ಪಾಕ್ ಉಗ್ರ ಸಂಘಟನೆ ಜೊತೆ ನಂಟು ; ಬೀದರ್‌ನ ಭಾಲ್ಕಿಯಲ್ಲಿ ವಿಶಾಲಕುಮಾರ್ ಮೇತ್ರೆ ಬಂಧನ; ಈ ಬಗ್ಗೆ ಚಿಕ್ಕಮ್ಮ ಹೇಳಿದ್ದೇನು...?

ಬೀದರ್: ಭಯೋತ್ಪಾದಕ ಸಂಘಟನೆಯ ಜೊತೆ ನಂಟಿನ ಆರೋಪದ ಮೇಲೆ ಬೀದರ್‌ನ ಭಾಲ್ಕಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಶಂಕಿತನನ್ನು ಬಂಧಿಸಿದ್ದಾರೆ.

ಬಂಧಿತ ಶಂಕಿತನನ್ನು ಏಣಕೂರು ಗ್ರಾಮದ ವಿಶಾಲಕುಮಾರ್ ಮೇತ್ರೆ ಎಂತಂದು ಗುರುತಿಸಲಾಗಿದೆ. 

ಪಾಕ್ ಮೂಲದ ನಿಷೇಧಿತ ಸಂಘಟನೆ ಜೊತೆ ವಾಟ್ಸಾಪ್ ಲಿಂಕ್ ಪತ್ತೆಯಾದ ಹಿನ್ನೆಲೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆರೋಪಿ ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಅಂಶ ಬಯಲಾಗಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಇದೇ ವಿಚಾರವಾಗಿ ಆರೋಪಿಯ ಚಿಕ್ಕಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 2 ದಿನಗಳ ಹಿಂದೆ ಮನೆಗೆ ಬಂದ ಪೊಲೀಸರು ಪರಿಶೀಲನೆ ಮಾಡಿ, ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರ ಜೊತೆ ನನ್ನ ಮಗನಿಗೆ ನಂಟು ಇದೆ ಎಂಬುದು ಬರೀ ಸುಳ್ಳು ಅರೋಪ. ಆಸ್ತಿ ವಿಚಾರಕ್ಕೆ ತಂದೆ-ತಾಯಿ ನಡುವೆ ಜಗಳ ಇದೆ. ಬೇಕಂತಲೇ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.