರೆ ಎಂಬ ಭರವಸೆ ಕಾಣುತಿದೆ. ಧಾನ ಧರ್ಮ ದಲ್ಲಿ ಈಗಾಗಲೇ ಕೀರ್ತಿ ಪಡೆದಿರುವ ಗುರ್ಮೆ ಸುರೇಶ್ ಶೆಟ್ಟಿಯವರು, ರಾಜಕೀಯ ಕ್ಷೇತ್ರದಲ್ಲು ಹೆಸರು ಮಾಡುತ್ತಾರೆ.ಎಂಬ ಭರವಸೆ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶಿರ್ವ ಕ್ಷೇತ್ರ ಕ್ಕೆ ಬಂದಿರುವುದು ನಮ್ಮ ಪುಣ್ಯ.ಕಾಪು ಕ್ಷೇತ್ರ ಹೂವಿನ ತೋಟದಂತಿರಬೇಕು.ಇಷ್ಟು ಜನ ಸೇರಿದನ್ನು ನೋಡಿದಾಗಲೇ ನನ್ನಲಿ ಇನ್ನಷ್ಟು ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷದ ವಿರುದ್ದ ಅಕ್ರೋಶ ವ್ಯಕ್ತ ಪಡಿಸಿದ ಗುರ್ಮೆ ಸುರೇಶ್ ಶೆಟ್ಟಿಯವರು ನೀವು ಎಷ್ಟು ತುಳಿದರು ನಾವು ಬೆಳೆಯುತೇವೆ ನಿಮ್ಮ ಪ್ರಣಾಳಿಕೆಯ ಕನಸನ್ನು ಕನಸಾಗಿಯೇ ಇಡುತ್ತೆವೆ ಎಂದು  ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಸ್ಸಾಂ ಮುಖ್ಯ ಮಂತ್ರಿ ಹಿಮಂತ್ ಬಿಸ್ವಾ ರವರು, ಮೋದಿಜಿಯವರು ದೇಶಕ್ಕೆ ನೀಡಿರುವ ಕೊಡುಗೆಗಳ ಶ್ಲಾಘನೆ ವ್ಯಕ್ತ ಪಡಿಸಿ, ರಾಮ ಮಂದಿರ ನಿರ್ಮಾಣ,ಆರ್ಟಿಕಲ್ 370 ರದ್ದು ಗೊಳಿಸದ ವಿಷಯದಲ್ಲಿ ಮೋದಿ ಸರ್ಕಾರ ಮಾಡಿದ ಸಾಹಸ ವನ್ನು ಹೊಗಳಿದರು.

ಇನ್ನಷ್ಟು ಯೋಜನೆ ಗಳನ್ನು ಆಲೋಚನೆಯಲ್ಲಿವೆ ಕಾರ್ಯ ರೂಪಕೆ ಶ್ರೀಘ್ರವಾಗಿ ತರಲಿದ್ದೇವೆ ಎಂದು ನುಡಿದರು. ನಂತರ ಶಿರ್ವ ಕ್ಷೇತ್ರದಲ್ಲಿ ಸೇರಿರುವ ಜನ ಸಾಗರವನ್ನು ನೋಡಿ ಗುರ್ಮೆ ಸುರೇಶ್ ಶೆಟ್ಟಿ ಯವರಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕೊಯಿಲಾಡಿ ಸುರೇಶ್ ನಾಯಕ್,ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷರು ಶ್ರೀಕಾಂತ್ ನಾಯಕ್,ದೆಹಲಿ ಶಾಸಕರು ಹಾಗೂ ಕಾಪು ಕ್ಷೇತ್ರ ಬಿಜೆಪಿ ಉಸ್ತುವಾರಿ ವಿಜೇಂದ್ರ ಗುಪ್ತ,ನಿಕಟ ಪೂರ್ವ ಅಧ್ಯಕ್ಷರು ಕರಾವಳಿ ಪ್ರಾಧಿಕಾರ ಮಟ್ಟಾರು ರತ್ನಾಕರ ಹೆಗ್ಡೆ,ರಾಜ್ಯ ಮಹಿಳಾ ಮೋರ್ಚಾ ಪ್ರಧಾನಾ ಕಾರ್ಯದರ್ಶಿ ಶಿಲ್ಪಾ ಸುವರ್ಣ,ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article