ಭಾರತದಲ್ಲಿ ಈ ವರೆಗೆ ಒಮಿ#ಕ್ರಾನ್ ಉಪತಳಿ BF.7ನ 3 ಪ್ರಕರಣಗಳು ಪತ್ತೆ; ದೇಶದಲ್ಲಿ ಕೋವಿಡ್ ಹೆಚ್ಚಾಗಿಲ್ಲ-ರೂಪಾಂತರಿಗಳನ್ನು ಪತ್ತೆಗೆ ನಿಗಾ ವಹಿಸಿ: ಕೇಂದ್ರ ಆರೋಗ್ಯ ಸಚಿವ
ನವದೆಹಲಿ(Headlines Kannada): ಭಾರತದಲ್ಲಿ ಈ ವರೆಗೆ ಒಮಿ#ಕ್ರಾನ್ ಉಪತಳಿ BF.7ನ 3 ಪ್ರಕರಣಗಳು ಪತ್ತೆಯಾಗಿವೆ. 2 ಪ್ರಕರಣ ಗುಜರಾತಿನಲ್ಲಿ ಪತ್ತೆಯಾಗಿದ್ದು, 1 ಒಡಿಶಾದಲ್ಲಿ ಪತ್ತೆಯಾಗಿದೆ ಎಂದು ಪಿಟಿಐ ವರದಿ ಹೇಳಿದೆ.
ಚೀನಾದಲ್ಲಿ ಕೋವಿಡ್ ಪ್ರಕರಣಗಳು (Covid-19) ಉ#ಲ್ಬಣವಾದ ಬೆನ್ನಲ್ಲೇ ದೇಶದಲ್ಲಿ ಹೊಸ ಪ್ರಕರಣ ಪತ್ತೆಯಾಗಿದೆ. ಗುಜರಾತಿನಲ್ಲಿ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಒಮಿ#ಕ್ರಾನ್ ಉಪತಳಿ BF.7 ಪತ್ತೆಯಾಗಿರುವುದಾಗಿ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಹೇಳಿತ್ತು.
ಬುಧವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಪರಿಶೀಲನಾ ಸಭೆ ನಡೆಸಿದ್ದು, ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಹೆಚ್ಚಳವೇನೂ ಆಗಿಲ್ಲ. ಆದರೆ ಈಗಿರುವ ಮತ್ತು ಮುಂದೆ ಬರುವ ರೂಪಾಂತರಿಗಳನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ನಿಗಾ ವಹಿಸ ಬೇಕು ಎಂದು ಹೇಳಿದ್ದಾರೆ.
ಚೀನಾದಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ಹೆಚ್ಚಿನದ್ದು BF.7 ಉಪತಳಿಯಿಂದಾಗಿ ಉಂಟಾದ ಕೊರೋನಾ ಪ್ರಕರಣಗಳಾಗಿವೆ. ಬೀಜಿಂಗ್ ಹಾಗು ಇನ್ನಿತರ ನಗರಗಳಲ್ಲಿಯೂ ಕೋವಿಡ್ ಉಲ್ಬಣಕ್ಕೆ ಇದೇ ಉಪತಳಿ ಕಾರಣವಾಗಿದೆ ಎಂದು ಹೇಳಲಾಗಿದೆ. ಚೀನಾದಲ್ಲಿ BF.7 ನ ಹೆಚ್ಚಿನ ಪ್ರಸರಣವು ಹಿಂದಿನ ಸೋಂಕಿನಿಂದ ಚೀನೀ ಜನಸಂಖ್ಯೆಯಲ್ಲಿ ಕಡಿಮೆ ಮಟ್ಟದ ರೋಗನಿರೋಧಕ ಶಕ್ತಿ ಹಾಗು ಪ್ರಾಯಶಃ ವ್ಯಾಕ್ಸಿನೇಷನ್ ಕೂಡ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.