ಬಹರೈನ್‌ನಲ್ಲಿ ಉಡುಪಿ ದೊಡ್ಡನಗುಡ್ಡೆ ನಿವಾಸಿ ಅಬ್ದುಲ್ ಕರೀಮ್ ನಿಧನ



ಉಡುಪಿ:  ಬಹರೈನ್‌ನಲ್ಲಿ ಉದ್ಯೋಗ ಮಾಡಿಕೊಂಡಿದ್ದ ಮೂಲತಃ ದೊಡ್ಡನಗುಡ್ಡೆ ನಿವಾಸಿ ಅಬ್ದುಲ್ ಕರೀಮ್ ಉಡುಪಿ(62) ಅವರು  ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ಬಹರೈನ್ ನಲ್ಲಿ  ನಿಧನರಾಗಿದ್ದಾರೆ. 

ಇವರು ಪೂಂಜಲಕಟ್ಟೆಯ ಮರ್ಹೂಮ್ ಹಸನಬ್ಬ ಅವರ ಪುತ್ರರಾಗಿದ್ದು, ಪತ್ನಿ, ಓರ್ವ ಪುತ್ರ ಹಾಗು ಪುತ್ರಿಯನ್ನು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಶನಿವಾರ ಬಹರೈನ್‌ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಬ್ದುಲ್ ಕರೀಮ್ ಅವರ ನಿಧನಕ್ಕೆ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಸೇರಿದಂತೆ ಹಲವಾರು ಮಂದಿ ಗಣ್ಯರು ಕಂಬನಿ ಮಿಡಿದಿದ್ದಾರೆ.