ಮಾತನಾಡಲು ಕರೆದು ವಿದ್ಯಾರ್ಥಿನಿಯನ್ನು ಇರಿದು ಕೊಂದ ಪ್ರಿಯಕರ!

ಬೆಂಗಳೂರು: ಇಲ್ಲಿನ ಕಾಟನ್‌ಪೇಟೆಯ (Cottonpet) ಮಸ್ತಾನ್‌ ದರ್ಗಾ ಬಳಿಯಿರುವ ರಿಜೆನ್ಸಿ ಇನ್‌ ಲಾಡ್ಜ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ ನಡೆದಿದೆ.

ಕೇರಳ ಮೂಲದ ಗಂಗಾ ಕೊಲೆಯಾದ ನರ್ಸಿಂಗ್‌ ವಿದ್ಯಾರ್ಥಿನಿ. ಆಕೆಯ ಪ್ರಿಯಕರ ಗೋಕುಲ್‌ ಕೃಷ್ಣನೇ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 

ಕೇರಳದ ಅಡೂರು ಮೂಲದ ಗಂಗಾ ಮತ್ತು ಗೋಕುಲ್‌ ಕೃಷ್ಣ ಇಬ್ಬರೂ ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಇತ್ತೀಚೆಗೆ ಗಂಗಾ, ಗೋಕುಲ್‌ ಕೃಷ್ಣನನ್ನು ನಿರ್ಲಕ್ಷಿಸುತ್ತಿದ್ದಳು. ಇದೇ ವಿಚಾರವಾಗಿ ಮಾತುಕತೆ ನಡೆಸಲು ಇಬ್ಬರೂ ಕಾಟನ್‌ಪೇಟೆಯ ಲಾಡ್ಜ್‌ಗೆ ಬಂದಿದ್ದರು. ನಿನ್ನೆ ಬೆಳಗ್ಗೆ ಸುಮಾರು 10 ಗಂಟೆಗೆ ಲಾಡ್ಜ್‌ಗೆ ಬಂದಿದ್ದ ಇಬ್ಬರು, ಇಂದು ಬೆಳಗ್ಗೆ 10 ಗಂಟೆಗೆ ಚೆಕ್‌ಔಟ್‌ ಆಗಬೇಕಿತ್ತು. ಈ ಮಧ್ಯೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. 

ಈ ವೇಳೆ ಆಕ್ರೋಶಗೊಂಡ ಗೋಕುಲ್‌ ಕೃಷ್ಣ, ಗಂಗಾಳಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾಟನ್‌ಪೇಟೆ ಪೊಲೀಸರು ಆರೋಪಿ ಗೋಕುಲ್‌ ಕೃಷ್ಣನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.