ಉಡುಪಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ 2026–27ನೇ ಸಾಲಿನ ಪುರುಷರ ಅಂಡರ್–23 ಟಿ20 ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉಡುಪಿಯ ನಿಶ್ಚಿತ್ ನಾಗರಾಜ್ ಪೈ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ವತಿಯಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಿಶ್ಚಿತ್ ಅವರು ಕರ್ನಾಟಕ ತಂಡಕ್ಕೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ಡಿಸೆಂಬರ್ 1ರಿಂದ 13ರವರೆಗೆ ನಡೆಯಲಿರುವ ಬಿಸಿಸಿಐ ಪುರುಷರ ಅಂಡರ್–23 ಟಿ20 ಟ್ರೋಫಿ ಪಂದ್ಯಾವಳಿಯಲ್ಲಿ ಅವರು ಕರ್ನಾಟಕ ತಂಡದ ಪರ ಆಡಲಿದ್ದಾರೆ.
ಈ ಹಿಂದೆ ಬಿಸಿಸಿಐ ಅಂಡರ್–19 ಕ್ರಿಕೆಟ್ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದ ನಿಶ್ಚಿತ್, ಇದೀಗ ಅಂಡರ್–23 ಕರ್ನಾಟಕ ತಂಡಕ್ಕೆ ಆಯ್ಕೆಯಾಗುವ ಮೂಲಕ ಉಡುಪಿಗೆ ಕೀರ್ತಿ ತಂದಿದ್ದಾರೆ.
ಅವರು ಉಡುಪಿಯ ಕೆ. ನಾಗರಾಜ್ ಪೈ ಮತ್ತು ಉಜ್ವಲ್ ಕಿರಣ್ ದಂಪತಿಯ ಪುತ್ರ.
