ಅಬುಧಾಬಿ ರೂವಿಸ್ ನಗರದಲ್ಲಿ ಉಡುಪಿ ಪುತ್ತಿಗೆ ಶ್ರೀಗಳಿಗೆ ಭವ್ಯ ಸ್ವಾಗತ: ನೂರಾರು ಭಕ್ತರಿಗೆ ಭಗವದ್ಗೀತಾ ಲೇಖನ ದೀಕ್ಷಾ ಪ್ರದಾನ
Wednesday, December 21, 2022
ಅಬುಧಾಬಿ(Headlines Kannada): ಪರ್ಯಾಯ ಸಂಚಾರ ನಿಮಿತ್ತ ಆಗಮಿಸಿದ ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಅಬುಧಾಬಿ ರೂವಿಸ್ ನಗರದಲ್ಲಿ ಭವ್ಯ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ನೆರೆದ ನೂರಾರು ಭಕ್ತರಿಗೆ ಪುತ್ತಿಗೆ ಶ್ರೀಗಳು, ಭಗವದ್ಗೀತಾ ಲೇಖನ ದೀಕ್ಷಾ ಪ್ರದಾನ ಮಾಡಿದರು. ಉಡುಪಿಯ ಬ್ರಹ್ಮಾವರದ ಅಮ್ಮುಂಜೆ ಉದಯ ನಾಯಕ ಮೊದಲ ದೀಕ್ಷಾ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಭವ್ಯ ಗೌರವಾರ್ಪಣೆ ಮಾಡಲಾಯಿತು. ಉಡುಪಿಯ ಶ್ರೀಪುತ್ತಿಗೆ ಶ್ರೀಗಳ ಆಗಮನದಿಂದ ರೂವಿಸ್ ನಗರದಲ್ಲಿ ಉತ್ಸವದ ವಾತಾವರಣ ನಿರ್ಮಾಣಗೊಂಡಿದೆ. ರೂವಿಸ್ ನಗರ ಅಬುದಾಭಿಯ ಪಕ್ಕದ ನಗರವಾಗಿದ್ದು, ಸೌದಿ ದೇಶದ ಗಡಿಯಲ್ಲಿದೆ. ಇಲ್ಲಿ ಸಾವಿರಾರು ಮಂದಿ ಭಾರತೀಯರು ನೆಲೆಸಿದ್ದಾರೆ.