ಮಂಗಳೂರು: ದೇಶಾದ್ಯಂತ ಡಿಜಿಟಲೀಕರಣದ ಅಲೆ ಬೀಸುತ್ತಿರುವ ಈ ಸಂದರ್ಭದಲ್ಲಿ, ಸಣ್ಣ ವ್ಯಾಪಾರಿಗಳು ಮತ್ತು ಟ್ಯಾಕ್ಸಿ ಚಾಲಕರಿಗಾಗಿ 'Smart Bill Pro' ಎಂಬ ನೂತನ ವೆಬ್ ಅಪ್ಲಿಕೇಶನ್ ಲೋಕಾರ್ಪಣೆಗೊಂಡಿದೆ. ಈ ವೆಬ್‌ಸೈಟ್ ಮೂಲಕ ಯಾವುದೇ ತಾಂತ್ರಿಕ ಜ್ಞಾನವಿಲ್ಲದಿದ್ದರೂ ಸಹ ವೃತ್ತಿಪರ ಶೈಲಿಯ ಬಿಲ್‌ಗಳನ್ನು ಮೊಬೈಲ್ ಮೂಲಕವೇ ತಯಾರಿಸಬಹುದಾಗಿದೆ.
ಟ್ಯಾಕ್ಸಿ ಚಾಲಕರಿಗೆ ವರದಾನ
ಟ್ಯಾಕ್ಸಿ ಮತ್ತು ಟ್ರಾವೆಲ್ಸ್ ಮಾಲೀಕರು ಬಾಡಿಗೆ ಮುಗಿದ ಬಳಿಕ ಪ್ರಯಾಣಿಕರಿಗೆ ಇನ್ನು ಮುಂದೆ ಹಸ್ತಪ್ರತಿಯ ಬಿಲ್ ನೀಡುವ ಅಗತ್ಯವಿಲ್ಲ. smartbill.onlinepudu.in ವೆಬ್‌ಸೈಟ್‌ನಲ್ಲಿ ವಾಹನದ ವಿವರ, ಚಾಲಕನ ಹೆಸರು, ಲೋಗೋ ಮತ್ತು ಸಹಿಯ ಚಿತ್ರವನ್ನು ಒಮ್ಮೆ ಅಪ್‌ಲೋಡ್ ಮಾಡಿದರೆ ಅದು ಸುರಕ್ಷಿತವಾಗಿ ಸಂಗ್ರಹವಾಗುತ್ತದೆ. ಗ್ರಾಹಕರ ಹೆಸರು, ಪ್ರಯಾಣದ ವಿವರ ಮತ್ತು ಮೊತ್ತವನ್ನು ನಮೂದಿಸಿ 'ವಾಟ್ಸಪ್' ಬಟನ್ ಒತ್ತಿದರೆ ಕ್ಷಣಾರ್ಧದಲ್ಲಿ ಆಕರ್ಷಕ ಪಿಡಿಎಫ್ (PDF) ಬಿಲ್ ಗ್ರಾಹಕರ ಮೊಬೈಲ್ ತಲುಪುತ್ತದೆ.
ಶಾಪ್ ಬಿಲ್ಲಿಂಗ್ ಇನ್ನು ಸರಳ
ಸಣ್ಣ ಪುಟ್ಟ ಅಂಗಡಿ ಮಾಲೀಕರು ತಮ್ಮ ವ್ಯಾಪಾರದ ವಿವರಗಳನ್ನು ಒಮ್ಮೆ ಅಪ್‌ಡೇಟ್ ಮಾಡಿದರೆ ಸಾಕು. ಪ್ರತಿ ವ್ಯಾಪಾರದ ಬಳಿಕ ಗ್ರಾಹಕರ ಹೆಸರು ಮತ್ತು ಖರೀದಿಯ ವಿವರಗಳನ್ನು ದಾಖಲಿಸಿ, ನೇರವಾಗಿ ವಾಟ್ಸಪ್ ಮೂಲಕ ಬಿಲ್ ಕಳುಹಿಸಬಹುದು. ಇದು ಕೇವಲ ಬಿಲ್ ಮಾತ್ರವಲ್ಲದೆ, ವ್ಯಾಪಾರಕ್ಕೆ ಕಾರ್ಪೊರೇಟ್ ಶೈಲಿಯ ಮೆರುಗನ್ನು ನೀಡುತ್ತದೆ.
