ಹೆಬ್ರಿ: ಗಾಂಜಾ, ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ

ಹೆಬ್ರಿ: ಗಾಂಜಾ, ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ

ಉಡುಪಿ: ಗಾಂಜಾ ಸೇವನೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಹೆಬ್ರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ತೇಜಸ್, ಪ್ರಜ್ವಲ್, ಪ್ರವೀಣ್ ಬಂಧಿತ ಆರೋಪಿಗಳು. ಇವರು ಗಾಂಜಾ ಮಾರಾಟ ಮತ್ತು ಸಂಘಟಿತವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಮೂವರನ್ನು ಮೇ 19ರಂದು ಬೆಳಗಿನ ಜಾವ ಬೆಳ್ಳಂಜೆ ಗ್ರಾಮ ತುಂಬೆಜಡ್ಡು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 89,000ರೂ. ನಗದು ಹಣ, 8 ಮೊಬೈಲ್ ಪೋನ್‌ಗಳು, 7 ಎಟಿಎಂ ಕಾರ್ಡಗಳು, 3 ಸಿಮ್ ಕಾರ್ಡಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾವನ್ನು ಪೊಲೀಸರರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article