ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್'ನಲ್ಲಿ ಈ ಬಾರಿಯ ಸಿಬಿಎಸ್ಇ 10ನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್'ನಲ್ಲಿ ಈ ಬಾರಿಯ ಸಿಬಿಎಸ್ಇ 10ನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಕಾಪು: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲೊಂದಾದ ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್'ನಲ್ಲಿ ಈ ಬಾರಿಯ ಸಿಬಿಎಸ್ಇ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್)ಯ 2024 -25ನೇ ಸಾಲಿನ 10ನೇ ತರಗತಿಯಲ್ಲಿ ಉತ್ತಮ ಸಾಧನೆಗೈದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚಿಗೆ ಆಯೋಜಿಸಲಾಗಿತ್ತು.





ಈ ಬಾರಿಯ ಫಲಿತಾಂಶದಲ್ಲಿ ಶೇಕಡ 100% ಫಲಿತಾಂಶ ಸಾಧಿಸುವ ಮೂಲಕ ಸಾಧನೆ ಮೆರೆದಿರುವ ಕ್ರೆಸೆಂಟ್ ಶಾಲೆಯ ಆಡಳಿತ ಮಂಡಳಿಯಿಂದಲೇ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಬಾರಿ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿನಿ ಆಯೇಷಾ ಸಮ್ರ 500ರಲ್ಲಿ 479(96%) ಅಂಕ ಗಳಿಸುವ ಮೂಲಕ ಶಾಲೆಗೇ ಪ್ರಥಮ ಎನಿಸಿಕೊಂಡಿದ್ದಾರೆ.  ಜೊತೆಗೆ ಸಂಸ್ಥೆಯ 35 ಮಂದಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಅದರಲ್ಲಿ 8 ಮಂದಿ ಉನ್ನತ ದರ್ಜೆ, 25 ಮಂದಿ ಪ್ರಥಮ ದರ್ಜೆಯಲ್ಲಿ, 2 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇಕಡ 100% ಫಲಿತಾಂಶ ತಂದುಕೊಟ್ಟಿದ್ದು, ಇದು ಶಾಲೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ.

ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಶಂಶುದ್ದೀನ್ ಯೂಸುಫ್ ಸಾಹೇಬ್, ವ್ಯವಸ್ಥಾಪಕ ನಿರ್ದೇಶಕಿ ಶನಾಝ್ ಬೇಗಂ, ಕಾರ್ಯದರ್ಶಿ ಆಸಿಫ್ ಶಂಶುದ್ದೀನ್, ಪ್ರಾಂಶುಪಾಲ ಅಕ್ಬರ್ ಅಲಿ, ಉಪ ಪ್ರಾಂಶುಪಾಲ ಗುರುದತ್ತ್  ಹಾಗೂ ಶಾಲೆಯ ಶಿಕ್ಷಕ ವೃಂದ ಸನ್ಮಾನಿಸಿದರು. ಈ ವೇಳೆ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.


Ads on article

Advertise in articles 1

advertising articles 2

Advertise under the article