ವಿಶಿಷ್ಟ ಬಿಲ್ ಸಂಖ್ಯೆ ಮತ್ತು ತಂತ್ರಜ್ಞಾನ
ಈ ವೆಬ್‌ಸೈಟ್‌ನ ಪ್ರಮುಖ ವಿಶೇಷತೆಯೆಂದರೆ ಇದರಲ್ಲಿ ಸೃಷ್ಟಿಯಾಗುವ ಯುನಿಕ್ ಬಿಲ್ ನಂಬರ್'. ಆಧುನಿಕ ತಂತ್ರಜ್ಞಾನ ಬಳಸಿ ಪ್ರತಿ ಬಿಲ್‌ಗೂ ಪ್ರತ್ಯೇಕ ಸಂಖ್ಯೆ ನೀಡಲಾಗುತ್ತಿದ್ದು, ಇದು ವ್ಯಾಪಾರದ ಪಾರದರ್ಶಕತೆಗೆ ಸಹಕಾರಿಯಾಗಿದೆ. ಗ್ರಾಹಕರ ಸುರಕ್ಷತೆಗಾಗಿ ಗೂಗಲ್ ಲಾಗಿನ್ ಮತ್ತು ಇಮೇಲ್ ಮೂಲಕ ಬರುವ 'ಮ್ಯಾಜಿಕ್ ಲಿಂಕ್' ಬಳಸಿ ಸುಲಭವಾಗಿ ಲಾಗಿನ್ ಆಗುವ ವ್ಯವಸ್ಥೆ ಮಾಡಲಾಗಿದೆ.
ದಿನಕ್ಕೆ ಕೇವಲ ಒಂದು ರೂಪಾಯಿ!
ದುಬಾರಿ ಬಿಲ್ಲಿಂಗ್ ಸಾಫ್ಟ್‌ವೇರ್‌ಗಳ ನಡುವೆ 'ಸ್ಮಾರ್ಟ್ ಬಿಲ್ ಪ್ರೋ' ಅತ್ಯಂತ ಕಡಿಮೆ ದರದಲ್ಲಿ ಸೇವೆ ನೀಡುತ್ತಿದೆ.
ದರ: ತಿಂಗಳಿಗೆ ಕೇವಲ 30 ರೂಪಾಯಿ(ದಿನಕ್ಕೆ ಕೇವಲ ಒಂದು ರೂಪಾಯಿ!).
ಅನ್ ಲಿಮಿಟೆಡ್:ಈ ದರದಲ್ಲಿ ಎಷ್ಟು ಬೇಕಾದರೂ ಅನಿಯಮಿತ ಬಿಲ್‌ಗಳನ್ನು ಸೃಷ್ಟಿಸಬಹುದು.
ಉಚಿತ ಪ್ರಯೋಗ:ಪ್ರತಿ ಹೊಸ ಗ್ರಾಹಕರಿಗೆ 24 ಗಂಟೆಗಳ ಕಾಲ ಉಚಿತ ಪ್ರವೇಶ ನೀಡಲಾಗುತ್ತಿದ್ದು, ಸೇವೆಯ ಗುಣಮಟ್ಟವನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ.
ವ್ಯಾಪಾರಸ್ಥರು ಮತ್ತು ಚಾಲಕರು ಈ ಡಿಜಿಟಲ್ ಕ್ರಾಂತಿಯ ಲಾಭ ಪಡೆಯಲು smartbill.onlinepudu.in ಗೆ ಭೇಟಿ ನೀಡಬಹುದಾಗಿದೆ. ಗ್ರಾಹಕರು ಸಹ ಪೇಪರ್ ಬಿಲ್ ಬದಲಿಗೆ ಇಂತಹ ಪರಿಸರ ಸ್ನೇಹಿ ಡಿಜಿಟಲ್ ಬಿಲ್ ಪಡೆಯಲು ವಿನಂತಿಸಬಹುದಾಗಿದೆ.
