
ಉಚ್ಚಿಲ: ಇಲ್ಲಿನ ಪೊಲ್ಯ ಮೈದಾನದಲ್ಲಿ ರವಿವಾರ ನಡೆದ 'ಪೊಲ್ಯ ಪ್ರೀಮಿಯರ್ ಲೀಗ್ 2026 ಸೀಸನ್ 3' ಕ್ರಿಕೆಟ್ ಪಂದ್ಯಾಟದಲ್ಲಿ ಮಜೀದ್ ನೇತೃತ್ವದ 'ಪೊಲ್ಯ ಥಂಡರ್ಸ್' ತಂಡವು ಚಾಂಪಿಯನ್ ಆಗಿ ಮೂಡಿಬಂದಿದೆ.
ಫೈನಲ್ ಪಂದ್ಯದಲ್ಲಿ ರಫೀಕ್ ಪಯ್ಯಾರ್ ನೇತೃತ್ವದ 'ಪೊಲ್ಯ ಸ್ಟ್ರೈಕರ್ಸ್'ನ್ನು ಮಣಿಸುವ ಮೂಲಕ 'ಪೊಲ್ಯ ಥಂಡರ್ಸ್' ತಂಡವು ಚಾಂಪಿಯನ್ ಪಟ್ಟವನ್ನು ಮುಡುಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಆಟಗಾರನಾಗಿ 'ಪೊಲ್ಯ ಥಂಡರ್ಸ್' ತಂಡದ ಸಾಹಿಲ್, ಉತ್ತಮ ಬ್ಯಾಟ್ಸ್‌ಮನ್ ಆಗಿ 'ಪೊಲ್ಯ ಸ್ಟ್ರೈಕರ್ಸ್' ತಂಡದ ಸೈಫುಲ್ಲಾ, ಉತ್ತಮ ಬೌಲರ್ ಆಗಿ 'ಪೊಲ್ಯ ಸ್ಟ್ರೈಕರ್ಸ್' ತಂಡದ ರಫೀಕ್ ಪಯ್ಯಾರ್ ಹಾಗು ಸರಣಿಶ್ರೇಷ್ಠ ಆಟಗಾರನಾಗಿ 'ಪೊಲ್ಯ ಥಂಡರ್ಸ್' ತಂಡದ ಸುಹೈಲ್ ಮೂಡಿಬಂದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಝಾಕ್ ವೈ.ಎಸ್. (SDPI ಮುಖಂಡ), ಹನೀಫ್ ಮುಳೂರು (SDPI ಮುಖಂಡ), ಶೇಕ್ ಮಯ್ಯದ್ದಿ(ಸೇವಾ ಭಾರತ ಸೇವಾ ರತ್ನ, ಕರುನಾಡ ರತ್ನ ಪುರಸ್ಕೃತ ), ರಝಾಕ್ ಬಗ್ಗತೋಟ (ಗ್ರಾಪಂ ಸದಸ್ಯ, ಉಚ್ಚಿಲ), ಇಕ್ಬಾಲ್ ಪಯ್ಯಾರ್(ಸೌದಿ), ಬದ್ರುದ್ದೀನ್ ಪೊಲ್ಯ(ನಾಯಕ, ಗೋಲ್ಡನ್ ಸ್ಟಾರ್ ಕ್ರಿಕೆಟರ್ಸ್ ಉಚ್ಚಿಲ), ನಿಝಾಮ್ ಪೊಲ್ಯ(ಉದ್ಯಮಿ), ವಸಂತ ದೇವಾಡಿಗ(ಮಾಜಿ ಗ್ರಾಪಂ ಸದಸ್ಯ, ಉಚ್ಚಿಲ), ಸಾದಿಕ್ ಪೊಲ್ಯ( ಉದ್ಯಮಿ) ಎಂ.ಬಷೀರ್ ಪೊಲ್ಯ(Sahil Aluminum fabricators ಕಪ್), ಆರಿಫ್ ಖಾಸಿಂ(M.A.Sqare), ಮೊಹಮ್ಮದ್ ಫಾರೂಕ್ (Masjid Pro Management system), ಅಬೂಬಕ್ಕರ್ ಗುರುಪುರ(ಸಮಾಜ ಸೇವಕ), ಆಲಿಯಬ್ಬ ಪೊಲ್ಯ(ಉದ್ಯಮಿ), ಜಯ ಶೆಟ್ಟಿ(ಮುಂಬೈ), ಮಲ್ಲಿಕಾ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಿಸಾರ್ ಪೊಲ್ಯ ನಡೆಸಿಕೊಟ್ಟರು. ಸೌದಿ ಅರೇಬಿಯಾ, ದುಬೈ, ಕತಾರ್, ಕುವೈಟ್ ನಲ್ಲಿರುವ ಪೊಲ್ಯ ಮೂಲದವರ ಸಹಕಾರದಿಂದ ಪಂದ್ಯಾಟವು ಯಶಸ್ವಿಯಾಗಿ ನಡೆಯಿತು.











