ಸ್ಟಿಂಗ್‌ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್‌ನವರೇ; ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್‌ಗಳು ಅವರೇ ಅಂತ ಗೊತ್ತಾಗುತ್ತೆ: ಸಿ.ಟಿ.ರವಿ

ಬೆಂಗಳೂರು: ಸ್ಟಿಂಗ್‌ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್‌ನವರೇ. ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್‌ಗಳು ಅವರೇ ಅಂತ ಗೊತ್ತಾಗುತ್ತೆ ಎಂದು ಮಾಜಿ ಸಚಿವ ಸಿಟಿ ರವಿ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಸ್ಟಿಂಗ್ ಅಂದ ಮೇಲೆ ಯಾರಾದ್ರು ತನಿಖೆ ನಡೆಸಬೇಕಲ್ಲ? ಸಿಬಿಐ (CBI) ತನಿಖೆ ನಡೆಸಿದರೆ ಸೂಕ್ತ. ಆದರೆ ಸ್ಟಿಂಗ್ ಆಪರೇಷನ್ ಬಗ್ಗೆ ಗೃಹ ಸಚಿವರು ಏನು ಮಾತಾನಾಡುತ್ತಿಲ್ಲ. ಎಲ್ಲಾ ತಿಳಿದು ಅವರು ಏಕೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಮರ್ಯಾದೆ ಹೋಗುತ್ತೆ ಅಂತಾ ಮಾತನಾಡುತ್ತಿಲ್ಲ. ಗೃಹ ಸಚಿವರು ಇದರ ಬಗ್ಗೆ ಮಾತನಾಡಬೇಕು. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದ ಮೇಲೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಇದರ ಸೂತ್ರದಾರಿ ಹಾಗೂ ಪಾತ್ರದಾರಿಗಳು ಎಲ್ಲರೂ ಕಾಂಗ್ರೆಸ್‌ನವರೇ ಇದ್ದಾರೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ‌ಮಾಸ್‌ ಲೀಡರ್‌. ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ‌ ಬಳಿಕ ಸಿದ್ದರಾಮಯ್ಯ ‌ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ‌ ಎಂದು ಅನಿಸುತ್ತಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 3 ವರ್ಷದಿಂದ ಗ್ಯಾರಂಟಿ ಮೂಲಕ ಬಂದ ಸರ್ಕಾರ. ಆದರೆ ಇದೀಗ ಹಗರಣಗಳ ಗ್ಯಾರಂಟಿಯಾಗಿದೆ. ರಾಜ್ಯದಲ್ಲಿ ಹಗರಣಗಳದೇ ಸದ್ದು ನಡೆಯುತ್ತಿದೆ. ಹೀಗಾಗಿ ಈ ವಿಷಯ ಮುಚ್ಚಿ ಹಾಕಲು ಸ್ಟಿಂಗ್ ಆಪರೇಷನ್ ತಂದಿದ್ದಾರೆ. ಸ್ಟಿಂಗ್ ಆಪರೇಷನ್ ನೈಜ್ಯ ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲರೂ ಕಾಂಗ್ರೆಸ್‌ನವರೇ. ಹೀರೋ, ಹೀರೋಯಿನ್ ಸೇರಿ ಸೈಡ್ ಡೈರೆಕ್ಟರ್‌ಗಳು ಕಾಂಗ್ರೆಸ್‌ನವರೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಸ್ಟಿಂಗ್ ಆಪರೇಷನ್ ಬಗ್ಗೆ ಇಂದು ಸಿಎಂ ಡಿಕೆಶಿ ಅವರಿಂದ ಸರಣಿ ಸಭೆ ಬಗ್ಗೆ ಮಾತನಾಡಿ, ಹೆಚ್ಚಿನ ಮಾಹಿತಿ ಸಿಎಂ ಅವರಿಗೆ ಗೊತ್ತಿದೆ. ಹೀಗಾಗಿ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಕಾಂಗ್ರೆಸ್‌ನವರ ಬ್ರೈನ್ ಮ್ಯಾಫಿಂಗ್ ಮಾಡಬೇಕಾಗಿದೆ. ಬೇಕಿದ್ದರೆ ಬಿಜೆಯಿಯವರದ್ದು ಬ್ರೈನ್‌ ಮ್ಯಾಪಿಂಗ್ ಮಾಡಲಿ.

ಸ್ಟಿಂಗ್ ಬಗ್ಗೆ ಡಿಕೆ.ಶಿವಕುಮಾರ್ ಅವರು ಮೊದಲು ಮಾತನಾಡಿದ್ದು. ಹೀಗಾಗಿ ಮೊದಲು ಡಿಕೆಶಿ ಅವರ ಬ್ರೈನ್ ಮ್ಯಾಪಿಂಗ್ ಮಾಡಬೇಕಾಗಿದೆ. ಸ್ಟಿಂಗ್ ಆಪರೇಷನ್ ಇದೀಗ ಅವರ ಕೊರಳಿಗೆ ಸುತ್ತುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೆಲವೇ ಜನ ಮಾಸ್‌ ಲೀಡರ್‌ಗಳಿದ್ದಾರೆ. ಬಿ.ಎಸ್‌.ಯಡಿಯೂರಪ್ಪ, ಎಚ್.ಡಿ.ದೇವೇಗೌಡರು, ಸಿದ್ದರಾಮಯ್ಯ, ಹಿಂದೆ ಇದ್ದ ಎಸ್‌.ಬಂಗಾರಪ್ಪ, ದೇವರಾಜ ಅರಸು, ವೀರೇಂದ್ರ ಪಾಟೀಲ ಅವರೆಲ್ಲ ಆ ಸಾಲಿಗೆ ಸೇರುತ್ತಾರೆ.

ಇಂಥ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದರೆ ಕಾಂಗ್ರೆಸ್‌ನವರು ಏನು ಮಾತನಾಡುತ್ತಿದ್ದರು? ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್‌ ಖರ್ಗೆ ಏನು ಮಾತನಾಡುತ್ತಿದ್ದರು?’ ಎಂದು ಪ್ರಶ್ನಿಸಿದರು.