ಬೆಳ್ತಂಗಡಿ ಬಂಗ್ಲೆಗುಡ್ಡೆಯಲ್ಲಿ SIT ಶೋಧದ ವೇಳೆ ಸಿಕ್ಕ ಅಸ್ಥಿಪಂಜರದ ಬಳಿ ಐಡಿ ಕಾರ್ಡ್ ಪತ್ತೆ! ವ್ಯಕ್ತಿ ರಹಸ್ಯ ಬಯಲಿಗೆ...
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರ, ತಲೆ ಬುರುಡೆ ಹಾಗೂ ಮೂಳೆಗಳ ಯಾರದ್ದು ಎಂಬ ಪ್ರಶ್ನೆ ಮೂಡಿದ್ದು, ಹೀಗಿರುವಾಗ ಬುರುಡೆ ಮತ್ತು ಅಸ್ಥಿಪಂಜರದ ಬಳಿ ಒಂದು ಐಡಿ ಕಾರ್ಡ್ ಸಿಕ್ಕಿದ್ದು, ಅದು ಯು.ಬಿ.ಅಯ್ಯಪ್ಪ ಎಂಬುವರ ಐಟಿ ಕಾರ್ಡ್ ಎನ್ನುವುದು ಪತ್ತೆಯಾಗಿದೆ ಎನ್ನಲಾಗಿದೆ.
ಕೊಡುಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ (70) ಎಂಬವರ ಅಸ್ಥಿಪಂಜರ ಎಂದು ಎಸ್.ಐ.ಟಿ ತಿಳಿಸಿದ್ದು, ಅಸ್ಥಿಪಂಜರದ ಜೊತೆ ಇದ್ದ ಐಡಿ ಕಾರ್ಡ್ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐಡಿ ಕಾರ್ಡ್ ಸಮೀಪ ಪತ್ತೆಯಾದ ಮೃತದೇಹ ಅವರದ್ದೇ ಆಗಿರಬಹುದು ಎಂದು ಎಸ್.ಐ.ಟಿ ತಂಡ ಅನುಮಾನಿ ಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾರಂಭಿಸಿದೆ.
ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋದ ಅಯ್ಯಪ್ಪ ನಾಪತ್ತೆಯಾದ ಬಗ್ಗೆ ಕಟ್ಟು ಪೊಲೀಸ್ ಠಾಣೆಯಲ್ಲಿ ಕುಟುಂಬ ಸದಸ್ಯರು ಪ್ರಕರಣ ದಾಖಲಿಸಿದ್ದರು ಆದರೆ ಅವರ ಬಗ್ಗೆ ಯಾವುದೇ ಸುಳಿವುಗಳು ಲಭಿಸಿರಲಿಲ್ಲ.
ಇದೀಗ ಬರೆ ತಲೆ ಬುರುಡೆ ಹಾಗು ಎಲುಬುಗಳು ಮಾತ್ರ ಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಇದು ಅವರದ್ದೇ ಮೃತದೇಹವೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದಿಂದಲೇ ಪತ್ತೆಯಾಗಬೇಕಾಗಿದೆ.