ಉಡುಪಿ: ಆಕಾಶದಲ್ಲಿ ಬುಧವಾರ ಮಧ್ಯಾಹ್ನ ಸೂರ್ಯನ ಸುತ್ತ ವೃತ್ತಾಕಾರದ ಬೆಳಕಿನ ವಲಯವೊಂದು ಕಾಣಿಸಿಕೊಂಡು ಸಾರ್ವಜನಿಕರ ಗಮನ ಸೆಳೆಯಿತು.
ಸೂರ್ಯನ ಸುತ್ತ ಕಾಣಿಸಿಕೊಂಡ ಈ ವೃತ್ತಾಕಾರದ ಪ್ರಕಾಶಮಾನ ವಲಯವನ್ನು ‘ಸನ್ ಹ್ಯಾಲೋ’ (Sun Halo) ಎಂದು ಕರೆಯಲಾಗುತ್ತದೆ. ವಾತಾವರಣದ ಮೇಲ್ಭಾಗದಲ್ಲಿರುವ ಸಣ್ಣ ಹಿಮದ ಸ್ಫಟಿಕಗಳ ಮೂಲಕ ಸೂರ್ಯನ ಬೆಳಕು ವಕ್ರೀಭವನಗೊಂಡು ಈ ರೀತಿಯ ವಲಯ ಸೃಷ್ಟಿಯಾಗುತ್ತದೆ.
ಕೆಲಕಾಲ ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸಿದ ಈ ಅಪರೂಪದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ಗಳಲ್ಲಿ ಸೆರೆಹಿಡಿದುಕೊಂಡರು. ಆಕಾಶದಲ್ಲಿ ಸೂರ್ಯನ ಸುತ್ತ ದೊಡ್ಡ ವೃತ್ತದಂತೆ ಗೋಚರಿಸಿದ ದೃಶ್ಯ ಕುತೂಹಲಕ್ಕೆ ಕಾರಣವಾಯಿತು.
