ಮಂಗಳೂರು: ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರೂ , ಈ ಹಿಂದೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ ನಾಯಕ , ಪ್ರಬಲ ಸಮುದಾಯವಾದ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಈಶ್ವರ್ ಬಿ ಖಂಡ್ರೆ ಅವರಿಗೆ ನೂತನವಾಗಿ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಉನ್ನತ ಪದವಿ ದೊರೆಯುವ ವಿಶ್ವಾಸ ಇದೆ ಎಂದು ಖಂಡ್ರೆ ಅವರ ಅಭಿಮಾನಿ , ಕರಾವಳಿ ಭಾಗದ ಆಪ್ತರಾಗಿರುವ ಕೆಪಿಸಿಸಿ ಸಂಘಟಕ , ಕಡಲ ತೀರಾ ವಲಯ ನಿರ್ವಹಣಾ ಸಮಿತಿ ಸದಸ್ಯ ಹಾಗೂ ಖಂಡ್ರೆ ಅಭಿಮಾನಿ ಸಂಘವಾದ ಟೀಂ ಖಂಡ್ರೆ ವಿದ್ ಇಂಟಿಗ್ರಿಟಿಯ ಸ್ಥಾಪಕ ಅಧ್ಯಕ್ಷ ಎ ಕೆ ಅನ್ಸಾಫ್ ರವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಶ್ವರ್ ಖಂಡ್ರೆಯವರು ಸಂಯಮವನ್ನು ಮೈಗೂಡಿಸಿಕೊಂಡ ಅಗಾಧ ಜ್ಙಾನಿ ಆಗಿದ್ದಾರೆ , ಸವಾಲುಗಳನ್ನು ಮೆಟ್ಟಿ ಸಾಧಿಸುವ ಛಲಗಾರ..ತನ್ನ ಚುಕ್ಕಾಣಿಯಲ್ಲಿ ಇದ್ದ ಅರಣ್ಯ ಇಲಾಖೆಯನ್ನು ಕರ್ನಾಟಕದ ಇತಿಹಾಸದಲ್ಲೇ ದಾಖಲೆ ಎಂಬಂತೆ ಪ್ರಗತಿಯಲ್ಲಿ ಕೊಂಡೊಯ್ದಿದ್ದಾರೆ. ತನ್ನ ಕರಾರುವಕ್ ತೀರ್ಮಾನಗಳ ಮೂಲಕ ರಾಜ್ಯ ಅರಣ್ಯ ಇಲಾಖೆಯ ಕಾರ್ಯಕ್ರಮಗಳನ್ನು ನೆರೆಯ ಆಂಧ್ರ ಸಹಿತ ಇತರ ರಾಜ್ಯವೂ ಆಳವಡಿಸಿಕೊಂಡಿರುವುದು ಖಂಡ್ರೆ ಅವರ ಆಡಳಿತದ ಯಶಸ್ಸಿಗೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
"ಒನ್ಸ್ ಎ ಫಾರೆಸ್ಟ್ ಈಸ್ ಆಲ್ ವೇಸ್ ಫಾರೆಸ್ಟ್" ಎಂಬ ಸಿದ್ದಾಂತವನ್ನು ಎತ್ತಿ ಹಿಡಿದು ಭೂಗಳ್ಳರ ಕೆಂಗಣ್ಣಿಗೆ ಗುರಿಯಾಗಿದ್ದ ಲಕ್ಷಾಂತರ ಎಕ್ರೆ ಜಮೀನುಗಳನ್ನು ಖಂಡ್ರೆಯವರು ಮರು ವಶಪಡಿಸಿದ್ದಾರೆ. ಮಾತ್ರವಲ್ಲಾ ರಾಜ್ಯದಲ್ಲಿ ಕ್ಷೀಣಿಸಿದ್ದ ಹಸಿರು ಹೋದಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿರುವ ಕೀರ್ತಿಯನ್ನು ಪಡೆದಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂಧಿಗಳ ಹಿತವನ್ನು ಬಯಸಿ ಅವರಿಗೆ ರಕ್ಷಣಾ ಸಾಧನ ಹಾಗೂ ವಿಮೆಯನ್ನು ಘೋಷಿಸಿರುವುದು ಖಂಡ್ರೆಯವರ ಮಾನವೀಯ ಮೌಲ್ಯಕ್ಕೆ ಹಿಡಿದ ಉದಾಹರಣೆಯಾಗಿದೆ.
ಮಾನವ - ವನ್ಯ ಸಂಘರ್ಷ್ಕಕ್ಕೆ ಅಂತ್ಯ ಹಾಡಲು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿ ಅದರಲ್ಲಿ ಈ ಹಿಂದಿನ ಅವಧಿಗಳನ್ನು ತುಲನೆ ಮಾಡಿದರೇ ಖಂಡ್ರೆಯವರು ಬಹುಪಾಲು ಯಶಸ್ಸು ಆಗಿದ್ದಾರೆ ಎಂಬವುದನ್ನು ಅಂಕಿ ಅಂಶಗಳೇ ತೋರಿಸುತ್ತದೆ ಎಂದ ಯುವ ಮುಖಂಡ ಎ ಕೆ ಅನ್ಸಾಫ್ ರವರು ಖಂಡ್ರೆ ಅವರ ಆಡಳಿತ ಬದ್ದತೆ ಹಾಗೂ ಘನವ್ಯಕ್ತಿತ್ವ ಮತ್ತು ಅನುಭವದ ಆಧಾರದ ಮೇಲೆ ಅವರಿಗೆ ಸೂಕ್ತ ಸ್ಥಾನಮಾನವನ್ನು ಹೈಕಮಾಂಡ್ ನೀಡುವ ವಿಶ್ವಾಸ ಇದೆ ಆ ಮೂಲಕ ವಿಶ್ವಗುರು ಬಸವಣ್ಣನವರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಉದಾತ್ತ ಸೂತ್ರದಡಿ ಕಾರ್ಯನಿರ್ವಹಿಸುವ ಅನುಭವಿ ಖಂಡ್ರೆ ಅವರ ನಿಷ್ಪಕ್ಷಪಾತ ಹಾಗೂ ದಕ್ಷ ಆಡಳಿತ ವೈಖರಿಯಿಂದ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರಕಾರಕ್ಕೆ ಶ್ರೇಯಸ್ಸು ಸಂದಾಯ ಆಗಲಿದೆ ಎಂದಿದ್ದಾರೆ.
